- “ವಿಜಯದಶಮಿಯ ಈ ಶುಭದಿನದಂದು ತಾಯಿ ದುರ್ಗಾದೇವಿ ನಿಮ್ಮೆಲ್ಲರಿಗೂ ಉತ್ತಮ ಆರೋಗ್ಯ ಸಂಪತ್ತು ಯಶಸ್ಸು ಮತ್ತು ಸಮೃದ್ಧಿಯನ್ನು ನೀಡಲೆಂದು ಹಾರೈಸುತ್ತೇನೆ. ಸರ್ವರಿಗೂ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳು.”_ ಥಾವರ್ ಚಂದ್ ಗೆಹ್ಲೋಟ್, ಮಾನ್ಯ ರಾಜ್ಯಪಾಲರು.
- “ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ಮಹಾನವಮಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಡಿನ ಅದಿ ದೇವತೆ ಶ್ರೀ ಚಾಮುಂಡೇಶ್ವರಿ ತಾಯಿ ಸರ್ವರಿಗೂ ಸುಖ– ಶಾಂತಿ, ಸಮೃದ್ಧಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.”_ ಬಸವರಾಜ ಬೊಮ್ಮಯಿ, ಮಾನ್ಯ ಮುಖ್ಯಮಂತ್ರಿಗಳು.
- ಕೋಟಿಗೊಬ್ಬ-3 ಬಿಡುಗಡೆ ಬಗ್ಗೆ ವಿಕ್ಷಕ ಅಭಿಮಾನಿಗಳಲ್ಲಿ ಶಾಂತಿ ಕಾಪಾಡಲು ಟ್ವೀಟ್ ಮೂಲಕ ಕಿಚ್ಚ ಸುದೀಪ್ ಮನವಿ ! ಅಕ್ಟೋಬರ್ 15 ಬೆಳಿಗ್ಗೆ 06.00 ರಿಂದ ತೆರೆಗೆ ಕೋಟಿಗೊಬ್ಬ-3 .
- ಭಜರಂಗಿ-2 ಚಿತ್ರದ ಬಹುನಿರೀಕ್ಷಿತ ಟ್ರೈಲರ್ ಇದೇ ಅಕ್ಟೋಬರ್ 20, ಸಂಜೆ 6.45 ಕ್ಕೆ ನಿಮ್ಮ ಮುಂದೆ!!
- ಕರ್ನಾಟಕ ಪೊಲೀಸ್ ಇಲಾಖೆ ನಡೆಸುತ್ತಿರುವ 3,533 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಇದೇ 24 ರಂದು ರಾಜ್ಯದ 76 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ.
- “ಟೀಂ ಇಂಡಿಯಾ ವಿಶ್ವಕಪ್ ಜರ್ಸಿ ಅನಾವರಣವು ದೊಡ್ಡದಾಗುತ್ತಾ ಹೋಗುತ್ತದೆ ಮತ್ತು ಐಕಾನಿಕ್ ಬುರ್ಜ್ ಖಲೀಫಾದ ಮೇಲೆ ಪ್ರೊಜೆಕ್ಷನ್ನೊಂದಿಗೆ ಉತ್ತಮಗೊಳ್ಳುತ್ತದೆ.”_ಬಿಸಿಸಿಐ – ಟ್ವೀಟ್ ಖಾತೆ.
- ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ ನವೆಂಬರ್ 21 ರಂದು ಚುನಾವಣೆ ನಡೆಯಲಿದೆ. ಈ ಹಿಂದೆ ಸ್ಥಗಿತಗೊಳಿಸಲಾಗಿದ್ದ ಚುನಾವಣಾ ಪ್ರಕ್ರಿಯೆಯನ್ನು ಯಥಾವತ್ತಾಗಿ ಮುಂದುವರೆಸುವುದಾಗಿ ಚುನಾವಣಾಧಿಕಾರಿ ಪ್ರಕಟಿಸಿದ್ದು, ನವೆಂಬರ್ 24 ರಂದು ಮತ ಎಣಿಕೆ ನಡೆಯಲಿದೆ.
- ನವದೆಹಲಿ: ಗಡಿ ರಸ್ತೆಗಳ ಸಂಘಟನೆ – ಬಿಆರ್ ಓ ನಿರ್ಮಿಸುತ್ತಿರುವ “ಸೆಲಾ” ಸುರಂಗ ಮಾರ್ಗದ ಅಂತಿಮ ಚರಣಕ್ಕೆ ದೆಹಲಿಯಲ್ಲಿಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಡಿಯೋ ಕಾನ್ಫೆರೆನ್ಸ್ ಮೂಲಕ ಚಾಲನೆ ನೀಡಿದರು.
- ಇತಿಹಾಸದಲ್ಲಿ ಈ ದಿನ: ರಾಷ್ಟ್ರೀಯ – 1884 – ಪ್ರಸಿದ್ಧ ಕ್ರಾಂತಿಕಾರಿ ರಾಷ್ಟ್ರೀಯವಾದಿ, ಗದರ್ ಚಳವಳಿಯ ಸ್ಥಾಪಕ ಲಾಲಾ ಹರದಯಾಳ್ ದೆಹಲಿಯಲ್ಲಿ ಜನಿಸಿದರು. ಅಂತಾರಾಷ್ಟ್ರೀಯ – 1968 – ಮಾನವಸಹಿತ ಯುಎಸ್ ಬಾಹ್ಯಾಕಾಶ ನೌಕೆಯಿಂದ ಮೊದಲ ನೇರ ಪ್ರಸಾರವನ್ನು ಅಪೊಲೊ 7 ರಿಂದ ರವಾನಿಸಲಾಯಿತು.
