ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಅಂಗವಿಕಲರ ಸಂಘ ಸಂಸ್ಥೆಗಳ ಒಕ್ಕೂಟ, ಚೇತನ ಅಂಗವಿಕಲರ ಅಭಿವೃದ್ಧಿ ಸಂಸ್ಥೆ(ರಿ), ಮುದಗಲ್ ಶಾಖೆಯ ಪದಾಧಿಕಾರಿಗಳು ಮತ್ತು ಸದಸ್ಯರು, ವಿಕಲಚೇತನರಿಗೆ ಕಳೇದ ಹಲವಾರು ತಿಂಗಳುಗಳಿಂದ ಆಗುತ್ತಿರುವ ಅನಾನುಕೂಲತೆಗಳ ಕುರಿತಾಗಿ ಹಾಗು ಅವುಗಳಿಗೆ ಸ್ಪಂದಿಸಲು ತಾಲೂಕ ಮುಖ್ಯ ವೈದ್ಯಾಧಿಕಾರಿಗಳು, ಉಪ ವಿಭಾಗ ಆಸ್ಪತ್ರೆ ಲಿಂಗಸಗೂರು ಇವರಿಗೆ ಮನವಿಯನ್ನು ಸಲ್ಲಿಸಿದರು.
“ಕೋವಿಡ್-19 ಕಾರಣದಿಂದಾಗಿ ಹಲವಾರು ತಿಂಗಳುಗಳಿಂದ ವಿಕಲಚೇತನರು ಗುರುತಿನ ಚೀಟಿ (UDID) ದೊರಕದೇ, ಮಾಶಾಸನ ಸೇರಿದಂತೆ ಹಲವಾರು ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ, ಅಲ್ಲದೇ ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿಯನ್ನು ಅನುಮೋದನೆಗೊಳಿಸುವ ಕೊಠಡಿಯು ಮೇಲಿನ ಮಹಡಿಯಲ್ಲಿದೆ, ಸದರಿ ಕೊಠಡಿಯನ್ನುತಪಾಸಣೆಗೆ ಅನುಕೂಲವಾಗುವಂತೆ ಕೆಳಗಡೆ ಕೊಠಡಿಗೆ ಸಿಬ್ಬಂದಿಯೊಂದಿಗೆ ಅವಕಾಶ ಕಲ್ಪಿಸಬೇಕು, ವಿಕಲಚೇತನರ 2016 ಕಾಯ್ದೆಯಂತೆ ವಿವಿಧ ವಿಕಲಚೇತನರು ಸಂಬಂಧಪಟ್ಟ ವೈದ್ಯಾಧಿಕಾರಿಗಳ ಕೊರತೆಯಿಂದ ರಾಯಚೂರಿನ ಜಿಲ್ಲಾಸ್ಪತ್ರೆಗೆ ಹೋಗಿ ಬರಲು ತೊಂದರೆಯಾಗುತ್ತಿರುವುದರ ಬಗ್ಗೆ ಗಮನಹರಿಸಬೇಕು ಮತ್ತು ತಾಲೂಕ ಮಟ್ಟದಲ್ಲಿ ಶಿಬಿರವನ್ನು ಏರ್ಪಡಿಸಿ ಜಿಲ್ಲಾಸ್ಪತ್ರೆಯಿಂದ ಸಂಬಂಧಿಸಿದ ವೈದ್ಯರನ್ನು ಕರೆಯಿಸಬೇಕು” ಎಂದು ತಾಲೂಕ ಆಸ್ಪತ್ರೆಯ ಮುಖ್ಯಾಧಿಕಾರಿಗಳಿಗೆ ಚೇತನ ಅಂಗವಿಕಲರ ಅಧಿವೃದ್ಧಿ ಸಂಸ್ಥೆ ಮುದಗಲ್ ಶಾಖೆಯಿಂದ ಮನವಿ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿಸಂಸ್ಥೆಯ ತಾಲೂಕ ಅಧ್ಯಕ್ಷರಾದ ನಿಂಗನಗೌಡ ಕೆ. ಮಾಚಕನೂರು, ಸದಸ್ಯರಾದ ಹುಸೇನ್ ಬಾಷಾ ಬನ್ನಿಗೋಳ, ಸುರೇಶ ಪಿ. ಬಂಡಾರಿ, ಅಬ್ದುಲ್ ಮಜಿದ್ ಮುದಗಲ್ಲ,ನಾಗರಾಜ ತಿಪ್ಪಣ್ಣ, ವೀರಭದ್ರಪ್ಪ ಗೆಜ್ಜಲಗಟ್ಟಾ, ವೀರಸಂಗಯ್ಯ ಹಿರೇಮಠ ಮುದಗಲ್ಲ, ವಿರುಪಾಕ್ಷಯ್ಯಸ್ವಾಮಿ ಹೊಸಮಠ ಕಾಳಾಪುರ, ಬಾಲಪ್ಪ ಕರಡದಾಳ, ರಹಿಮಾನದುಲ್ಲಿ ಮತ್ತು ಪವಾಡೆಮ್ಮ ದೇವರಭೂಪುರ ಸೇರಿದಂತೆ ಇನ್ನಿತರರು ಇದ್ದರು.