Wednesday, February 19, 2025
Homeಸುದ್ದಿಅಂತರಾಷ್ಟ್ರೀಯ2021ರ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಲಭ್ಯತೆ ಖಾತ್ರಿಪಡಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು

2021ರ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಲಭ್ಯತೆ ಖಾತ್ರಿಪಡಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು

ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ: (ದಿನಾಂಕ-ಎಪ್ರೀಲ್‌ 12, 2021)

2021ರ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಲಭ್ಯತೆಯನ್ನು ಪರಿಶೀಲಿಸಲು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಮನ್ಸುಖ್ ಎಲ್. ಮಾಂಡವೀಯಾ ಅವರು ಇದೇ 2021ರ ಏಪ್ರಿಲ್ 12ರಂದು ಸಂಜೆ 4 ಗಂಟೆಗೆ ಪ್ರಮುಖ ರಸಗೊಬ್ಬರ ತಯಾರಕರು ಮತ್ತು ಆಮದುದಾರರ ಸಭೆ ನಡೆಸಿದರು.  ಈ ಸಭೆಯಲ್ಲಿ ರಸಗೊಬ್ಬರ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ದೇಶೀಯ ರಸಗೊಬ್ಬರ ಉತ್ಪಾದನೆಯ ಗುರಿ ಮತ್ತು ಹಲವು ಕಂಪನಿಗಳು ಉಲ್ಲೇಖಿಸಿದಂತೆ ಬಗೆಯ ರಸಗೊಬ್ಬರಗಳು/ಕಚ್ಚಾ ಸಾಮಗ್ರಿಗಳ ಆಮದು ಅಂದಾಜು ಕುರಿತು ವಿವರವಾಗಿ ಚರ್ಚಿಸಲಾಯಿತು.

ದೇಶದಲ್ಲಿ ಯೂರಿಯಾ ಲಭ್ಯತೆ ಕುರಿತಂತೆ ಉದ್ಯಮ ಮುಂದಿನ ದಿನಗಳಲ್ಲಿ ಆಮದು ಅವಲಂಬನೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಯೂರಿಯಾ ಘಟಕಗಳನ್ನು ಪುನಶ್ಚೇತನಗೊಳಿಸಿರುವ ಸರ್ಕಾರದ ಕ್ರಮಗಳ ಬಗ್ಗೆ ಉದ್ಯಮ ಮೆಚ್ಚುಗೆ ವ್ಯಕ್ತಪಡಿಸಿತು. ರಸಗೊಬ್ಬರ ಇಲಾಖೆ ಕಾರ್ಯದರ್ಶಿ ಸದ್ಯದ ಮುಂಗಾರು 2021ರ ಋತುವಿನಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿ ಯೂರಿಯಾ ಲಭ್ಯತೆ ಆರಾಮದಾಯಕ ಅಥವಾ ಉತ್ತಮ ಸ್ಥಿತಿಯಲ್ಲಿದೆ ಎಂದು ಹೇಳಿದರು.

2021ರ ಮುಂಗಾರು ಹಂಗಾಮಿನ ವೇಳೆ ರೈತರಿಗೆ ಸಕಾಲದಲ್ಲಿ ಅಗತ್ಯ ರಂಜಕ ಮತ್ತು ಪೊಟ್ಯಾಷಿಯಂ  ( ಪಿ ಮತ್ತು ಕೆ ) ರಸಗೊಬ್ಬರವನ್ನು ಖಾತ್ರಿಪಡಿಸಲು ಪ್ರತಿಯೊಂದು ಕಂಪನಿಗಳು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು. ಕಚ್ಚಾ ಸಾಮಗ್ರಿ ಮತ್ತು ಸಿದ್ಧ ರಸಗೊಬ್ಬರ ಬೆಲೆ ಏರಿಕೆ ಕುರಿತ ಜಾಗತಿಕ ಸ್ಥಿತಿಗತಿ ಸೇರಿದಂತೆ ಹಲವು ವಿಷಯಗಳನ್ನು ಕಂಪನಿಗಳು ಪ್ರಸ್ತಾಪಿಸಿದವು ಮತ್ತು ದೇಶಕ್ಕಾಗಿ ತಾವು ಉತ್ತಮ ಖರೀದಿಯನ್ನು ಮಾಡಲು ಕೈಗೊಂಡಿರುವ ಕಾರ್ಯತಂತ್ರಗಳನ್ನು ತಿಳಿಸಿದವು. ಭಾರತೀಯ ರಸಗೊಬ್ಬರ ಒಕ್ಕೂಟ (ಎಫ್ಎಐ)ದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸತೀಶ್ ಚಂದ್ರ ಅವರು ಗೌರವಾನ್ವಿತ ಸಚಿವರ ಮುಂದೆ ಹಲವು ರಸಗೊಬ್ಬರಗಳ ದಾಸ್ತಾನು ಮಿತಿಯ ಆರಾಮ ಸ್ಥಿತಿಯನ್ನು ವಿವರಿಸಿದರು ಮತ್ತು 2021ರ ಮುಂಗಾರು ಹಂಗಾಮಿನ ಮೊದಲ ಮೂರು ತಿಂಗಳಲ್ಲಿ ಕ್ಷೇತ್ರದಿಂದ ಬರುವ ಬೇಡಿಕೆಯನ್ನು ಪೂರೈಸಲು ಕಚ್ಚಾ ಸಾಮಗ್ರಿಗಳ ಲಭ್ಯತೆಗೆ ಕೈಗೊಂಡಿರುವ ಕ್ರಮಗಳನ್ನು ತಿಳಿಸಿದರು.

ಇಫ್ಕೋ 2021ರ ಏಪ್ರಿಲ್ 7ರಂದು ಹೊರಡಿಸಿದ ಅಧಿಸೂಚನೆಯಂತೆ ಫಾಸ್ಪೆಟಿಕ್ ರಸಗೊಬ್ಬರದ  ಬೆಲೆ ಹೆಚ್ಚಳ ಕುರಿತಂತೆ ಸುದೀರ್ಘ ಸಮಾಲೋಚನೆ ನಡೆಯಿತು. ಜಾಗತಿಕವಾಗಿ ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ ಕಂಪನಿಗಳು ಎದುರಿಸುತ್ತಿರುವ ಸಂಕಷ್ಟಗಳನ್ನು ಹಾಗೂ ಕಾಳಜಿಯನ್ನು ಅರ್ಥ ಮಾಡಿಕೊಳ್ಳಲಾಯಿತು. ಕಳೆದ 3 ರಿಂದ 4 ತಿಂಗಳ ಅವಧಿಯಲ್ಲಿ ಕಚ್ಚಾ ಸಾಮಗ್ರಿ ಮತ್ತು ಸಿದ್ಧ ವಸ್ತುಗಳ ಅಂತಾರಾಷ್ಟ್ರೀಯ ಬೆಲೆ ಗಣನೀಯವಾಗಿ ಹೆಚ್ಚಳವಾಗಿದೆ ಮತ್ತು ನಾಲ್ಕು ಪ್ರಮುಖ ರಸಗೊಬ್ಬರ ಬಳಕೆ ಮಾರುಕಟ್ಟೆಗಳಾದ ಅಮೆರಿಕ, ಬ್ರೆಜಿಲ್ ಮತ್ತು ಚೀನಾ ನಡುವೆ ಸ್ಪರ್ಧೆ ಏರ್ಪಟ್ಟಿದೆ ಎಂದು ಕಂಪನಿಗಳು ತಿಳಿಸಿದವು. ರಷ್ಯಾ ಮತ್ತು ಮೊರಾಕೊದಿಂದ ಆಮದಾಗುವ ರಸಗೊಬ್ಬರಗಳ ಮೇಲೆ ಅಮೆರಿಕ ಕೌಂಟರ್ ವೇಲಿಂಗ್ ಡ್ಯೂಟಿ (ಸುಂಕ) ವಿಧಿಸಿರುವುದರಿಂದ ಮಧ್ಯಪ್ರಾಚ್ಯದಲ್ಲಿ ಪೂರೈಕೆ ಸರಣಿ ಮರು ವಿನ್ಯಾಸಗೊಂಡಿದೆ ಮತ್ತು ಅಮೆರಿಕಕ್ಕೆ ಪೂರೈಕೆಯಾಗುತ್ತಿದ್ದ ರಸಗೊಬ್ಬರ ಬೇರೆಡೆಗೆ ತಿರುಗಿದೆ ಎಂದು ಹೇಳಿದವು. ಚೀನಾದಲ್ಲಿ ದೇಶೀಯ ಹಂಗಾಮು ಸಕ್ರಿಯವಾಗಿದೆ. ಜಾಗತಿಕ ಕಂಪನಿಗಳು ಯೂರೋಪ್ ಮತ್ತು ಅಮೆರಿಕದಲ್ಲಿ ಇರುವುದಕ್ಕಿಂತ ಹೆಚ್ಚಿನ ಬೆಲೆಯನ್ನು ಕೇಳುತ್ತಿದ್ದಾರೆ ಮತ್ತು ಭಾರತದ ಉಪಖಂಡಕ್ಕೆ ಪೂರೈಕೆಯಾಗುತ್ತಿದ್ದ ರಫ್ತ ಇಳಿಮುಖವಾಗಿದೆ. ಈ ಕಂಪನಿಗಳು, ಸರ್ಕಾರ ರಾಜತಾಂತ್ರಿಕ ಮಾರ್ಗಗಳ ಮೂಲಕ ಹಸ್ತಕ್ಷೇಪ ಮಾಡಬೇಕು, ಸೂಕ್ತ ದರದಲ್ಲಿ ಬೆಲೆ ಮತ್ತು ಪೂರೈಕೆ ಮಾಡುವ ನಿಟ್ಟಿನಲ್ಲಿ ಕೊಳವೆ ಮಾರ್ಗ ಸುಗಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ಮನವಿ ಮಾಡಿವೆ.

ರಸಗೊಬ್ಬರ ಇಲಾಖೆ ಕಾರ್ಯದರ್ಶಿ, ಹಲವು ರಾಜ್ಯಗಳಲ್ಲಿ ಹಲವು ಬಗೆಯ ರಸಗೊಬ್ಬರಗಳ ಅಗತ್ಯದ ಚಿತ್ರಣವನ್ನು ಪ್ರಸ್ತುತಪಡಿಸಿದರು ಮತ್ತು ಅಗತ್ಯ ರಸಗೊಬ್ಬರಗಳನ್ನು ಸಕಾಲದಲ್ಲಿ ಪೂರೈಕೆ ಮಾಡುವಂತೆ ಕಂಪನಿಗಳಿಗೆ ಸೂಚಿಸಿದರು. ಕಂಪನಿಗಳು ಮುಂದೆ ಬಂದು ಮುಂದಿನ ದಿನಗಳಲ್ಲಿ ರೈತರಿಗೆ ಸಕಾಲದಲ್ಲಿ ಅಗತ್ಯಕ್ಕೆ ತಕ್ಕಂತೆ ಮತ್ತು ಕೈಗೆಟಕುವ ದರದಲ್ಲಿ  ರಸಗೊಬ್ಬರವನ್ನು ಲಭ್ಯವಾಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ ಸದ್ಯ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ, ಸಗಟು ಕೇಂದ್ರಗಳಲ್ಲಿ, ರೇಖ್ ಪಾಯಿಂಟ್ ಗಳಲ್ಲಿ ಮತ್ತು ಗೋದಾಮು ಮತ್ತಿತರ ಕಡೆ ಹಾಲಿ ಇರುವ ದಾಸ್ತಾನಿಗೆ ಹಳೆಯ ದರವನ್ನೇ ಅನ್ವಯವಾಗುವಂತೆ ಮಾಡಲಾಗುವುದು ಎಂದು ಪ್ರಮುಖ ಕಂಪನಿಗಳು ಸ್ಪಷ್ಟಪಡಿಸಿದವು. ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಸಹಾಯಕ ಸಚಿವರು, ರಂಜಕ ಮತ್ತು ಪೊಟ್ಯಾಷಿಯಂ (  ಪಿ ಮತ್ತು ಕೆ) ರಸಗೊಬ್ಬರಗಳ ಬೆಲೆ ಪರಿಷ್ಕರಣೆಗೆ ಮುನ್ನ ರಸಗೊಬ್ಬರ ಇಲಾಖೆಯ ಜೊತೆ ಸಮಾಲೋಚನೆ ನಡೆಸಬೇಕು ಎಂದು ಎಲ್ಲ ಕಂಪನಿಗಳಿಗೆ ಸೂಚಿಸಿದರು.

ಅಲ್ಲದೆ ಕಂಪನಿಗಳು ಎಫ್ಎಐ ಜೊತೆ ಸೇರಿ ಒಂದು ತಂಡವಾಗಿ  ಅಂತಾರಾಷ್ಟ್ರೀಯ ಪೂರೈಕೆದಾರರ ಜೊತೆ ಬಿಗಿಯಾದ ಮಾತುಕತೆಯನ್ನು ನಡೆಸಲಾಗುತ್ತಿದೆ ಎಂದು ಭರವಸೆ ನೀಡಿದರು ಮತ್ತು ಪಿ ಮತ್ತು ಕೆ ರಸಗೊಬ್ಬರಕ್ಕೆ ಸಂಬಂಧಿಸಿದಂತೆ ಕಚ್ಚಾ ಸಾಮಗ್ರಿ ಮತ್ತು ಸಿದ್ಧ ವಸ್ತುಗಳ ಖರೀದಿಯಲ್ಲಿ ಉತ್ತಮ ರೀತಿಯಲ್ಲಿ ವ್ಯವಹಾರವನ್ನು ಕುದುರಿಸಲು  ಒಗ್ಗಟ್ಟಿನ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಲಾಗುವುದು.

ಸಚಿವರು ಮತ್ತು ಸಹಾಯಕ ಸಚಿವರು ಮಾರುಕಟ್ಟೆಯಲ್ಲಿ ಅಗತ್ಯ ರಸಗೊಬ್ಬರ ಪೂರೈಕೆ  ಮತ್ತು ಸಕಾಲದಲ್ಲಿ ಲಭ್ಯವಾಗುವುದನ್ನು ಖಾತ್ರಿಪಡಿಸಲು ಉದ್ಯಮ ಕೈಗೊಂಡಿರುವ ಪ್ರಯತ್ನಗಳನ್ನು ಗುರುತಿಸಿದರು. ಅಲ್ಲದೆ ಪ್ರಸಕ್ತ ಸನ್ನಿವೇಶದಲ್ಲಿ ತಮ್ಮ ಪ್ರಯತ್ನಗಳನ್ನು ಬೆಂಬಲಿಸಲು ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಉದ್ಯಮದ ನಾಯಕರಿಗೆ ಭರವಸೆ ನೀಡಲಾಯಿತು. ಅಂತಾರಾಷ್ಟ್ರೀಯ ಮೂಲಗಳಿಂದ ಸಕಾಲಕ್ಕೆ ಕಚ್ಚಾ ಸಾಮಗ್ರಿ, ಸಿದ್ಧ ರಸಗೊಬ್ಬರ ಪೂರೈಕೆ ಮಾಡಲು ರಾಜತಾಂತ್ರಿಕ ಮಾರ್ಗಗಳ ಮೂಲಕ ಅಗತ್ಯ ಮಧ್ಯ ಪ್ರವೇಶವನ್ನು ಕೈಗೊಳ್ಳಲಾಗುವುದು. ಅಲ್ಲದೆ ಸಚಿವರು, ರಸಗೊಬ್ಬರವನ್ನು ಅಕ್ರಮ ಮಾರಾಟ ತಡೆ ಮತ್ತು ಅಕ್ರಮ ದಾಸ್ತಾನು ಮಾಡದಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಉನ್ನತ ಮಟ್ಟದ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

2021ರ ಮುಂಗಾರು ಋತುವಿನಲ್ಲಿ ಸೂಕ್ತ ರೀತಿಯಲ್ಲಿ ಲಭ್ಯವಿದೆ ಮತ್ತು ಆ ನಿಟ್ಟಿನಲ್ಲಿ  ಎಲ್ಲ ಅಗತ್ಯ ಸಮಗ್ರ ಪ್ರಯತ್ನಗಳು ನಡೆದಿವೆ ಎಂಬ ಟಿಪ್ಪಣಿಯೊಂದಿಗೆ ಸಭೆ ಮುಕ್ತಾಯವಾಯಿತು.

(ಮಾಹಿತಿ ಕೃಪೆ: ಪಿ ಐ ಬಿ ಕೆ)

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news