ಸುದ್ದಿ ಸಂಗ್ರಹ: ಸುರೇಶ ಹಿರೇಮಠ, ಲಿಂಗಸಗೂರು ವರದಿಗಾರರು.
ಹುನಗುಂದ: ತಾಲೂಕಿನ ಇಲಕಲ್ ನಗರದಲ್ಲಿ ತನ್ನ ಮಡದಿಯೊಂದಿಗೆ ದುಡ್ಡಿನ ಸಲುವಾಗಿ ಜಗಳವಾಡಿದ ಮಧ್ಯವ್ಯಸನಿಯು, ಮಡದಿಯ ಜೀವದ ಅಂತ್ಯದೊಂದಿಗೆ ಕೊನೆಯಾದ ವಿಚಾರವನ್ನು ಸುದ್ದಿ ವಾಹಿನಿಯ ಮೂಲಕ ತಿಳಿದ ತಾಲೂಕಿನ ಸಿದ್ಧನಕೊಳ್ಳದ ಪೂಜ್ಯರಾದ ಶ್ರೀ ಡಾ.ಶಿವಕುಮಾರ್ ಸ್ವಾಮಿಜಿ ಕುಟುಂದವರಲ್ಲಿಗೆ ತೆರಳಿ ಆದ ಘಟನೆಗೆ ಮಕ್ಕಳಿಗೆ ಸಾಂತ್ವಾನ ಹೇಳಿದರು.

“ಆದ ಘಟನೆಯಿಂದ ಕುಟುಂದ ಸಂಕಷ್ಟದಲ್ಲಿದೆ, ಈ ಸಂದರ್ಭದಲ್ಲಿ ಯಾರೇ ಆಗಿರಲಿ ಕುಟುಂಬಕ್ಕೆ ಸ್ವ-ಇಚ್ಛೆಯಿಂದ ಸಹಾಯ ಮಾಡಬೇಕು, ನಗರದ ಮಠದ ಭಕ್ತರಾಗಲಿ-ಜನರಾಗಲಿ ಸಹಾಯ ಹಸ್ತ ಚಾಚಬೇಕು” ಎಂದು ತಿಳಿಸಿದರು. ಮತ್ತು “ಈ ಮೋದಲು ಕೋವಿಡ್-19 ಸಾಂಕ್ರಾಮಿಕತೆ ಹತೋಟಿಯಲ್ಲಿತ್ತು, ಸರಕಾರ ಮಧ್ಯ ಮಾರಾಟಕ್ಕೆ ಅವಕಾಶ ನೀಡಿ ಸಾಂಕ್ರಾಮಿಕತೆಯ ಏರಿಕೆ, ಇಂತಹ ವ್ಯಸನಾತ್ಮಕ ಘಟನೆ ಜರುಗಿದೆ, ಕೂಡಲೇ ಮಧ್ಯ ಮಾರಾಟವನ್ನು ನಿಲ್ಲಿಸಿ, ಮುಂದೆ ಆಗಬಹುದಾದ ಇಂತಹ ಘಟನೆಗಳನ್ನು ಮತ್ತು ಕೋವಿಡ್-19 ಸಾಂಕ್ರಾಮಿಕತೆಯನ್ನು ಹತೋಟಿಯಲ್ಲಿಡಬಹುದು, ಈ ಕುಟುಂಬ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಮತ್ತು ಪ್ರತಿ ತಿಂಗಳ ಕುಟುಂಬದ ಜೀವನೋಪಾಯ ಸಾಮಾಗ್ರಿಗಳ ಅಗತ್ಯ ವಸ್ತುಗಳ ಪೂರೈಕೆಯನ್ನು ತಾಲೂಕ ಆಡಳಿತ ವಹಿಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಸಾಂತ್ವಾನ ಹೇಳಿ ಅವರಿಗೆ ಬೇಕಾದ ಅಕ್ಕಿ, ಆರ್ಥಿಕ ಸಹಾಯ ಮತ್ತು ಬಟ್ಟೆ-ವಸ್ತ್ರಗಳನ್ನು ನೀಡಿದರು.
ಡಾ.ಶಿವಕುಮಾರ ಮಹಾಸ್ವಾಮಿಗಳ ಕಾಳಜಿಯುತ ಕಾರ್ಯಕ್ಕೆ ಶ್ರೀಮಠದ ನಗರದಲ್ಲಿನ ಭಕ್ತಾದಿಗಳು ಮತ್ತು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಮೊದಲು ಲಾಕ್‌ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿದ್ದ ಇಲಕಲ್ ನಗರದ ನೇಕಾರರ ಕುಟುಂಬಗಳಿಗೆ ಭೇಟಿ ನೀಡಿ, ಆತ್ಮಸ್ಥೈರ್ಯ ತುಂಬಿ, ಆರ್ಥಿಕ ಸಹಾಯ-ಅಕ್ಕಿ ವಿತರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.