- ವಿಧಾನಸೌಧದ ಕಾನ್ಪರೆನ್ಸ್ ಸಭಾಂಗಣದಲ್ಲಿ ಇಂದು ಸಂಜೆ 4.30ಕ್ಕೆ ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಮಹಾಸಂಸ್ಥೆ ವತಿಯಿಂದ ದಕ್ಷಿಣ ಭಾರತ ಉತ್ಸವದ ಲಾಂಛನ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
- ಮುಂಬರುವ ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ಹಾಗೂ ರಾಷ್ಟ್ರ ಮಟ್ಟದಲ್ಲಿ ಪರ್ಯಾಯ ಮೈತ್ರಿಕೂಟ ರಚನೆ ಸಂಬಂಧ ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಬಿಜೆಪಿಯೇತರ 24 ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಯಲಿದೆ.
- ನವದೆಹಲಿಯಲ್ಲಿ ನಾಳೆ 2023ರ ’ಭೂಮಿ ಸಮ್ಮಾನ್’ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಲಿದ್ದಾರೆ. ಡಿಜಿಟಲ್ ಇಂಡಿಯಾ ಅಭಿಯಾನದ ಮೂಲಕ ಭೂ ದಾಖಲೆಗಳನ್ನು ಸುಭದ್ರವಾಗಿ ಸಂಗ್ರಹಿಸಿಡುವ ಕಾರ್ಯದಲ್ಲಿ ಅದ್ವಿತೀಯ ಸಾಧನೆ ಮಾಡಿರುವ 9 ರಾಜ್ಯಗಳ ಕಾರ್ಯದರ್ಶಿಗಳು ಹಾಗೂ 68 ಜಿಲ್ಲಾಧಿಕಾರಿಗಳಿಗೆ ಈ ಪ್ರಶಸ್ತಿಗಳನ್ನು ರಾಷ್ಟ್ರಪತಿಯವರು ಪ್ರದಾನ ಮಾಡಲಿದ್ದಾರೆ.
- ಕರ್ನಾಟಕದಲ್ಲಿ ನಡೆದ ಜೈನ ಸನ್ಯಾಸಿ *ತ್ಯೆ ಖಂಡಿಸಿ ಜೈನ ಸಮುದಾಯದವರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಯುತ್ತಿದೆ.
- ಆಗಸ್ಟ್ 4 ರಿಂದ 15 ರವರೆಗೆ ನಡೆಯುವ ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನದ ಅಂಗವಾಗಿ ನಾನಾ ಸ್ಪರ್ಧೆಗಳನ್ನು ಆಯೋಜಿಸಿದ್ದು ನೋಂದಣಿ ಆರಂಭಿಸಲಾಗಿದೆ. ಇಕೆಬಾನ, ಥಾಯ್ ಆರ್ಟ್, ಜಾನೂರ, ತರಕಾರಿ ಕೆತ್ತನೆ ಕಲೆಗಳಿಗೆ ಸಂಬಂಧಿಸಿದ ತರಬೇತಿ ಕಾರ್ಯಕ್ರಮ ಆಗಸ್ಟ್ 5 ಮತ್ತು 6 ರಂದು ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ನಡೆಯಲಿದೆ.

- ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಶಾಲಾ ಶಿಕ್ಷಣ ಇಲಾಖೆಯು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
- ಗದಗಿನ ಡಾ. ಪಂಡಿತ್ ಪುಟ್ಟರಾಜ ಸೇವಾ ಸಮಿತಿ ನೀಡುವ ಪಂಡಿತ್ ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿಗೆ 2021-22 ಮತ್ತು 2022-23ನೇ ಸಾಲಿನಲ್ಲಿ ಪ್ರಕಟವಾದ ಕನ್ನಡ, ಹಿಂದಿ ಮತ್ತು ಸಂಸ್ಕೃತ ಭಾಷೆಯ ಸಾಹಿತ್ಯದ ಎಲ್ಲ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಲಾಗಿದೆ.
- ಭಾರತ ಮತ್ತು ಮಂಗೋಲಿಯಾದ 15ನೇ ಜಂಟಿ ಸೇನಾ ಅಭ್ಯಾಸ ಇಂದು ಮಂಗೋಲಿಯಾದ ಉಲಾನ್‌ಬಾಟರ್‌ನಲ್ಲಿ ಆರಂಭವಾಗಲಿದೆ. ರಕ್ಷಣಾ ಸಚಿವರ ಕಚೇರಿಯ ಪ್ರಕಾರ, 43 ಸದಸ್ಯರ ಭಾರತೀಯ ಸೇನಾ ತುಕಡಿಯು ನಿನ್ನೆ ಮಂಗೋಲಿಯಾಕ್ಕೆ ಅಭ್ಯಾಸದಲ್ಲಿ ಭಾಗವಹಿಸಲು ತೆರಳಿದೆ. ಮಂಗೋಲಿಯಾದಲ್ಲಿ ನೊಮ್ಯಾಡಿಕ್ ಎಲಿಫೆಂಟ್ 2023 ಹೆಸರಿನ ಜಂಟಿ ಮಿಲಿಟರಿ ವ್ಯಾಯಾಮದಲ್ಲಿ ಅವರು ಭಾಗವಹಿಸಲಿದ್ದಾರೆ. ಈ ಕಸರತ್ತು ಇದೇ 31ರವರೆಗೆ ನಡೆಯಲಿದೆ.
- ಸೇವೆಗಳಿಗೆ ಸಂಬಂಧಿಸಿದ ಕೇಂದ್ರದ ಸುಗ್ರೀವಾಜ್ಞೆಗೆ ತಡೆ ನೀಡುವಂತೆ ದೆಹಲಿ ಸರ್ಕಾರದ ಮನವಿಯನ್ನು ಸುಪ್ರೀಂ ಕೋರ್ಟ್‌ನ ಸಿಜೆಐ ಡಿವೈ ಚಂದ್ರಚ್ ನೇತೃತ್ವದ ಪೀಠ ಇಂದು ವಿಚಾರಣೆ ನಡೆಸಲಿದೆ.
- ಸಿರಿಯಾದ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅವರು ಭಾನುವಾರ ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿ ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಅವರನ್ನು ಬರಮಾಡಿಕೊಂಡರು, ಇದು 12 ವರ್ಷಗಳ ಹಿಂದೆ ಸಿರಿಯನ್ ಬಿಕ್ಕಟ್ಟಿನ ಆರಂಭದ ನಂತರ ಇರಾಕಿನ ಪ್ರಧಾನಿಯ ಮೊದಲ ಭೇಟಿಯಾಗಿದೆ.