ಸಂಸತ್ತಿನ ಮಳೆಗಾಲದ ಅಧಿವೇಶನ ಇಂದು ಅಂತ್ಯಗೊಂಡಿದ್ದು, ಜುಲೈ 20ರಿಂದ ಇಂದಿನವರೆಗೆ ಒಟ್ಟಾರೆ 23 ದಿನಗಳ ಕಾಲ ಜರುಗಿತು. ಲೋಕಸಭೆಯಲ್ಲಿ 22 ಹಾಗೂ ರಾಜ್ಯಸಭೆಯಲ್ಲಿ 25 ಮಸೂದೆಗಳು ಮತ್ತು 23 ಮಸೂದೆಗಳು ಸಂಸತ್ತಿನ ಉಭಯ ಸದನಗಳಿಂದ ಅಂಗೀಕರಿಸಲ್ಪಟ್ಟಿವೆ.
ಅಧಿವೇಶನದ ಕುರಿತು ಸುದ್ದಿಗೋಷ್ಟಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಗೃಹ ಸಚಿವಾಲಯದ ಮೂರು ಮಸೂದೆಗಳನ್ನು ಸಂಸದೀಯ ಸ್ಥಾಯಿ ಸಮಿತಿಗೆ ಒಪ್ಪಿಸಲಾಗಿದೆ. ಇವೆಲ್ಲವೂ ಮಹತ್ವದ ಮಸೂದೆಗಳಾಗಿದ್ದು, ಸರ್ಕಾರದ ಮನವಿ ಬಳಿಕವೂ ಪ್ರತಿಪಕ್ಷಗಳು ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳಲಿಲ್ಲ ಎಂದು ತಿಳಿಸಿದರು. ವಿಪಕ್ಷಗಳು ರಾಜಕೀಯ ಕಾರಣದಿಂದ ಚರ್ಚೆಯಿಂದ ಹಿಂದುಳಿದವು. ಮಣಿಪುರದ ಸಮಸ್ಯೆಯ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿರುವುದಾಗಿ ತಿಳಿಸಿದರೂ ಗಂಭೀರ ಚರ್ಚೆಯ ಅಗತ್ಯ ಅವುಗಳಿಗೆ ಇರಲಿಲ್ಲ.

ಈ ಹಿಂದಿನ ಅಧಿವೇಶನದಲ್ಲೂ ಬೇರೆ ವಿಚಾರ ಇಟ್ಟುಕೊಂಡು ಕಲಾಪ ಪರಿಣಾಮಕಾರಿಯಾಗಿ ಜರುಗಲು ಆಸ್ಪದ ನೀಡಿರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.