ಸಂಕ್ಷಿಪ್ತ ಸುದ್ದಿ:
ಬೆಳಗಾವಿ: ” ದಿ ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ” ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಮಾನ್ಯ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಉದ್ಘಾಟಸಿದರು. ನಂತರ ಕೈಗಾರಿಕಾ ಉತ್ಪನ್ನ ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ಸಾಧನೆ ಮಾಡಿದ ಹಲವು ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿಲಾಯಿತು.
ಪ್ರಶಸ್ತಿಯ ಪ್ರಕಾರ ಹಾಗೂ ಪುರಸ್ಕೃತರ ಹೆಸರುಗಳು:
ದೀಲಿಪ ಧಾಮಲೆ ಸ್ಮಾರಕ ಟ್ರಸ್ಟ್ ಪ್ರಶಸ್ತಿ ಅಭಿಷೇಕ ಅಲೊಯಿಸ್, ಬಸಪ್ಪ ಬಾಳಪ್ಪ ಕಗ್ಗಣಗಿ ಸ್ಮಾರಕ ನಿಧಿ ಪ್ರಶಸ್ತಿ, ಬೆಸ್ಟ್ ಟ್ರೇಡರ್ ವಿಭಾಗದಲ್ಲಿ ಶ್ರೀ ಸುಂದರಲಾಲ ಕಾಂತಿಲಾಲ, ದಿ. ಮಧುಕರ ಹೇರವಾಡಕರ ಪ್ರಶಸ್ತಿ ಬೆಸ್ಟ್ ಅಪ್ ಕಮಿಂಗ್ ಟ್ರೇಡರ್ ವಿಭಾಗದಲ್ಲಿ ಮೇಘನ ನಾಯಕ ರವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.




ಈ ಸಂದರ್ಭದಲ್ಲಿ ಸಂಸ್ಥೆಯ ಜಂಟಿ ನಿರ್ದೇಶಕರಾದ ದೊಡ್ಡ ಬಸವರಾಜು, ಅಧ್ಯಕ್ಷರಾದ ಪಂಚಾಕ್ಷರಿ ಚೂನದ, ಕಾರ್ಯದರ್ಶಿಯಾದ ಕಿರಣ ಅಗಡಿ, ಸಂಜಯ ಪೊತದಾರ ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.