ಸುದ್ದಿ ಸಂಗ್ರಹ: ಸುರೇಶ ಹಿರೇಮಠ, ಲಿಂಗಸಗೂರು ವರದಿಗಾರರು.
ಕೊಪ್ಪಳ: ಜಿಲ್ಲೆಯ ಚಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಂಚಾಯಿತಿ ವತಿಯಿಂದ ಗುರುವಾರ ರಾಜ್ಯ ಸರ್ಕಾರದ ಆದೇಶದಂತೆ ಮಾಸ್ಕ್ ದಿನಾಚರಣೆ ಮತ್ತು ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ಮುಖ್ಯ ಬೀದಿ ಸಂಚರಿಸುತ್ತಾ ಹಾಗೂ ಗ್ರಾಮದ ಮಹಿಳೆಯರನ್ನು ಸಂಬಂಧಿಸಿದ ಬಯಲು ಜಾಗೆಯಲ್ಲಿ ಸಾಮಾಜಿಕ ಅಂತರದಲ್ಲಿ ಒಂದೆಡೆ ಸೇರಿಸಿ, “ರಾಜ್ಯ ಸರ್ಕಾರವು ಇಂದು ಮಾಸ್ಕ್ ದಿನ ಆಚರಿಸಲು ಕರೆ ಕೊಟ್ಟಿದೆ, ಕಾರಣ ವಿಶ್ವಸಂಸ್ಥೆಯ ಅಂಕಿಅಂಶದ ಪ್ರಕಾರ ಮಾಸ್ಕ್ ಧಾರಣೆಯಿಂದ ಕೋವಿಡ್-19 ಸಾಂಕ್ರಾಮಿಕ ಹರಡಿವಿಕೆಯ ಪ್ರಮಾಣ ಸಾಧ್ಯವಾದಷ್ಟು ಕಡಿಮೆಗೊಳಿಸಬಹುದು ಎಂಬ ಅಂಶವನ್ನು ದೃಢಪಡಿಸಿದೆ ಆದ್ದರಿಂದ ಗ್ರಾಮದ ಜನತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್‌ನ್ನು ಬಳಸಬೇಕು ಮತ್ತು ಒಬ್ಬರು ಬಳಸಿದ ಮಾಸ್ಕ್‌ನ್ನು ಮತ್ತೋಬ್ಬರು ಬಳಸಬಾರದು, ಸ್ಯಾನೀಟೈಸರನಿಂದ ಕೈಗಳನ್ನು ತೊಳೆದು ಶುಚಿಯಾಗಿಟ್ಟುಕೊಳ್ಳಬೇಕು, ಶೀತ ಕೆಮ್ಮು ಜ್ವರ ಕಾಣಿಸಿಕೊಂಡರೆ ನಿರ್ಲಕ್ಷಿಸದೇ, ಮುಂಜಾಗ್ರತೆಗೋಸ್ಕರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸಗೊಳಪಡಬೇಕು” ಎಂಬ ಆಂಶಗಳೊಂದಿಗೆ ಜಾಗೃತಿ ಮೂಡಿಸಿ, ಮಾಸ್ಕ್‌ನ್ನು ವಿತರಿಸಿದರು.

ಮಾಸ್ಕ್ ದಿನಾಚರಣೆ ಹಾಗೂ ಜಾಗೃತಿ ಜಾಥಾದಲ್ಲಿ ದೊಡ್ಡನಗೌಡ ಪಾಟೀಲ್ ಮಾಜಿ ಶಾಸಕರು ಕುಷ್ಟಗಿ, ಮುಖಂಡರಾದ ಸಂಗಣ್ಣ ಕರಡಿ, ಡಾ.ಶರಣಪ್ಪ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ, ಸೋಮಶೇಖರ್ ಮೇಟಿ ರಾಜೂರು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ರೇಣುಕಾ ಗುರುವಿನ್ ಆರೋಗ್ಯ ಸಹಾಯಕರು, ಕಿರಣ್ ಪಾಟೀಲ್ ಮಧ್ಯಮ ಹಂತದ ಆರೋಗ್ಯ ಪೂರೈಕರದಾರರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.