Saturday, May 17, 2025
Homeಸುದ್ದಿಸಂತೆಕೆಲ್ಲೂರು: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಿ.ಎಸ್.ಎಮ್ ಕ್ಯಾಂಪ್ !

ಸಂತೆಕೆಲ್ಲೂರು: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಿ.ಎಸ್.ಎಮ್ ಕ್ಯಾಂಪ್ !

ವರದಿಗಾರರು:ಸುರೇಶ ಹಿರೇಮಠ, ಲಿಂಗಸಗೂರು.

ಲಿಂಗಸಗೂರು: ಸಂತೆಕೆಲ್ಲೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಗರ್ಭಿಣಿಯರ ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಪಿ.ಎಸ್.ಎಮ್ ಏರ್ಪಡಿಸಲಾಗಿತ್ತು.

ಸಂತೆಕೆಲ್ಲೂರು ಗ್ರಾಮ ಸೇರಿದಂತೆ ಹುನಕುಂಟಿ ಮತ್ತು ಅಂಕುಶದೊಡ್ಡಿಯ ಸುಮಾರು ಮೂವತ್ತು ಗರ್ಭಿಣಿಯರ ಆರೋಗ್ಯ ತಪಾಸಣೆ ಮಾಡಿ, ಅವರ ಹಾಗೂ ಮಗುವಿನ ಆರೋಗ್ಯಕರವಾದ ಬೆಳವಣಿಗೆಗೆ ಸೂಕ್ತವಾದ ಮಾಹಿತಿ ನೀಡಿ, ಕ್ರಮವಾದ ಪೌಷ್ಠಿಕ ಆಹಾರ ಪದ್ಧತಿ, ತರಕಾರಿ ಹಣ್ಣುಗಳ ಸೇವನೆ, ಮಾನಸಿಕ ಧೈರ್ಯ ಹಾಗೂ ಮಾನಸಿಕ ಆರೋಗ್ಯದ ಕೂಲಂಕುಷವಾದ ಮಾಹಿತಿ ಮತ್ತು ಮುಂದಿನ ಸೂಚಿತ ಸಮಯದ ಆರೋಗ್ಯ ತಪಾಸಣೆಯ ಮಾಹಿತಿ ನೀಡಲಾಯಿತು.

ಸಾಂದರ್ಭಿಕ ವಿಡಿಯೊ ಕೃಪೆ: ಮೀಡಿಯಾ ಮಾಸ್ಟರ್

ಪಿ.ಎಸ್.ಎಮ್ ಕ್ಯಾಂಪಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರತಿ ನಿಯೋಜನಾ ವೈದ್ಯಾಧಿಕಾರಿಯಾದ ಡಾ.ರಘು ಶರ್ಮಾ ಸೇರಿದಂತೆ ಆಶಾ ಕಾರ್ಯಕರ್ತೆಯರಾದ ಪಾರ್ವತಿ ಬಡೀಗೆರ್‌, ಶರಣಮ್ಮ ಅಂಕುಶದೊಡ್ಡಿ ನೇತೃತ್ವ ವಹಿಸಿದ್ದರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news