ಉತ್ತರ ಕರ್ನಾಟಕವು (ಕಲ್ಯಾಣ ಕರ್ನಾಟಕ) ಕಲೆ-ಪ್ರತಿಭೆ-ಸಾಹಿತ್ಯ ಹಾಗೂ ರಾಜಕೀಯ ಸಂಬಂಧಪಟ್ಟಂತೆ ವಿಶೇಷ ಛಾಪುಗಳನ್ನು- ಸಂಪನ್ಮೂಲ ವ್ಯಕ್ತಿಗಳನ್ನು ಕೊಡುಗೆಯಾಗಿ ನಿಡುತ್ತಾ ಬಂದಿದೆ.
ಇವತ್ತು ನಮ್ಮ ಜೊತೆ ಇದ್ದಾರೆ ಉತ್ತರಕರ್ನಾಟಕ ಭಾಗದ ಉದಯೋನ್ಮುಖ ಚಲನಚಿತ್ರ ನಿರ್ಮಾಪಕ- ನಿರ್ದೇಶಕರಾದ ಬಸವರಾಜ ಹಿರೇಮಠ!
ಅವರು ನಿರ್ಮಾಪಕ/ ನಿರ್ದೇಶನದತ್ತ ಮುಖ ಮಾಡಿ ಚೊಚ್ಚಲ ಚಿತ್ರವಾಗಿ ಮುಖ್ಯ ಪಾತ್ರದಲ್ಲಿ ಹೆಸರಾಂತ ನಟರಾದ ಅಭಿಜಿತ್ ಸೇರಿದಂತೆ ಸಹ ಇತರೆ ಸಹ ತಾರಾ ಬಳಗದ, ದ್ರಾಕ್ಷಾಯಿಣಿ ಮೂವಿ ಮೇಕರ್ಸ್ ಲಾಂಛನದಲ್ಲಿ 2013 ರಲ್ಲಿ ಶ್ರೀ ಅಮರೇಶ್ವರ ಮಹಾತ್ಮೆ ಎಂಬ ಪೌರಾಣಿಕ ಹಿನ್ನಲೆಯುಳ್ಳ – ಧಾರ್ಮಿಕ ಕಥಾವಸ್ತು ಆಧಾರಿತ ಚಲನಚಿತ್ರವನ್ನು ನಿರ್ಮಿಸಿದ್ದಾರೆ.

ತದನಂತರ ಗಾಂಧಿನಗರದ ನಂಟು-ಗೆಳೆತನ ಮುಂದುವರೆಸಿದ್ದಾರೆಯೇ? ಈ ರಂಗದಲ್ಲಿನ ಸವಾಲುಗಳೇನು? ಗೆಲ್ಲಬಹುದೇ ? ಸಧ್ಯಕೆ ಅವರೇನು ಮಾಡಿಕೊಂಡಿದ್ದಾರೆ? ಕೋವಿಡ್-19 ರ ಒಂದಿಷ್ಟು ಸಡಿಲಿಕೆ ನಂತರ ಅವರ ಮುಂದಿನ ಪ್ರಾಜೆಕ್ಟ್ ಗಳೇನು? ಬನ್ನಿ ಅವರನ್ನೆ ಮಾತ್ನಾಡಿಸೋಣ!
*ನಾನು ಮೂಲತಃ ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದವನು, ಓದಿದ್ದು ಸ್ಥಳೀಯ ವಿ ಸಿ ಬಿ ಕಾಲೇಜಿನಲ್ಲಿ ಬಿ ಎ ಪದವಿಧರ,ಕರಾಟೆ ಪಟುವೂ ಕೂಡಾ.
ಪ್ರಾರಂಭದಲ್ಲಿ ಹವ್ಯಾಸಗಳು ಕರಾಟೆ ಕಲಿಯುವುದು ಮತ್ತು ಕಲಿಸುವುದು ಅಲ್ಲದೇ ನಾಟಕ, ಸಾಂಧರ್ಭಿಕ ಸಾಮಾಜಿಕ ಚಟುವಟಿಕೆಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುವುದು ಆಗಿದ್ದವು, ಕೋವಿಡ್-19 ಮುನ್ನೆಚ್ಚರಿಕೆ ಹಾಗೂ ಬಂದ್ ಸಂದರ್ಭದಲ್ಲಿ ಇತರರಂತೆ ನಾನೂ ಕೂಡಾ ಸಿನಿಮಾ ವೀಕ್ಷಣೆ ಮತ್ತು ವರ್ತಮಾನದ ಸ್ಯಾಂಡಲ್ ವುಡ್ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುವುದರಲ್ಲಿ ತೊಡಗಿಕೊಂಡಿದ್ದೆ.
>ಚಲನಚಿತ್ರ ನಿರ್ಮಾಣದತ್ತ ಓಲವು–ಆಸಕ್ತಿ ಮೂಡಿದ್ಹೇಗೆ? ಪ್ರೇರಣೆ ಯಾರು? ಸ್ಯಾಂಡಲ್ ವುಡ್ ಫೀಲ್ಡಲ್ಲಿ ನಿಮ್ಮ ಗಾಡ್ ಫಾದರ್?
* ಪ್ರಾರಂಭದಿಂದಲೂ ಕಲೆ ಅಭರುಚಿ ಇದ್ದಕಾರಣ ಚಲನಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಆಸಕ್ತಿ ಇತ್ತು, ಇದೇವೂ ಕೂಡಾ!
ಕರಾಟೆ ಪಟು ಆದ್ದರಿಂದ ಮುಂಚೆ ಸಹ ಸಂಗಡಿಗರಿಗೆ–ಗೆಳಯರಿಗೆ, ಕರಾಟೆ ಕಲಿಯಲು ಬರುತ್ತಿದ್ದ ಜ್ಯೂನಿಯರ್ಸ್ ಗೆ ಕರಾಟೆ ಮೂವ್ ಮೆಂಟ್–ಅಭ್ಯಾಸ ಹೇಳಿಕೊಡುವ ಒಂದು ಹವ್ಯಾಸ ಇವತ್ತಿಗೆ ಒಂದು ನಿರ್ದೇಶನದ ಭಾಗವಾಗಿದೆ ಎಂದು ಹೇಳಿದರೆ ತಪ್ಪಾಗಿಲಿಕ್ಕಿಲ್ಲ.
ಗಾಡ್ ಫಾದರ್ ಅಂದ್ರೆ ಬೆಂಗಳೂರು ಮೂಲದ ಖ್ಯಾತ ಸಾಹಿತಿ-ನಿರ್ದೇಶಕ-ನಿರ್ಮಾಪಕ ದಿ: ಹಲಗೂರು ವೆಂಕಟೇಶ.

>ಚಲನಚಿತ್ರ ನಿರ್ಮಾಣದಿಂದ ಬಿಡುಗಡೆಯ ಕುರಿತಾದ ಪ್ರಾಥಮಿಕ ಹಂತಗಳು ! ಟೆಕ್ನಿಕಲ್ ಆಗಿ ಇರುವ ಸಾಮಾನ್ಯ ಪ್ರಾರಂಭಿಕ/ಸಾಂಪ್ರದಾಯಿಕ ರೀತಿ ರಿವಾಜುಗಳು!
* ಕಥೆಯನ್ನು ಆಯ್ಕೆ ಮಾಡಿಕೊಳ್ಳುವುದು, ಅದು ಯಾವ ವರ್ಗಕ್ಕೆ ತಲುಪುವುದು, ಕಥಾವಸ್ತುವಿನ ಗಟ್ಟಿತನ ನೋಡಿ ಸಂಭಾಷಣೆ ಬರೆಸುವುದು, ನಂತರ ಸಂಗೀತ–ಸಾಹಿತ್ಯ ಬರೆಸುವುದು ಮತ್ತು ಕ್ಯಾಮೇರಾ ಮ್ಯಾನ್ ನಿಂದ ಹಿಡಿದು ಕಿರಿಯ ಸಹ ಸಹಾಯಕರು–ಟೆಕ್ನಿಷೀಯನ್ ಇವರ ಆಯ್ಕೆ, ಪಾತ್ರಗಳಿಗೆ ಸೂಕ್ತ ಕಲಾವಿದರ ಆಯ್ಕೆ ಮಾಡಿಕೊಳ್ಳುವುದು. ಚಿತ್ರಿಕರಣದ ಲೊಕೇಷನ್, ಆಯ್ಕೆ ಮಾಡಲ್ಪಟ್ಟ ಕಲಾಬಳಗದ ಶೆಡ್ಯೂಲ್ ಹಾಕಿ ಚಿತ್ರಿಕರಣ ಪ್ರಾರಂಭಿಸುವುದು.
>ಚೊಚ್ಚಲ ಚಲನಚಿತ್ರಕ್ಕೆ ಯಾವ ರೀತಿ ಹೋಂವರ್ಕ್/ ಕಲಾವಿದರ ಆಯ್ಕೆ/ನಿರ್ಮಾಣ ಹಂತದಲ್ಲಿನ ಸವಾಲುಗಳೇನಿದ್ದವು? ಅವುಗಳನ್ನು ಹೇಗೆ ನಿಭಾಯಿಸಿದ್ದ್ರಿ?
* ಮೊದಲು ಕಥೆಯ ಮೂಲ ಮತ್ತು ಸಾಧ್ಯವಾದಷ್ಟು ಇತಿಹಾಸದ ಕ್ರೋಢಿಕರಣ, ನನ್ನದೇ ರೀತಿಯಲ್ಲಿ ಕಥೆಯನ್ನು ಮಾಡಿದೆ.
ಮತ್ತು ಸೂಕ್ತರಾದ ಕಲಾವಿದರನ್ನು ಆಯ್ಕೆ ಮಾಡಿಕೊಂಡೆ.
ನಿರ್ಮಾಣದ ಪ್ರತಿಯೊಂದು ಹಂತವು ನನಗೆ ಹೊಸದಾಗಿತ್ತು, ತುಂಬಾ ಕಠೀಣ ಸಮವಾಗಿತ್ತು.
ನನ್ನ ಸ್ನೇಹಿತರ ಸಹಕಾರ–ಮಾರ್ಗದರ್ಶನದಿಂದ ಎದುರಾಗಿದ್ದ ಸವಾಲುಗಳನ್ನು ನಿಭಾಯಿಸಿದೆ.

>ಶ್ರೀ ಅಮರೇಶ್ವರ ಮಹಾತ್ಮೆ ಚಲನಚಿತ್ರ ಬಿಡುಗಡೆಗೆ ಸಿದ್ದವಾಯಿತು! ಬಿಡುಗಡೆಯ ಹಾದಿಯಲ್ಲಿ ತಮ್ಮ ಅನುಭವ? ಗಾಂಧಿನಗರದ/ ಮಂಡಳಿಯ ಸಹಕಾರ ಯಾವ ತೆರನಾಗಿತ್ತು?
*ಯಾವುದೇ ಒಂದು ಚಿತ್ರ ನಿರ್ಮಾಣ ಮಾಡಿಬಿಡಬಹುದು ಆದರೆ ಬಿಡುಗಡೆ ತುಂಬಾ ಕಠಿಣವಾದ್ದು, ಪ್ರತಿ ಹಂತದಲ್ಲಿ ಹೆಣಗಾಡಬೇಕು ಮತ್ತು ಒಳ್ಳೆಯ ಬಜೆಟ್ ಕಲಾವಿದರಿದ್ದರೆ ಬಿಡುಗಡೆ ಸರಳ, ಇಲ್ಲವೆಂದರೆ ಎಲ್ಲ ಹಾದಿಯೂ ಕಠಿಣವಾದದ್ದು.
ಸಿನಿಮಾ ಬಿಡುಗಡೆಗೆ ಮಂಡಳಿಯ ಸಹಕಾರ ಅಷ್ಟೊಂದು ಇರುವುದಿಲ್ಲವೆನ್ನಬಹುದು, ಗಾಂಧಿನಗರ ಸಮುದ್ರ ಇದ್ದಂತೆ ಆಳ ಬೇಗ ಸಿಗಲ್ಲ.
>ಶ್ರೀ ಅಮರೇಶ್ವರ ಮಹಾತ್ಮೆ ಚಲನಚಿತ್ರಕ್ಕೆ ಕಲ್ಯಾಣ ಕರ್ನಾಟಕ ಸೇರಿ, ಒಟ್ಟಾರೆಯಾಗಿ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿತ್ತು? ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷರನ್ನು ತಲುಪಿ, ನಿಮ್ಮ ಶ್ರಮಕ್ಕೆ ಪ್ರತಿಫಲ–ತೃಪ್ತಿ ದೊರಕಿತಾ?
*ಹೊಸ ಕಲಾವಿದರಿಗೆ ಮತ್ತು ಮಧ್ಯಮ ಬಜೆಟ್ ಚಿತ್ರಗಳಿಗೆ ಪ್ರದರ್ಶನ–ಪ್ರಚಾರದ ಅವಶ್ಯಕತೆಯಿದೆ.
ನಾವು ಪ್ರತಿಯೊಂದು ಸಾಮಾಜಿಕ ಪರಿಸ್ಥಿತಿ ಹಾಗೂ ಸ್ಥಳಿಯ ಕಾರ್ಯಕ್ರಮಗಳನ್ನುನೋಡಿ ಸಿನಿಮಾ ಬಿಡುಗಡೆಗೊಳಿಸಬೇಕು ಇಲ್ಲವಾದ್ರೆ ಅದು ಜನರಿಗೆ ತಲುಪಲು ವಿಫಲವಾಗಬಹುದು,

ಖಂಡಿತ ತೃಪ್ತಿ-ಪ್ರತಿಫಲ- ಪ್ರತ್ಸಾಹ ಸಿಕ್ಕಿತು. ಅದರ ಪರಿಣಾಮವೇ ಮತ್ತೊಂದು ಚಿತ್ರ ನಿರ್ಮಾಣಕ್ಕೆ ಕೈ ಹಾಕಿರೋದು, ಚಿತ್ರಿಕರಣ ಮುಗಿದು ಬಿಡುಗಡೆಯ ಹಂತದಲ್ಲಿದೆ.
>ಚಲನಚಿತ್ರ ನಿರ್ಮಾಣಕ್ಕೆ ತಾರಾಬಳಗದ ಅನುಭವ–ಟೆಕ್ನಿಷೀಯನ್ಸ್ ಹಾಗೂ ಆ ಚಿತ್ರ ಕುಟುಂಬ ಹೇಗಿರಬೇಕು? ಯಾವ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ?
* ತಾರಾಬಳಗದ –ಟೆಕ್ನಿಷೀಯನ್ಸ್ ಅನುಭವ–ಪ್ರತಿಭೆ ಹಾಗೂ ಚಿತ್ರಕಥಾವಸ್ತು, ಹಣ ಹೂಡಿಕೆಯೂ ಅಷ್ಟೇ ಮುಖ್ಯ.
ಎಲ್ಲರೂ ಒಂದು ಕುಟುಂಬದವರಂತಿದ್ದು ಇದು ನಮ್ಮ ಕನಸಿನ ಕೆಲಸ ಎಂದು ಮಾಡಬೇಕು ಅಂದಾಗ ಮಾತ್ರ ಉತ್ತಮ ಚಿತ್ರವನ್ನು ನೀಡಬಹುದು.
>ಸಧ್ಯಕ್ಕೆ ಈಗ ಯಾವ ಚಿತ್ರ ನಿರ್ಮಾಣ/ನಿರ್ದೇಶನಕ್ಕೆ ಕೈ ಹಾಕಿದ್ದೀರಿ? ಅದರ ಚಿತ್ರ ಕಥಾವಸ್ತು– ತಾರಾಬಳಗದ ಬಗ್ಗೆ ಒಂದಿಷ್ಟು! ಇವಾಗ ಯಾವ ಹಂತದಲ್ಲಿದೆ?
* “ಚೇರ್ಮನ್” ಎನ್ನುವ ಹಳ್ಳಿಯ ಸೊಗಡಿನ, ಗ್ರಾಮ ಪಂಚಾಯಿತಿ ಕಥೆಯನ್ನು ಆಯ್ಕೆ ಮಾಡಿಕೊಂಡು ಅದರ ನಿರ್ಮಾಣ–ನಿರ್ದೇಶನದ ಜವಾಬ್ದಾರಿ ನನ್ನ ಮೇಲಿದೆ, ಪ್ರದರ್ಶನಕ್ಕೆ ಸಿದ್ಧವಾಗಿದೆ.
“ಚೇರ್ಮನ್” ಚಲನಚಿತ್ರದಲ್ಲಿ ಅನುಭವಿ ತಾರಾಬಳಗವಿದೆ, ಕಿರುತೆರೆಯ ಪ್ರಸಿದ್ದ ಹಾಡುಗಾರರ ಧ್ವನಿ ಹಾಗೂ ಹಾಡಿನ ಸಾಹಿತ್ಯವು ಸಾಮಾಜಿಕ ಜಾಲತಾಣದ ಮೂಲಕ ರಾಜ್ಯದ ಪ್ರೇಕ್ಷಕರ ಮನಮುಟ್ಟುತ್ತಿದೆ.
ಕೋವಿಡ್-19 ನಿಂದ ಚಿತ್ರ ಬಿಡುಗಡೆ ವಿಳಂಬವಾಗುತ್ತಿದೆ, ನಮ್ಮ ಭಾಗದ ಸ್ನೇಹಿತರ–ಪ್ರೇಕ್ಷಕರ ಬಿಡುಗಡೆ ಕುರಿತಾಗಿ ಒತ್ತಡ ಹಾಕುತ್ತಿದ್ದಾರೆ, ಆದಷ್ಟು ಬೇಗ ಬಿಡುಗಡೆಯ ಪ್ರಕ್ರಿಯೆಗೆ ಮತ್ತಷ್ಟು ವೇಗವನ್ನು ನೀಡಲು ನಮ್ಮ ಇಡೀ ತಂಡ ಮಾಡುತ್ತದೆ.

>ಕೋವಿಡ್-19 ರ ಸಡೀಲಿಕೆಯಿಂದ ಚಿತ್ರರಂಗ ತುಂಬಾ ಬ್ಯೂಸಿಯಾಗಿದೆ ಮತ್ತು ಸಾಕಷ್ಟು ಚಲನಚಿತ್ರಗಳು ಬಿಡುಗಡೆಯ ಹಂತದಲ್ಲಿವೆ, ಇಂತಹ ಸನ್ನಿವೇಶದಲ್ಲಿ ನಿಮ್ಮ “ ಚೇರ್ಮನ್” ಎಷ್ಟರ ಮಟ್ಟಿಗೆ ಚಿತ್ರರಸಿಕರನ್ನ ರಂಜಿಸಬಹುದು?
*ಇತ್ತೀಚಿಗೆ ಟೆಕ್ನಾಲಜಿ ಸರಳವಾಗಿದ್ದು ಸಾಕಷ್ಟು ಚಿತ್ರಗಳು ನಿರ್ಮಾಣ ಆಗುತ್ತಿವೆ, ಆದರೆ ಬಿಡುಗಡೆ–ಪ್ರದರ್ಶನ ಇಂದು ಸವಾಲಾಗಿದೆ.
ಸಿನಿಮಾ ನಿರ್ಮಾಣಕ್ಕೆ ಹೂಡಿದ ಹಣ ಮರಳಿ ಬರುತ್ತಿಲ್ಲ ಮತ್ತೊಂದೆಡೆ ಪೈರಸಿ ಹೆಚ್ಚಾಗಿದೆ.
ಈ ಮೊದಲೇ ಹೇಳಿದಂತೆ “ಚೇರ್ಮನ್” ನ ಹಾಡುಗಳು–ಸಾಹಿತ್ಯ –ಹಾಡುಗಾರರ ಧ್ವನಿ ಕುರಿತಾಗಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ, ʻ ಓ ನೊಂದ ಜೀವವೇ ʼ ಎನ್ನುವ ಹಾಡು ಈಗಾಲಲೇ ಮನೆ ಮಾತಾಗಿದೆ, ಚಿತ್ರವೂ ಸಹ ಚೆನ್ನಾಗಿ ಮೂಡಿ ಬಂದಿದೆ, ಖಂಡಿತ ಪ್ರೇಕ್ಷಕ ಪ್ರಭುಗಳಿಗೆ “ ಚೇರ್ಮನ್” ರಂಜಿಸಲಿದ್ದಾನೆ.

>ಚಲನಚಿತ್ರ ನಿರ್ಮಾಣ/ ನಿರ್ದೇಶನದ ಹಾದಿಯಲ್ಲಿ ತಾವು ಪಟ್ಟ ಕಷ್ಟ–ನಷ್ಟಗಳ ಬಗ್ಗೆ ಒಂದಿಷ್ಟು ! ಸಾಥ್ ನೀಡಿ, ಧೈರ್ಯ ತುಂಬಿ ಬೆನ್ ತಟ್ಟಿದವರು?
* ಚಲನಚಿತ್ರ ನಿರ್ಮಾಣ ಸಂಪೂರ್ಣವಾಗಿ ಹಣದ ಮೇಲೆಯೇ ನಿಂತಿರುತ್ತೆ ಅಂತ ಹೇಳಿದರೆ ತಪ್ಪಾಗಲಿಕ್ಕಿಲ್ಲ, ಮೊದಲು ಇಲ್ಲಿ ನಂಬಿಕೆ ತುಂಬಾ ಮುಖ್ಯ. ಚಿತ್ರದ ಯಾವುದೇ ಒಂದು ಭಾಗಕ್ಕೆ ಹಣದ ಅವಶ್ಯಕತೆ ಇದ್ದಾಗ ಪರಿಶೀಲಿಸಬೇಕು-ತಾಳ್ಮೆಯು ಇರಬೇಕು.
ಪ್ರಸ್ತುತವಾಗಿ ಚಿತ್ರ ನಿರ್ಮಾಣಕ್ಕೆ ಹೂಡಿಕೆ ಮಾಡಿದ ಹಣವು ಮರಳುವಿಕೆ ಕುರಿತಾಗಿ ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆ ಎದುರಾಗಿ, ಏಳು–ಬೀಳುಗಳನ್ನು ಕಂಡವರನ್ನು ಹಾಗೂ ಹೂಡಿಕೆ ದುಪ್ಪಟ್ಟಷ್ಟು ಮರಳಿ ಪಡೆದವರನ್ನ ಕಾಣಬಹುದು, ಹಾಗಾಗಿ ಹೂಡಿಕೆ ಹಣ ವಾಪಸ್ಸು ಬರುವುದು ಕಷ್ಟಸಾಧ್ಯ.
ನನ್ನ ಈ ಸಿನಿಮಾದ ಸಣ್ಣ ಜರ್ನಿಯಲ್ಲಿ ಸಾಕಷ್ಟು ಏಳು–ಬಿಳುಗಳಿಗೆ ನನ್ನ ಕುಟುಂಬ ಸಾಕಷ್ಟು ಧೈರ್ಯ ನೀಡಿದೆ ಹಾಗೂ ನನ್ನ ವಿಶ್ವಾಸಾರ್ಹ ಸ್ನೇಹಿತರ ಬಳಗ ಸಾಥ್ ನೀಡಿ, ಬೆನ್ನು ತಟ್ಟುತ್ತಿದೆ.
>ಇಷ್ಟೇಲ್ಲ ಹರಸಾಹಸ ಅಲ್ಲದೇ ಚಿತ್ರ ನಿರ್ಮಾಣದತ್ತ ನಿಮ್ಮ ಸದುಭಿರುಚಿ ಯಾವ ತೆರನಾಗಿ ಉಳಿದುಕೊಂಡಿದೆ? ಅದು ಯಾವ ಮಟ್ಟದಲ್ಲಿದೆ ಎಂದು ತಿಳ್ಕೋಬಹುದಾ?
* ಸಿನಿಮಾ ಸದಭಿರುಚಿ ಉಳಿದುಕೊಂಡಿದೆ ಅಲ್ಲದೇ ನಮ್ಮ ಕನ್ನಡ ಚಲನಚಿತ್ರವನ್ನು ಸಿರಿವಂತಿಕೆ ಮಾಡುವ – ಸಾಹಸ ಮಾಡುವ – ಚಿತ್ರರಂಗ ಬೆಳೆಯುವಿಕೆಯ ಹಾದಿಯಲ್ಲಿ ಚಿತ್ರ ನಿರ್ಮಾಣದ ಆಸಕ್ತಿ ಉಳಿಸಿಕೊಳ್ಳಬೇಕೆಂಬುದು ನನ್ನ ಆಶಯ, ಸಿನಿಮಾ ಮನುಷ್ಯನ ಭಾವನೆಯ ಪ್ರತಿಬಿಂಬ. ಸಿನಿಮಾ ಸೋತವನಿಗೆ ಬದುಕುವ ಛಲ ನೀಡುವುದು, ಸಾಧನೆಗೆ ಸ್ಪೂರ್ತಿ ನೀಡುವುದು, ಕುಟುಂಬ – ಸ್ನೇಹಿತರನ್ನ ಒಗ್ಗೂಡಿಸುವುದು, ಮಾನವಿಯತೆಯನ್ನುಎತ್ತಿ ಹಿಡಿಯುವುದು.
ನನ್ನ ಸಿನಿಮಾದಲ್ಲಿ ಸಾಮಾಜಿಕ ಅಭಿವೃದ್ಧಿ- ಮಾನವೀಯ ಮೌಲ್ಯಗಳ ಬಗ್ಗೆ ಸಂದೇಶವಿರುತ್ತದೆ.
>ಕೊನೆಯದಾಗಿ ಚಿತ್ರರಂಗಕ್ಕೆ/ಭಾಷೆಗೆ/ಕಲೆಗೆ ಹಾಗೂ ಕನ್ನಡ ಪ್ರೇಕ್ಷಕರಿಗೆ ತಮ್ಮ ಸಂದೇಶ!
* ಪ್ರಸ್ತುತವಾಗಿ ಚಿತ್ರರಂಗ–ಕಲಾವಿದರು –ಸಹ ಕಲಾವಿದರು– ನಿರ್ಮಾಣಕ್ಕೆ ಬೇಕಾದ ಪ್ರತಿಯೊಂದು ತಂಡದ ಸದಸ್ಯನು ಕೂಡಾ ಕೋವಿಡ್-19 ನಿಂದ ಸಂಪೂರ್ಣವಾಗಿ ನಲುಗಿ ಹೋಗಿದ್ದಾರೆ, ಎಲ್ಲಾ ವಲಯದಲ್ಲಿಯೂ ಸಂಕಷ್ಟ ಇದೆ, ಶೀಘ್ರದಲ್ಲಿ ಚೇತರಿಕೆ ಕಾಣುವ ಭರವಸೆ ಇದೆ.
ಒಂದು ಸಿನಿಮಾ ನಿರ್ಮಾಣವಾಗಬೇಕಾದ್ರೆ ನಿರ್ಮಾಪಕ ಮುಖ್ಯ, ಒಂದು ಸಿನಿಮಾದಿಂದ ಕನ್ನಡ ಭಾಷೆ–ಕಲೆ–ಸಂಸ್ಕೃತಿ ಉಳಿಯುವುದು. ಕಾರಣ ಪ್ರತಿಯೊಬ್ಬ ಕನ್ನಡ ನಿರ್ಮಾಪಕರನ್ನ ಪ್ರೀತಿಸಿ ಬೆಳೆಸಿ, ಅವರು ನಿರ್ಮಿಸಿದ ಚಿತ್ರವನ್ನು ನೋಡಿ, ಹರಸಿ. ಕನ್ನಡ ಉಳಿವಿಗೆ ಕನ್ನಡಿಗ ಪ್ರೇಕ್ಷಕರೇ ಜೀವಾಳ–ದೈವ, ಇಲ್ಲಿಯತನಕ ಸಿನಿಮಾರಂಗ ಬೆಳೆಸಿ–ಪೋಷಿಸಿದ ಎಲ್ಲ ವರ್ಗದ ಹೆಸರು ಉಳಿಯಬೇಕಾದರೆ ನಮ್ಮ ಕನ್ನಡ ಚಿತ್ರರಂಗ ಇನ್ನೂ ಗಟ್ಟಿಯಾಗಿ ಉಳಿದು ಬೆಳೆಯಬೇಕು ಎಂಬುದು ನನ್ನ ಆಶಯ.
—————–