ಬೆಂಗಳೂರು: 15ನೇ ವಿಧಾನಸಭೆಯ 13ನೇ ಅಧಿವೇಶನ ಯಶಸ್ವಿಯಾಗಿದ್ದು, 55 ಗಂಟೆ 14 ನಿಮಿಷಗಳ ಕಾಲ ಕಾರ್ಯಕಲಾಪಗಳು ನಡೆದಿವೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಅವರು, ಪೂರಕ ಅಂದಾಜಿನ ಮೊಲನೇ ಕಂತನ್ನು ಅಧಿವೇಶನದಲ್ಲಿ ಅಂಗೀಕರಿಸಲಾಗಿದೆ. ಲೆಕ್ಕ ನಿಯಂತ್ರಕ ಕಚೇರಿಯ ಮಹಾ ಲೆಕ್ಕ ಪರಿಶೋಧಕರು ನೀಡಿದ ವರದಿಯನ್ನು ಮಂಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಒಟ್ಟು 16 ವಿಧೇಯಕಗಳನ್ನು ಮಂಡಿಸಲಾಗಿದ್ದು, 14 ವಿಧೇಯಕಗಳು ಅಂಗೀಕಾರವಾಗಿವೆ. 1 ವಿಧೇಯಕ ಹಿಂಪಡೆದುಕೊಂಡಿದ್ದೇವೆ. 2 ವಿಧೇಯಕಗಳನ್ನು ಚರ್ಚೆಗೆ ತೆಗೆದುಕೊಳ್ಳಬೇಕಿದೆ ಎಂದರು.

ವಿಶ್ವೇಶ್ವರ ಹೆಗಡೆ ಕಾಗೇರಿ _ ವಿಧಾನಸಭಾಧ್ಯಕ್ಷರು
ಹತ್ತು ದಿನಗಳ ಅಧಿವೇಶನದಲ್ಲಿ 150 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಗಿದೆ. 1,650 ಪ್ರಶ್ನೆಗಳಿಗೆ ಲಿಖಿತವಾಗಿ ಉತ್ತರಿಸಲಾಗಿದೆ. 85 ಗಮನ ಸೆಳೆಯುವ ಸೂಚನೆಯನ್ನು ಕಾರ್ಯಕಲಾಪ ಪಟ್ಟಿಗೆ ಸೇರಿಸಿ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
ನಿಯಮ 69 ಅಡಿಯಲ್ಲಿ 7 ಸೂಚನೆಗಳನ್ನು ಚರ್ಚೆ ಮಾಡಲಾಗಿದೆ. ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಬೆಳಗಾವಿಯ ಅಧಿವೇಶನದಲ್ಲಿ ನೀಡಲಾಗುವುದು. ಅಧಿವೇಶನದಲ್ಲಿ ಶೇಕಡ 99 ರಷ್ಟು ಹಾಜರಾತಿ ಇತ್ತು.
ಅತಿವೃಷ್ಠಿ ಕುರಿತು 36 ಸದಸ್ಯರು ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ಅಧಿವೇಶನದ ಕೊನೆಯ ದಿನವಾದ ಇಂದು ಸದಸ್ಯರ ಧರಣಿಯಿಂದ ಕಾರ್ಯಕಲಾಪಗಳು ಸುಗಮವಾಗಿ ನಡೆಯಲಿಲ್ಲ. ಆದರೆ, ಉಳಿದ ಎಲ್ಲಾ ದಿನಗಳ ಕಲಾಪವು ಸುಗಮವಾಗಿ ನಡೆದಿದೆ ಎಂದರು.
_ನಮ್ಮನ್ನು ಡೇಲಿಹಂಟ್ ನಲ್ಲಿ ಫಾಲೋ ಮಾಡಲು ಕ್ಲಿಕ್ಕಿಸಿ