ದೆಹಲಿ: ಜಾಗತಿಕ ತಾಂತ್ರಿಕ ಶೃಂಗಸಭೆಯ 7ನೇ ಆವೃತ್ತಿ ಇಂದು ಆರಂಭವಾಗಿದ್ದು, ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಸಭೆಯನ್ನುದ್ದೇಶಿಸಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಬದಲಾವಣೆಗಳನ್ನು ನಾವು ಇಂದು ಕಾಣಬಹುದಾಗಿದೆ. ದತ್ತಾಂಶ ಪ್ರಕ್ರಿಯೆಯು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಇದರಿಂದ ಎಲ್ಲ ಕ್ಷೇತ್ರಗಳಲ್ಲೂ ಹೆಚ್ಚಿನ ಪಾರದರ್ಶಕತೆಯನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.
ಕೋವಿಡೊತ್ತರದಲ್ಲಿ ಭಾರತವು ಅಮೂಲಾಗ್ರ ಬದಲಾವಣೆಗೆ ಸಾಕ್ಷಿಯಾಗಿದ್ದು, ಆರ್ಥಿಕ, ಸಾಮಾಜಿಕವಾಗಿ ಸದೃಢತೆ ಹೊಂದಿದೆ. ಜಾಗತೀಕರಣದ ಲಾಭ ಬಹುತೇಕರಿಗೆ ಲಭ್ಯವಾಗುತ್ತಿದ್ದು, ಇದನ್ನು ಯಾರು ವಿರೋಧಿಸುವ ಹಂತಕ್ಕೆ ಹೋಗುವ ಸ್ಥಿತಿಯಲ್ಲಿ ಇಲ್ಲ. ಜಾಗತೀಕರಣದಿಂದ ಉಂಟಾದ ಪರಿಣಾಮಗಳು ಭಾರತದಂತಹ ದೇಶಗಳಿಗೆ ವರದಾನವಾಗಿ ಪರಿಣಿಮಿಸಿವೆ ಎಂದರು.

ಸೆಮಿಕಂಡೆಕ್ಟರ್, 5-ಜಿ, ಬಾಹ್ಯಾಕಾಶ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ. ಇವುಗಳ ಲಾಭ ಪಡೆಯಲು ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಈಗಾಗಲೇ ರೂಪಿಸಿದೆ ಎಂದು ಮಾಹಿತಿ ನೀಡಿದರು. 3 ದಿನಗಳ ಕಾಲ ಹೈಬ್ರಿಡ್ ಮಾದರಿಯಲ್ಲಿ ಸಮ್ಮೇಳನ ನಡೆಯಲಿದ್ದು, ಹಲವು ರಾಷ್ಟ್ರಗಳ 5 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
_CLICK to Follow-Support us on DailyHunt