ಸಂಪರ್ಕ ಸಚಿವಾಲಯದ ಅಂಚೆ ಇಲಾಖೆಯ ಅಡಿಯಲ್ಲಿ ಬರುವ ಶೇ.100 ರಷ್ಟು ಭಾರತ ಸರ್ಕಾರದ ಸ್ವಾಮ್ಯದ ಘಟಕವಾದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಇಂದು ಸ್ವಸಹಾಯ ಗುಂಪು (ಎಸ್‌ಎಚ್‌ಜಿ) ಉಳಿತಾಯ ಖಾತೆಯನ್ನು ಆರಂಭಿಸುವುದಾಗಿ ಘೋಷಿಸಿದೆ. ಇದು ಗ್ರಾಮೀಣ ಭಾರತದಾದ್ಯಂತ ಮಹಿಳೆಯರ ನೇತೃತ್ವದ ಸ್ವಸಹಾಯ ಗುಂಪುಗಳನ್ನು ಆರ್ಥಿಕ ಸೇರ್ಪಡೆ ಮತ್ತು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ನಿರ್ದಿಷ್ಟ ಕೊಡುಗೆಯಾಗಿದೆ.
ಈ ಬಿಡುಗಡೆಯ ಕುರಿತು ಮಾತನಾಡಿದ ಐಪಿಪಿಬಿಯ ವ್ಯವಸ್ಥಾಪಕ ನಿರ್ದೇಶಕರು (ಎಂಡಿ) ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆರ್ ವಿಶ್ವೇಶ್ವರನ್, ”ಐಪಿಪಿಬಿಯಲ್ಲಿ ಪ್ರತಿಯೊಬ್ಬ ಭಾರತೀಯರಿಗೂ ಬ್ಯಾಂಕಿಂಗ್ ಸೇವೆಗಳನ್ನು ಸರಳ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಮತ್ತು ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವುದು ನಮ್ಮ ಧ್ಯೇಯವಾಗಿದೆ. ಮಹಿಳೆಯರ ನೇತೃತ್ವದ ಸ್ವಸಹಾಯ ಗುಂಪುಗಳಿಗೆ ವಿಶ್ವಾಸಾರ್ಹ ಮತ್ತು ಕಡಿಮೆ ವೆಚ್ಚದಲ್ಲಿ ಬ್ಯಾಂಕಿಂಗ್ ಪರಿಹಾರವನ್ನು ಒದಗಿಸುವ ಮೂಲಕ ಎಸ್‌ಎಚ್‌ಜಿ ಉಳಿತಾಯ ಖಾತೆಯನ್ನು ಒದಗಿಸಲಾಗುವುದು. ಮನೆ ಬಾಗಿಲಿನ ಬ್ಯಾಂಕಿಂಗ್ ಮಾದರಿ ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ಬಳಸಿಕೊಳ್ಳುವ ಮೂಲಕ, ಎಸ್‌ಎಚ್‌ಜಿಗಳು ಸಾಂಸ್ಥಿಕ ಹಣಕಾಸು ಪೂರಕ ವ್ಯವಸ್ಥೆಯಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಲು ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ನಾವು ವ್ಯವಸ್ಥೆಯನ್ನು ಮತ್ತಷ್ಟು ಸಕ್ರಿಯಗೊಳಿಸುವ ಗುರಿ ಹೊಂದಿದ್ದೇವೆ’’ ಎಂದರು.
ಭಾರತದಲ್ಲಿ ಗ್ರಾಮೀಣ ಆರ್ಥಿಕ ಪರಿವರ್ತನೆಯಲ್ಲಿ ಸ್ವಸಹಾಯ ಗುಂಪುಗಳು ಪ್ರಮುಖ ಪಾತ್ರ ವಹಿಸಿವೆ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ (ಎಂ ಒ ಆರ್ ಡಿ) ಅಡಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಬೆಂಬಲಿತ ಕಾರ್ಯಕ್ರಮಗಳಂತಹ ಪ್ರಮುಖ ಉಪಕ್ರಮಗಳೊಂದಿಗೆ ನಿಕಟ ಸಂಬಂಧ ಹೊಂದಿವೆ. ಅಂಚೆ ಇಲಾಖೆಯ (ಡಿಒಪಿ) ಸಾಟಿಯಿಲ್ಲದ ಅಂಚೆ ಜಾಲ ಮತ್ತು ತನ್ನದೇ ಆದ ಡಿಜಿಟಲ್ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮೂಲಕ, ಐಪಿಪಿಬಿ ಮನೆ ಬಾಗಿಲಿನ ಬ್ಯಾಂಕಿಂಗ್ ಸೇವೆಗಳನ್ನು ಡಿಜಿಟಲ್ ಆನ್-ಬೋರ್ಡಿಂಗ್‌ನೊಂದಿಗೆ ಸಂಯೋಜಿಸುವ ಮೂಲಕ ಎಸ್ ಎಚ್ ಜಿಗಳಿಗೆ ಆರ್ಥಿಕ ಲಭ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ, ಇದಕ್ಕೆ ಪೋಸ್ಟ್‌ಮ್ಯಾನ್ (ಅಂಚೆಪೇದೆ) ಮತ್ತು ಗ್ರಾಮೀಣ ಡಾಕ್ ಸೇವಕರ (ಜಿಡಿಎಸ್) ವ್ಯಾಪಕ ಜಾಲದ ಸಹಾಯವಿದೆ.
ಐಪಿಪಿಬಿ ಎಸ್ ಎಚ್ ಜಿ ಉಳಿತಾಯ ಖಾತೆಯನ್ನು ಈ ಕೆಳಗಿನಂತೆ ರೂಪಿಸಲಾಗಿದೆ:
ಎ. ಕೈಗೆಟುಕುವಿಕೆಯನ್ನು ಖಚಿತಪಡಿಸಿಕೊಳ್ಳಲು ಶೂನ್ಯ ಬ್ಯಾಲೆನ್ಸ್, ಶೂನ್ಯ ಶುಲ್ಕದ ಖಾತೆ.
ಬಿ. ಸರಳೀಕೃತ ಆನ್-ಬೋರ್ಡಿಂಗ್‌ಗಾಗಿ ಡಿಜಿಟಲ್ ಆಗಿ ಸಕ್ರಿಯಗೊಳಿಸಲಾಗಿದೆ.
ಸಿ. ಅಂಚೆ ಕಚೇರಿಗಳು ಮತ್ತು ಪೋಸ್ಟ್‌ಮೆನ್/ಗ್ರಾಮೀಣ ಡಾಕ್ ಸೇವಕರ ವಿಶಾಲ ಜಾಲದ ಮೂಲಕ ವಿತರಿಸಲಾಗಿದೆ.
ಪ್ರಮುಖ ವೈಶಿಷ್ಟ್ಯಗಳು:
ಎ. ಕನಿಷ್ಠ ಆರಂಭಿಕ ಠೇವಣಿ ಅಗತ್ಯವಿಲ್ಲ.
ಬಿ. ಮಾಸಿಕ ಸರಾಸರಿ ಬ್ಯಾಲೆನ್ಸ್ (ಎಂಎಬಿ) ಅಗತ್ಯವಿಲ್ಲ.
ಸಿ. ₹2,00,000 ಕೋಟಿ ರೂ. ಗರಿಷ್ಠ ಬ್ಯಾಲೆನ್ಸ್ ಮಿತಿ.
ಡಿ. ಅನ್ವಯವಾಗುವ ಉಳಿತಾಯ ದರಗಳ ಪ್ರಕಾರ ತ್ರೈಮಾಸಿಕ ಬಡ್ಡಿ ಪಾವತಿಗಳು.
ಇ. ನಗದು ಠೇವಣಿ ಮತ್ತು ಹಿಂಪಡೆಯುವಿಕೆಗೆ ಶೂನ್ಯ ಶುಲ್ಕಗಳು.
ಎಫ್. ತಿಂಗಳಿಗೆ ಒಂದು ಉಚಿತ ಭೌತಿಕ ಖಾತೆ ಹೇಳಿಕೆ.
ಜಿ. ಖಾತೆ ಮುಚ್ಚುವ ಶುಲ್ಕಗಳಿಲ್ಲ.
ಎಚ್. QR ಕಾರ್ಡ್ ವಿತರಣಾ ಶುಲ್ಕಗಳಿಲ್ಲ
ವಿಶೇಷವಾಗಿ ವಿನ್ಯಾಸಗೊಳಿಸಲಾದ ಐಪಿಪಿಬಿ ಎಸ್ ಎಚ್ ಜಿ ಉಳಿತಾಯ ಖಾತೆಯು ಸರಳ, ಸುಲಭವಾಗಿ ಲಭ್ಯವಿರಬಹುದಾದ ಮತ್ತು ಶೂನ್ಯ-ವೆಚ್ಚದ ಬ್ಯಾಂಕಿಂಗ್ ಪರಿಹಾರವನ್ನು ಒದಗಿಸುತ್ತದೆ, ಇದು ಅಂತರ್ಗತ ಬೆಳವಣಿಗೆ ಮತ್ತು ಸುಸ್ಥಿರ ಜೀವನೋಪಾಯದ ರಾಷ್ಟ್ರೀಯ ಆದ್ಯತೆಗಳೊಂದಿಗೆ ಹೊಂದಿಕೆಯಾಗುತ್ತದೆ.

image source: X
ಭಾರತೀಯ ಅಂಚೆ ಪಾವತಿ ಬ್ಯಾಂಕ್ ಕುರಿತು
ಭಾರತ ಸರ್ಕಾರದ ಸಂಪರ್ಕ ಸಚಿವಾಲಯದ ಅಂಚೆ ಇಲಾಖೆಯ ಅಡಿಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಅನ್ನು ಸ್ಥಾಪಿಸಲಾಗಿದ್ದು, ಇದರ ಸಂಪೂರ್ಣ ಷೇರು ಪಾಲು ಭಾರತ ಸರ್ಕಾರದ ಒಡೆತನದಲ್ಲಿದೆ. ಐಪಿಪಿಬಿಯನ್ನು 2018ರ ಸೆಪ್ಟೆಂಬರ್ 1 ರಂದು ಪ್ರಾರಂಭಿಸಲಾಯಿತು. ಭಾರತದಲ್ಲಿ ಸಾಮಾನ್ಯ ಜನರಿಗೆ ಅತ್ಯಂತ ಸುಲಭವಾಗಿ ತಲುಪಬಹುದಾದ, ಕೈಗೆಟುಕುವ ಮತ್ತು ವಿಶ್ವಾಸಾರ್ಹ ಬ್ಯಾಂಕ್ ಅನ್ನು ಒದಗಿಸುವ ದೂರದೃಷ್ಟಿಯೊಂದಿಗೆ ಈ ಬ್ಯಾಂಕ್ ಅನ್ನು ಸ್ಥಾಪಿಸಲಾಗಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನ ಮೂಲಭೂತ ಕರ್ತವ್ಯವೆಂದರೆ ಬ್ಯಾಂಕಿಲ್ಲದ ಮತ್ತು ಬ್ಯಾಂಕ್ ಸೌಲಭ್ಯವಿಲ್ಲದವರಿಗೆ ಇರುವ ಅಡೆತಡೆಗಳನ್ನು ತೆಗೆದುಹಾಕುವುದು, 1,65,000 ಕ್ಕೂ ಅಂಚೆ ಅಧಿಕ ಕಚೇರಿಗಳು (ಗ್ರಾಮೀಣ ಪ್ರದೇಶಗಳಲ್ಲಿ 140,000) ಮತ್ತು 3,00,000ಕ್ಕೂ ಅಧಿಕ ಅಂಚೆ ನೌಕರರನ್ನು ಒಳಗೊಂಡಿರುವ ಅಂಚೆ ಜಾಲವನ್ನು ಬಳಸಿಕೊಳ್ಳುವುದು ಮತ್ತು ಕೊನೆಯ ಹಂತವನ್ನು ತಲುಪುವುದು.
ಐಪಿಪಿಬಿ ಯ ವ್ಯಾಪ್ತಿ ಮತ್ತು ಅದರ ಕಾರ್ಯಾಚರಣಾ ಮಾದರಿಯು ಇಂಡಿಯಾ ಸಾಮರ್ಥ್ಯದ ಪ್ರಮುಖ ಸ್ತಂಭಗಳ ಮೇಲೆ ನಿರ್ಮಿಸಲಾಗಿದೆ – ಸಿಬಿಎಸ್-ಸಂಯೋಜಿತ ಸ್ಮಾರ್ಟ್‌ಫೋನ್ ಮತ್ತು ಬಯೋಮೆಟ್ರಿಕ್ ಸಾಧನದ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಸರಳ ಮತ್ತು ಸುರಕ್ಷಿತ ರೀತಿಯಲ್ಲಿ ಕಾಗದರಹಿತ, ನಗದುರಹಿತ ಮತ್ತು ಕಡಿಮೆ ಉಪಸ್ಥಿತಿಯ (ಪ್ರೆಸೆನ್ಸ್-ಲೆಸ್) ಬ್ಯಾಂಕಿಂಗ್ ಅನ್ನು ಸಕ್ರಿಯಗೊಳಿಸುತ್ತದೆ. ಮಿತವ್ಯಯದ ನಾವೀನ್ಯತೆಯನ್ನು ಬಳಸಿಕೊಳ್ಳುವ ಮತ್ತು ಜನಸಾಮಾನ್ಯರಿಗೆ ಸುಲಭ ಬ್ಯಾಂಕಿಂಗ್ ಮೇಲೆ ಹೆಚ್ಚಿನ ಗಮನವನ್ನು ನೀಡುವ ಮೂಲಕ, ಐಪಿಪಿಬಿ ಭಾರತದ 5.57 ಲಕ್ಷ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ 13 ಕೋಟಿಗೂ ಅಧಿಕ ಗ್ರಾಹಕರಿಗೆ 13 ಭಾಷೆಗಳಲ್ಲಿ ಲಭ್ಯವಿರುವ ಅರ್ಥಗರ್ಭಿತ ಇಂಟರ್ಫೇಸ್‌ಗಳ ಮೂಲಕ ಸರಳ ಮತ್ತು ಕೈಗೆಟುಕುವ ಬ್ಯಾಂಕಿಂಗ್ ಪರಿಹಾರಗಳನ್ನು ನೀಡುತ್ತಿದೆ.
ಕಡಿಮೆ ನಗದು ಆರ್ಥಿಕತೆಗೆ ಉತ್ತೇಜನ ನೀಡಲು ಮತ್ತು ಡಿಜಿಟಲ್ ಇಂಡಿಯಾದ ದೂರದೃಷ್ಟಿಗೆ ಕೊಡುಗೆ ನೀಡಲು ಐಪಿಪಿಬಿ ಬದ್ಧವಾಗಿದೆ. ಪ್ರತಿಯೊಬ್ಬ ನಾಗರಿಕನು ಆರ್ಥಿಕವಾಗಿ ಸುರಕ್ಷಿತ ಮತ್ತು ಸಬಲೀಕರಣಗೊಳ್ಳಲು ಸಮಾನ ಅವಕಾಶವನ್ನು ಪಡೆದಾಗ ಭಾರತವು ಅಭಿವೃದ್ಧಿ ಹೊಂದುತ್ತದೆ. ನಮ್ಮ ಧ್ಯೇಯವಾಕ್ಯ – ಪ್ರತಿಯೊಬ್ಬ ಗ್ರಾಹಕ ಮುಖ್ಯ, ಪ್ರತಿಯೊಂದು ವಹಿವಾಟು ಮಹತ್ವದ್ದಾಗಿದೆ ಮತ್ತು ಪ್ರತಿಯೊಂದು ಠೇವಣಿ ಮೌಲ್ಯಯುತವಾಗಿದೆ ಎಂಬುದು ನಿಜವಾಗಿದೆ.
Source:PIB of 30-04-2026


