- ಚಿತ್ರದುರ್ಗ : ತುಮಕೂರು-ಚಿತ್ರದುರ್ಗ- ದಾವಣಗೆರೆ ನೇರ ರೈಲ್ವೆ ಯೋಜನೆ; ಶೀಘ್ರ ಕಾಮಗಾರಿ ಆರಂಭ – ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
- ಮೈಸೂರು: ನಿಫಾ ವೈರಸ್ ಭೀತಿ ಹಿನ್ನೆಲೆ, ರಾಜ್ಯದ ಗಡಿ ಭಾಗದಲ್ಲಿ ಕಟ್ಟೆಚ್ಚರ – ಜಿಲ್ಲಾಧಿಕಾರಿ ಬಗಾದಿ ಗೌತಮ್
- “ನಾಡಿನ ಸಮಸ್ತ ನಾಗರಿಕ ಬಂಧುಗಳಿಗೆ ಸ್ವರ್ಣಗೌರಿ ಹಬ್ಬದ ಹೃತ್ಪೂರ್ವಕ ಶುಭಕಾಮನೆಗಳು. ಆ ಜಗನ್ಮಾತೆಯು ಎಲ್ಲರಿಗೂ ಸಂತೋಷ, ಸಮೃದ್ಧಿ, ಆರೋಗ್ಯ ಭಾಗ್ಯಗಳನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ. ಸರ್ಕಾರದ ಸುರಕ್ಷತಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ, ಸುರಕ್ಷಿತವಾಗಿ ಹಬ್ಬವನ್ನು ಆಚರಿಸಿ “_ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
- ಸೆಪ್ಟೆಂಬರ್ 9 ಕ್ಷೀರ ಕ್ರಾಂತಿಯ ಪಿತಾಮಹಾ ವರ್ಗೀಸ್ ಕುರಿಯನ್ ಪುಣ್ಯತಿಥಿಯಾಗಿದೆ. ಇವರು ಪ್ರಸಿದ್ದ ಅಮುಲ್ ಡೈರಿ ಸಂಸ್ಥಾಪಕರಾಗಿ, ಭಾರತವನ್ನು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ದೇಶವನ್ನಾಗಿ ಮಾಡಿದ ಹೆಮ್ಮೆ ಇವರದ್ದು. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಸ್ಥಾಪನೆ ಕಾರಣಕರ್ತರು. ಇವರಿಗೆ ಪದ್ಮ ವಿಭೂಷಣ, ವಿಶ್ವ ಆಹಾರ ಪ್ರಶಸ್ತಿ ಮತ್ತು ಮ್ಯಾಗ್ಸೇಸೆ ಸೇರಿ ಹಲವು ಪ್ರಶಸ್ತಿಗಳು ಲಭಿಸಿವೆ.
- ಭಾರತ 2021ರ ಬ್ರಿಕ್ಸ್ ರಾಷ್ಟ್ರಗಳ ಅಧ್ಯಕ್ಷತೆ ವಹಿಸಿರುವ ಭಾಗವಾಗಿ ಪ್ರಧಾನಿ ನರೇಂದ್ರಮೋದಿ ಇಂದು ವರ್ಚುವಲ್ ಮಾದರಿಯಲ್ಲಿ ನಡೆಯಲಿರುವ 13ನೇ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
- ಯುಎಇ ನಲ್ಲಿ ಅಕ್ಟೋಬರ್ 17ರಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ – ಬಿಸಿಸಿಐ, ವಿರಾಟ್ ಕೊಹ್ಲಿ ಸಾರಥ್ಯದ 15 ಸದಸ್ಯರ ತಂಡವನ್ನು ನಿನ್ನೆ ಪ್ರಕಟಿಸಿದೆ.
- “ಪರಿಸರ–ಸ್ನೇಹಿ ಗಣೇಶನ ಮೂರ್ತಿಗಳ ಬಳಕೆಗೆ ಮುಖ್ಯಮಂತ್ರಿಗಳ ಕರೆ; “ಅರಿಶಿಣದಿಂದ ತಯಾರಿಸಿರುವ ಪರಿಸರಸ್ನೇಹಿ ಗಣೇಶನ ಮೂರ್ತಿಯನ್ನೇ ಮನೆಯಲ್ಲಿ ಪೂಜೆಗೆ ಬಳಸೋಣ. ನಾಗರಿಕರ ಅನುಕೂಲಕ್ಕಾಗಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹತ್ತು ಲಕ್ಷ ಅರಿಶಿಣದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದು, ಅದರ ಸದುಪಯೋಗ ಪಡೆಯೋಣ“_ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
- ಜವಳಿ ವಲಯದಲ್ಲಿ 10 ಸಾವಿರದ 683 ಕೋಟಿ ರೂಪಾಯಿ ಪ್ರೋತ್ಸಾಹಧನ ನೀಡುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ.
- ಅಭಿಮನ್ಯು ಸೇರಿದಂತೆ ಏಳು ಆನೆಗಳ ತಂಡ ಸೆಪ್ಟೆಂಬರ್ 16 ರಂದು ಮೈಸೂರು ಅರಮನೆಗೆ ಆಗಮಿಸಲಿವೆ. ಅಭಿಮನ್ಯು ಸೇರಿ 8 ಆನೆಗಳು ಈ ಬಾರಿಯ ದಸರಾದಲ್ಲಿ ಭಾಗಿಯಾಗಲಿವೆ. ಮೈಸೂರು ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ.
- “ಹೆದ್ದಾರಿ ರಸ್ತೆಗಳಲ್ಲಿ ಸಂಚರಿಸುವಾಗ ಗೇಮ್ ಮತ್ತು ಸಂಗೀತ ಕೇಳುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಹಾಗೂ ವಿಚಲಿತಗೊಂಡು ವಾಹನ ಚಾಲನೆ ಮಾಡಬೇಡಿ. ಇದರಿಂದ ಹೆಚ್ಚು ಅಪಘಾತಗಳು ಸಂಭವಿಸಿ ಸಾವುನೋವುಗಳು ಉಂಟಾಗುತ್ತವೆ. ಸುರಕ್ಷಿತವಾಗಿ ಚಾಲನೆ ಮಾಡಲು ಗೊಂದಲಗಳಿಂದ ದೂರವಿರಿ.”_KSRSA
