” 75 ದಿನಗಳು….. ಇಂಡಿಯಾಗೇಟ್ ಮೇಲಾವರಣಕ್ಕಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 280 ಟನ್ ಏಕಶಿಲೆಯ ಗ್ರಾನೈಟ್ ಪ್ರತಿಮೆಯನ್ನು ಕೆತ್ತಿಸುವ ಪ್ರಯಾಣ… ಅವಕಾಶಕ್ಕಾಗಿ ಧನ್ಯವಾದಗಳು” ಎಂದು ಶಿಲ್ಪಿ / ಕಲಾವಿದ ಅರುಣ್ ಯೋಗಿರಾಜ್ ತಮ್ಮ ಟ್ವೀಟ್ ಖಾತೆಯಲ್ಲಿ ಬರೆದುಕೊಂಡು, ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಪ್ರತಿಮೆ ನಿರ್ಮಾಣದ ವಿಡಿಯೋ ಕ್ಲಿಪ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.
ನಿನ್ನೆಯಷ್ಟೆ ದೆಹಲಿಯ “ಕರ್ತವ್ಯ ಪಥ”ದಲ್ಲಿ ಐತಿಹಾಸಿಕ ನೇತಾಜಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು.
_CLICK to Follow us on DailyHunt