ರಾಜ್ಯ – ರಾಷ್ಟ್ರೀಯ
- ಯುದ್ಧ ಬಾಧಿತ ಉಕ್ರೇನ್ ನಿಂದ ಭಾರತೀಯರನ್ನು ಕರೆತರುವ “ಆಪರೇಷನ್ ಗಂಗಾ’ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಸುಮಾರು 18 ಸಾವಿರ ಮಂದಿಯನ್ನು ವಾಪಸ್ ಕರೆತರಲಾಗಿದೆ. ಒ 14 ದಿನಗಳಲ್ಲಿ 90 ವಿಮಾನಗಳ ಹಾರಾಟ.
- ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಗಾಂಧಿನಗರದ ಸಮೀಪ ನಿರ್ಮಿಸಿರುವ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ. ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಲಿದ್ದಾರೆ.
- ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು ಭಾರತ ಮತ್ತು ಪ್ರವಾಸಿ ಶ್ರೀಲಂಕಾ ತಂಡಗಳ ನಡುವೆ ಎರಡನೇ ಹಾಗೂ ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯ ಆರಂಭವಾಗಲಿದೆ.
- ಕೇಂದ್ರ ಹಣಕಾಸು ಸಚಿವಾಲಯವು ಪ್ರದೇಶಗಳ ಅಭಿವೃದ್ಧಿಗಾಗಿ ಬಿಹಾರ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಒಟ್ಟು 2,221 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ.
ಜಾಹೀರಾತು: ಲಿಂಗಸಗೂರು ಪಟ್ಟಣದಲ್ಲಿ ಹೊಸದಾಗಿ ಪ್ರಾರಂಭವಾಗಿರುವ “ಸಮೃದ್ಧಿ ಹಾರ್ಡವೇರ್ & ಪೇಂಟ್ಸ್ ! ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಹಾರ್ಡವೇರ್ ಸಾಮಗ್ರಿಗಳು ಮತ್ತು ಪೇಂಟ್ಸ್ !.

- ದೇಶದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟ್ಟವಾದ ದಂಡಿ ಯಾತ್ರೆಯ 92ನೇ ವರ್ಷಾಚರಣೆ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ನ ಅಹ್ಮದಾಬಾದ್ ಬಳಿ ಇರುವ ಕೋಚ್ರಮ್ ಆಶ್ರಮದಲ್ಲಿ ದಂಡಿ ಸೈಕಲ್ ಯಾತ್ರೆಗೆ ಚಾಲನೆ ನೀಡಿದರು.
- ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗಾವಕಾಶ ತಂದುಕೊಡಲು ಮೂರು ವರ್ಷಗಳ ಒಡಂಬಡಿಕೆಗೆ ರಾಜ್ಯ ಸರ್ಕಾರ ಮತ್ತು ಬ್ರಿಟಿಷ್ ಕೌನ್ಸಿಲ್ ಬೆಂಗಳೂರಿನಲ್ಲಿ ನಿನ್ನೆ ಸಹಿ ಹಾಕಿದೆ.
- ರೈತರಿಗೆ ಸೌರವಿದ್ಯುತ್ ಪಂಪ್ ಸೆಟ್ ಅಳವಡಿಸುವ ಕೇಂದ್ರ ಪುರಸ್ಕೃತ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾ ಅಭಿಯಾನ್- ಪಿಎಂ- ಕುಸುಮ್- ಬಿ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ ಜಾರಿಗೊಳಿಸಲು ನಿನ್ನೆ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.