ಸಂಕ್ಷಿಪ್ತ ಸುದ್ದಿ:
ಚಿಕ್ಕಮಗಳೂರು: ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಕೋವಿಡ್-19 ಗೆ ಸಂಬಂಧಪಟ್ಟ ಲ್ಯಾಬ್ ಗಳನ್ನು ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿಕನ್ನಡ ಮತ್ತು ಸಂಸ್ಕೃತಿ ಹಾಗು ಪ್ರವಾಸೋದ್ಯಮ ಸಚಿವರಾದ ಮಾನ್ಯ ಸಿ.ಟಿ. ರವಿ ಅವರು, ವಿಧಾನಪರಿಷತ್ ಉಪಸಭಾಪತಿಗಳಾದ ಧರ್ಮೆಗೌಡರು, ವಿಧಾನಪರಿಷತ್ ಸದಸ್ಯರಾದ ಭೋಜೇಗೌಡರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಹಾಗೂ ಆರೋಗ್ಯ ಇಲಾಖೆಯ ಡಿಎಚ್ಒ ಉಪಸ್ಥಿತರಿದ್ದರು.

ನಂತರ ಉದ್ಘಾಟಕರು ಹಾಗೂ ಗಣ್ಯರು, ಸಂಬಂಧಿಸಿದ ಸಿಬ್ಬಂದಿ ಹಾಗೂ ವೈದ್ಯರಿಂದ ಲ್ಯಾಬ್ ನ ಪರಿಕರಗಳ ಬಗ್ಗೆಹೆಚ್ಚಿನ ಮಾಹಿತಿಯನ್ನು ಪಡೆದರು.