ಕೇಂದ್ರ ಸರ್ಕಾರದ ಸಮಗ್ರ ಆಹಾರ ಭದ್ರತಾ ಯೋಜನೆಯ ವಿಸ್ತರಣೆಯ ಲಾಭ ಇಂದಿನಿಂದ ಫಲಾನುಭವಿಗಳಿಗೆ ದೊರೆಯಲಿದೆ.
ಕೇಂದ್ರ ಸಂಪುಟ ಸಮಿತಿಯ ನಿರ್ಧಾರದಂತೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯ ಯೋಜನೆಯಿಂದ ಸುಮಾರು 81 ಕೋಟಿ ಫಲಾನುಭವಿಗಳಿಗೆ ಆಹಾರಧಾನ್ಯಗಳನ್ನು ಉಚಿತವಾಗಿ ಒದಗಿಸಲಾಗುವುದು.
ಕಾಯ್ದೆಯ ಪರಿಣಾಮಕಾರಿ ಹಾಗೂ ಏಕರೂಪ ಅನುಷ್ಠಾನವನ್ನು ಯೋಜನೆ ಖಾತರಿಪಡಿಸಲಿದೆ. ಈ ಹೊಸ ಯೋಜನೆ ದೇಶಾದ್ಯಂತ ಒಂದು ರಾಷ್ಟ್ರ – ಒಂದು ಪಡಿತರ ಚೀಟಿ ಉಪಕ್ರಮದ ಸಮರ್ಪಕ ಅನುಷ್ಠಾನಕ್ಕೂ ನೆರವಾಗಲಿದೆ.

ಈ ಯೋಜನೆಯಡಿ, ಕೇಂದ್ರ ಸರ್ಕಾರದ ಅಂತ್ಯೋದಯ ಅನ್ನ ಯೋಜನೆ ಕುಟುಂಬಗಳು ಸೇರಿದಂತೆ ಎಲ್ಲಾ ಆದ್ಯತೆಯ ಕುಟುಂಬದ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ಒದಗಿಸಲಿದೆ.
ದೇಶಾದ್ಯಂತ ಐದು ಲಕ್ಷಕ್ಕೂ ಅಧಿಕ ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತದೆ. ವರ್ಷವೊಂದರಲ್ಲಿ ಎರಡು ಲಕ್ಷ ಕೋಟಿ ರೂಪಾಯಿಗಿಂತ ಅಧಿಕ ಸಹಾಯಧನವನ್ನು ಕೇಂದ್ರ ಸರ್ಕಾರ ಭರಿಸಲಿದೆ.
_CLICK to follow-support us on DailyHunt