ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಗೆ ಇನ್ನು ಎರಡು ದಿನ ಬಾಕಿಯಿರುವ ಹಿನ್ನೆಲೆ ಇಂದು ಅಂತಿಮ ಹಂತದ ತಾಲೀಮು ನಡೆಸಲಾಯಿತು. ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು ಸೇರಿದಂತೆ 8 ಆನೆಗಳು, ಅಶ್ವಾರೋಹಿ ಪಡೆ, ಪೊಲೀಸ್ ಪಡೆ, ವಿವಿಧ ವಾದ್ಯವೃಂದ ಅರಮನೆ ಆವರಣದಲ್ಲಿ ನಡೆದ ತಾಲೀಮಿನಲ್ಲಿ ಭಾಗವಹಿಸಿದ್ದವು.
ಜಂಬೂಸವಾರಿ ಮೆರವಣಿಗೆಯಲ್ಲಿ 6 ಸ್ತಬ್ದ ಚಿತ್ರಗಳು, 5 ಕಲಾತಂಡಗಳು ಭಾಗವಹಿಸಲಿವೆ. ವಿಜಯದಶಮಿಯಂದು ಅರಮನೆ ಸುತ್ತಮುತ್ತ ನಿರ್ಬಂಧ ಹೇರಲಾಗಿದ್ದು, 500 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಹಿರಿಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್, ಅಶ್ವಾರೋಹಿ ಹಾಗೂ ಗಜಪಡೆಗಳು ಯಶಸ್ವಿಯಾಗಿ ತಾಲೀಮು ನಡೆಸುತ್ತಿವೆ. ಜಂಬೂ ಸವಾರಿ ವೇಳೆ ಯಾವುದೇ ಅವಗಢ ಜರುಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದರು.
