Friday, March 21, 2025
Homeಮೂವಿ ರಿವೀವ್ಎಫ್‌ಟಿಐಐ(FTII) ವಿದ್ಯಾರ್ಥಿಗಳು ತಯಾರಿಸಿದ "Sunflowers were the first ones to know" -  ಚಿತ್ರ...

ಎಫ್‌ಟಿಐಐ(FTII) ವಿದ್ಯಾರ್ಥಿಗಳು ತಯಾರಿಸಿದ “Sunflowers were the first ones to know” –  ಚಿತ್ರ 77 ನೇ ಕ್ಯಾನೆಸ್ ಚಲನಚಿತ್ರೋತ್ಸವಕ್ಕೆ ಆಯ್ಕೆ 

ಲಾ ಸಿನೆಫ್‌ನಲ್ಲಿ ಮಿಂಚಲಿರುವ ನಿರ್ದೇಶಕ ಚಿದಾನಂದ ನಾಯ್ಕ್ ಮತ್ತು ಅವರ ತಂಡದ ಎಫ್‌ಟಿಐಐಯ ವರ್ಷಾಂತ್ಯದ ಸಂಘಟಿತ ಪ್ರಯತ್ನ ಚಿತ್ರ 

ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (FTII)ಯ ವಿದ್ಯಾರ್ಥಿ ಚಿದಾನಂದ್ ನಾಯಕ್ ಅವರ “SUNFLOWERS WERE FIRST ONES TO KNOW” ಚಿತ್ರ ಫ್ರಾನ್ಸ್ ನ 77ನೇ ಕ್ಯಾನೆ ಚಲನಚಿತ್ರೋತ್ಸವದಲ್ಲಿ ‘ಲಾ ಸಿನೆಫ್’ ಸ್ಪರ್ಧಾತ್ಮಕ ವಿಭಾಗದಲ್ಲಿ ಆಯ್ಕೆಯಾಗಿದೆ. ಚಲನಚಿತ್ರೋತ್ಸವವು 2024 ರ ಮೇ 15 ರಿಂದ 24ರವರೆಗೆ ನಡೆಯಲಿದೆ. ಚಲನಚಿತ್ರ ಮತ್ತು ದೂರದರ್ಶನ ಮಾಧ್ಯಮದಲ್ಲಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ವಿಭಾಗವು ಉತ್ಸವದ ಅಧಿಕೃತ ವಿಭಾಗವಾಗಿದೆ. ಪ್ರಪಂಚದಾದ್ಯಂತದ ಚಲನಚಿತ್ರ ಶಾಲೆಗಳಿಂದ ತಯಾರಾಗುವ ಚಿತ್ರಗಳನ್ನು ಗುರುತಿಸುತ್ತದೆ. 

ಪ್ರಪಂಚದಾದ್ಯಂತ ಚಲನಚಿತ್ರ ಶಾಲೆಗಳು ಸಲ್ಲಿಸಿದ ಒಟ್ಟು 2,263 ಚಲನಚಿತ್ರಗಳಿಂದ ಆಯ್ಕೆಯಾದ 18 ಕಿರುಚಿತ್ರಗಳಲ್ಲಿ (14 ಲೈವ್-ಆಕ್ಷನ್ ಆಧಾರಿತ ಮತ್ತು 4 ಅನಿಮೇಟೆಡ್ ಚಲನಚಿತ್ರಗಳು) ಚಲನಚಿತ್ರವು ಒಳಗೊಂಡಿವೆ. ಕ್ಯಾನೆ ‘ಲಾ ಸಿನೆಫ್’ ವಿಭಾಗದಲ್ಲಿ ಆಯ್ಕೆಯಾದ ಏಕೈಕ ಭಾರತೀಯ ಚಿತ್ರ ಇದಾಗಿದೆ. ಬುನ್ಯುಯೆಲ್ ಥಿಯೇಟರ್‌ನಲ್ಲಿ ಮೇ 23 ರಂದು ಪ್ರಶಸ್ತಿ ಪಡೆದ ಚಲನಚಿತ್ರಗಳ ಪ್ರದರ್ಶನಕ್ಕೆ ಮುನ್ನ ನಡೆಯುವ ಸಮಾರಂಭದಲ್ಲಿ ತೀರ್ಪುಗಾರರು ಲಾ ಸಿನೆಫ್ ಬಹುಮಾನಗಳನ್ನು ಹಸ್ತಾಂತರಿಸುತ್ತಾರೆ.

“SUNFLOWERS WERE FIRST ONES TO KNOW” ಚಿತ್ರ ಹಳ್ಳಿಯ ಹುಂಜವನ್ನು ಕದಿಯುವ ಮಹಿಳೆಯ ಕಥೆಯಾಗಿದ್ದು, ಈ ಘಟನೆ ಸಮುದಾಯವನ್ನು ಅಸ್ತವ್ಯಸ್ತಗೊಳಿಸುತ್ತದೆ. ಹುಂಜವನ್ನು ಮರಳಿ ತರಲು, ಭವಿಷ್ಯವಾಣಿಯನ್ನು ಕರೆಯಲಾಗುತ್ತದೆ. ಮಹಿಳೆಯ ಕುಟುಂಬವನ್ನು ಗಡಿಪಾರು ಮಾಡಲಾಗುತ್ತದೆ. 

ಒಂದು ವರ್ಷದ ಟೆಲಿವಿಷನ್ ಕೋರ್ಸ್‌ನ ವಿದ್ಯಾರ್ಥಿಯೊಬ್ಬರು ತಯಾರಿಸಿದ ಚಲನಚಿತ್ರವು ಪ್ರತಿಷ್ಠಿತ ಕ್ಯಾನೆ ಚಲನಚಿತ್ರೋತ್ಸವದಲ್ಲಿ ಆಯ್ಕೆಯಾಗಿರುವುದು ಇದೇ ಮೊದಲು.

ಎಫ್‌ಟಿಐಐಯ ವಿಶಿಷ್ಟ ಶಿಕ್ಷಣಶಾಸ್ತ್ರ, ಸಿನಿಮಾ ಮತ್ತು ದೂರದರ್ಶನ ಕ್ಷೇತ್ರದಲ್ಲಿ ಶಿಕ್ಷಣದ ಅಭ್ಯಾಸ ಆಧಾರಿತ ಸಹ-ಕಲಿಕೆಯ ವಿಧಾನದ ಮೇಲೆ ಕೇಂದ್ರೀಕರಿಸಿರುವುದರಿಂದ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಇಲ್ಲಿನ ಹಳೆಯ ವಿದ್ಯಾರ್ಥಿಗಳು ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಗೆಲ್ಲುವಂತೆ ಮಾಡುತ್ತದೆ. 

ಇಲ್ಲಿ ಪ್ರದರ್ಶನಗೊಳ್ಳುವ ಭಾರತೀಯ ಮೂಲದ ಎಫ್‌ಟಿಐಐ ಚಲನಚಿತ್ರವು, ಟಿವಿ ವಿಭಾಗದ ಒಂದು ವರ್ಷದ ಚಲನಚಿತ್ರ ನಿರ್ಮಾಣಕ್ಕೆ ಸಂಬಂಧಪಟ್ಟ ಕೋರ್ಸ್ ಆಗಿದೆ, ಇಲ್ಲಿ ವಿವಿಧ ನಾಲ್ಕು ವಿಭಾಗಗಳ ಅಂದರೆ ನಿರ್ದೇಶನ, ಎಲೆಕ್ಟ್ರಾನಿಕ್ ಸಿನಿಮಾಟೋಗ್ರಫಿ, ಸಂಕಲನ, ಸೌಂಡ್ ವರ್ಕ್ ಗೆ ಸಂಬಂಧಿಸಿದ ವಿದ್ಯಾರ್ಥಿಗಳು ಸಂಘಟಿತವಾಗಿ ಒಂದು ಪ್ರಾಜೆಕ್ಟ್ ಅಡಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಚಿತ್ರವನ್ನು ಚಿದಾನಂದ ಎಸ್ ನಾಯಕ್ ನಿರ್ದೇಶಿಸಿದ್ದಾರೆ, ಸೂರಜ್ ಠಾಕೂರ್ ಛಾಯಾಗ್ರಹಣ, ಮನೋಜ್ ವಿ ಸಂಕಲನ ಮತ್ತು ಅಭಿಷೇಕ್ ಕದಮ್ ಅವರ ಧ್ವನಿ ವಿನ್ಯಾಸ ಚಿತ್ರಕ್ಕಿದೆ.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news