Saturday, May 17, 2025
Homeಸುದ್ದಿಲಿಂಗಸಗೂರು: ಗೆಜ್ಜಲಗಟ್ಟಾ ಗ್ರಾಮ ಪಂಚಾಯಿತಿಯಿಂದ ವಿಕಲಚೇತನರಿಗೆ ವಿವಿಧ ಸಾಧನ-ಸಲಕರಣೆಗಳ ವಿತರಣೆ.

ಲಿಂಗಸಗೂರು: ಗೆಜ್ಜಲಗಟ್ಟಾ ಗ್ರಾಮ ಪಂಚಾಯಿತಿಯಿಂದ ವಿಕಲಚೇತನರಿಗೆ ವಿವಿಧ ಸಾಧನ-ಸಲಕರಣೆಗಳ ವಿತರಣೆ.

ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.

ಲಿಂಗಸಗೂರು: ( ಮೇ  21,) ತಾಲೂಕಿನ ಗೆಜ್ಜಲಗಟ್ಟಾ ಗ್ರಾಮ ಪಂಚಾಯಿತಿ ವತಿಯಿಂದ ಸನ್‌ 2019-20 ನೇ ಸಾಲಿನ ವಿಕಲಚೇತನರ ಅನುದಾನದಲ್ಲಿ ಗ್ರಾಮದ ವಿಕಲಚೇತನರಿಗೆ ಸುಮಾರು 85 ಸಾವಿರ ಮಾಲ್ಯದ ಸಾಧನ-ಸಲಕರಣೆಗಳನ್ನು ವಿತರಿಸಲಾಯಿತು.

ಸನ್‌ 2019-20 ನೇ ಸಾಲಿನ ವಿಕಲಚೇತನ ಅನುದಾನದ ಶೇ. 5 ರಷ್ಟರ, ರೂ. 85000/- ಮಾಲ್ಯದ ಟ್ರೈಸಿಕಲ್‌, ವಾಕರ್, ಶ್ರವಣ ಸಾಧನ ಮತ್ತು ಇನ್ನೀತರ ಸಾಧನಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಜೀರ್‌ ಸಾಬ್, ಕಾರ್ಯದರ್ಶಿ, ಬಿಲ್‌ ಕಲೇಕ್ಟರ್‌, ಪಂಚಾಯಿತಿ ಸದಸ್ಯರುಗಳು ಹಾಜರಿದ್ದು, ವಿಕಲಚೇತನ ಫಲಾನುಭವಿಗಳಿಗೆ ವಿತರಿಸಲಾಯಿತು ಎಂದು ವರದಿಯಾಗಿದೆ.

ಹೈದರಾಬಾದ ಕರ್ನಾಟಕ ವಿಕಲಚೇತನ ಹೋರಾಟ ಸಮೀತಿಯ ನಿಂಗನಗೌಡ ಗೆಜ್ಜಲಗಟ್ಟಾ, ನವಜೀವನ ಅಂಗವಿಕಲರ ಅಭಿವೃದ್ಧಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿರುಪಾಕ್ಷಯ್ಯ ಹೊಸಮಠ, ಪದಾಧಿಕಾರಿಗಳಾದ ಸುರೇಶ ಬಂಢಾರಿ, ಹುಸೇನ್‌ ಪಾಷಾ ಬನ್ನಿಗೋಳ, ನಾಗರಾಜ ತಿಪ್ಪಣ್ಣ, ಅಸ್ಕಿಹಾಳ ನಾಗರಾಜ, ನಾಗರಾಜ ಕೆ. ಹಾಗೂ ಸದಸ್ಯರುಗಳು ಹಾಜರಿದ್ದರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news