ದೇಶದ ಮೊದಲ ಸೂರ್ಯಯಾನ ಆದಿತ್ಯ ಎಲ್ -1 ಯಶಸ್ವಿಯಾಗಿ 2ನೇ ಸುತ್ತಿನ ಕಕ್ಷೆಯನ್ನು ತಲುಪಿ, ಭೂಮಿಗೆ ಮಾಹಿತಿ ರವಾನಿಸಿದೆ. ಬೆಂಗಳೂರಿನಲ್ಲಿರುವ ಟೆಲಿಮೆಟ್ರಿ ಟ್ರಾಕಿಂಗ್ ಮತ್ತು ಕಮಾಂಡ್ ನೆಟ್ ವರ್ಕ್ – ಇಸ್ಟ್ರಾಕ್ ಬಾಹ್ಯಾಕಾಶ ಸಂಸ್ಥೆ , ಈ ಕಾರ್ಯಾಚರಣೆ ನಿರ್ವಹಿಸಿದೆ.
ನೌಕೆ, ಹಿಂದಿನ 22459 ಕಿಲೋ ಮೀಟರ್ ನಿಂದ 40225 ಕಿಲೋ ಮೀಟರ್ ಎತ್ತರಕ್ಕೆ ಸ್ಥಳಾಂತರಗೊಂಡಿದೆ. ಉಪಗ್ರಹ ನಾಲ್ಕು ಹಂತದಲ್ಲಿ ಕಕ್ಷೆಯನ್ನು ಪ್ರವೇಶಿಸಿ, 125 ದಿನಗಳಲ್ಲಿ, ನಿಗದಿತ ಕೇಂದ್ರವನ್ನು ತಲುಪಲಿದೆ. ಮೂರನೇ ಕಕ್ಷೆ ಪ್ರವೇಶಿಸುವ ಕಾರ್ಯ, ಇದೇ 10ರಂದು ಬೆಳಗಿನ ಜಾವ 2 ಗಂಟೆ 30 ನಿಮಿಷಕ್ಕೆ ನಡೆಯಲಿದೆ. ಆದಿತ್ಯ ಎಲ್ -1 ಮಿಷನ್, ಸೂರ್ಯನ ಮೇಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ರವಾನಿಸಲಿದೆ.

ಇದೇ 2ರಂದು ಆದಿತ್ಯ ಎಲ್ -1 ಉಪಗ್ರಹವನ್ನು ಪಿಎಸ್ ಎಲ್ ವಿ ಸಿ-57 ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು.
_with inputs of ISRO