ಹಬ್ಬದ ಸಂಭ್ರಮದಲ್ಲಿರೊ ಜನರಿಗೆ ಬೆಲೆ ಏರಿಕೆಯ ಶಾಕ್ ! ಡೀಸಲ್ –ಪೆಟ್ರೋಲ್ – ಅಡುಗೆ ಅನಿಲ ದರಗಳು ಹೆಚ್ಚು. ರಾಜ್ಯದ ಕೆಲವೆಡೆ ಮಳೆಯಾದರೂ ರೈತರ ಕೈ ಹಿಡಿಯದ ಬೆಳೆ, ಮತ್ತೊಂದೆಡೆ ಅನ್ನದಾತನಿಗೆ ಬರೆ ಎಳೆದ ವರುಣ.
“ಬಾಹ್ಯಾಕಾಶ ಕ್ಷೇತ್ರದಲ್ಲಿ “ಎಂಡ್ ಟೂ ಎಂಡ್” ತಂತ್ರಜ್ಞಾನವನ್ನು ಹೊಂದಿರುವ ಕೆಲವು ದೇಶಗಳಲ್ಲಿ ಭಾರತ “_ ಭಾರತೀಯ ಬಾಹ್ಯಾಕಾಶ ಸಂಘದ ಪ್ರಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ.
ಶಾಸಕ ಜಿ ಟಿ ದೇವೇಗೌಡ ಅವರು ಕಾಂಗ್ರೆಸ್ ಸೇರ್ಪಡೆ ಘೋಷಣೆ. ಮುಂಬರುವ ಚನಾವಣೆಗಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೆಚ್ಚಿದ ಕೈ ಟಿಕೆಟ್ ಪೈಪೋಟಿ. ಮಾಜಿ ಸಿ ಎಂ ಸಿದ್ಧರಾಮಯ್ಯ ಆಪ್ತ ರಾಕೇಶ್ ಪಾಪಣ್ಣ ಟಿಕೆಟ್ ಗಾಗಿ ಲಾಬಿ, ಹಿನಕಲ್ ಜಿಲ್ಲಾ ಪಂಚಾಯಿತಿ ಸದಸ್ಯರಾಗಿರೋ ರಾಕೇಶ್ ಪಾಪಣ್ಣ .
ಉತ್ತರಾಖಂಡ್: ಸಾರಿಗೆ ಸಚಿವ ಯಶಪಾಲ್ ಆರ್ಯ ಅವರು ಬಿಜೆಪಿಗೆ ರಾಜೀನಾಮೆ ನೀಡಿದರು, ಅವರ ಶಾಸಕ ಪುತ್ರ ಸಂಜೀವ್ ಆರ್ಯ ಅವರೊಂದಿಗೆ ಕಾಂಗ್ರೆಸ್ ಸೇರಿದ್ದಾರೆ.
ಬೆಂಗಳೂರು: ವಿಧಾನಸೌಧದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ ಕೆ ಸುಧಾಕರ್ ಅವರ ನೇತೃತ್ವದೊಂದಿಗೆ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಶೈಕ್ಷಣಿಕ ಪ್ರಗತಿ ಮತ್ತು ಆಡಳಿತ ವಿಚಾರಗಳನ್ನು ಪರಿಶೀಲಿಸಲು ಕಾಲೇಜಿನ ಆಡಳಿತ ಮಂಡಳಿ ಸಭೆ ನಡೆಯಿತು.
ಚಿತ್ರದುರ್ಗ: ಜಿಲ್ಲೆಯ ನಾಯಕನಹಟ್ಟಿಯಲ್ಲಿ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ ಶ್ರೀ ರಾಮುಲು ಅವರು ಮಹರ್ಷಿ ವಾಲ್ಮೀಕಿ ಸುಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು.
ಬೆಂಗಳೂರು: ಕೈಗಾರಿಕಾ ಅದಾಲತ್ – “ಇಡೀ ದೇಶದಲ್ಲೇ ಅತಿಹೆಚ್ಚು ನವೋದ್ಯಮಗಳಿರುವುದು ಕರ್ನಾಟಕದಲ್ಲಿ, ದೇಶದಲ್ಲೇ ಮೊದಲ ಬಾರಿಗೆ ಆರ್ ಯ್ಯಾಂಡ್ ಡಿ ನೀತಿ, ಉದ್ಯೋಗ ನೀತಿಗಳನ್ನು ಕರ್ನಾಟಕ ಸರ್ಕಾರ ರೂಪಿಸುತ್ತಿದೆ. ಯುವಜನತೆಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕರ್ನಾಟಕ ಅತ್ಯುತ್ತಮ ರಾಜ್ಯ” _ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಆಯೋಜಿಸಿರುವ “ಉದ್ಯಮಿಯಾಗು – ಉದ್ಯೋಗ ನೀಡು” ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
ಬೆಂಗಳೂರು: ಕಾವೇರಿ ಭವನದಲ್ಲಿ ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಡಿಯಲ್ಲಿ ಜೂನಿಯರ್ ಪವರ್ ಮ್ಯಾನ್ ಹುದ್ದೆಗಳಿಗೆ ಸಾಂಕೇತಿಕವಾಗಿ ನೇಮಕಾತಿ ಆದೇಶಗಳನ್ನು ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸುನೀಲ್ ಕುಮಾರ್ ಕಾರ್ಕಳ ವಿತರಿಸಿದರು.
ಸ್ಯಾಂಡಲ್ ವುಡ್ : ಈ ಸೀಸನ್ನ ಮೋಸ್ಟ್ ಎಕ್ಸ್ಪೆಕ್ಟೆಡ್ ಮಾಸ್ ಸಿನಿಮಾ “ಸಲಗ” ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ.
ವಾಣಿಜ್ಯ – ಶೇರು ಮಾರುಕಟ್ಟೆ: ಸೆನ್ಸೆಕ್ಸ್ 76.72 ಪಾಯಿಂಟ್ ಏರಿಕೆ ದಾಖಲಿಸಿ 60,135.78 ಕ್ಕೆ ತಲುಪಿದೆ; ನಿಫ್ಟಿ 50.75 ಪಾಯಿಂಟ್‌ಗಳಿಂದ 17,945.95 ಕ್ಕೆ ತಲುಪಿದೆ.
ಯುಎಸ್ ಡಾಲರ್ ಎದುರು ರೂಪಾಯಿ 37 ಪೈಸೆ ಕುಸಿದು 75.36 (ತಾತ್ಕಾಲಿಕ) ಕ್ಕೆ ತಲುಪಿದೆ.
