- ಇತ್ತೀಚಿಗೆ ಆಂಧ್ರಪ್ರದೇಶದ ಶ್ರೀಶೈಲಂ ನ ಗಲಭೆಯಲ್ಲಿ ಗಾಯಗೊಂಡಿದ್ದ ಹಿರೇಮಠ್.
- ತಲೆ ಬುರುಡೆಯು ಮೂರ್ನಾಲ್ಕು ಭಾಗಗಳಾಗಿ ಒಡೆದಿತ್ತು.
- ಸ್ಮರಣ ಶಕ್ತಿ ಕಳೆದುಕೊಂಡಿದ್ದ ಯುವಕ ಶ್ರೀಶೈಲ ಹಿರೇಮಠ.
- ಕ್ರೆನಿಯಾಟಮಿ, ಡುರೊಪ್ಲಾಸ್ಟಿ ಮೂಲಕ ಪ್ರಾಣ ಉಳಿಸಿದ ಡಾ. ಅಮರೇಶ ದೇಗಿನಾಳ.
ಬಾಗಲಕೋಟೆ: ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ ಶ್ರೀಕುಮಾರೇಶ್ವರ ಆಸ್ಪತ್ರೆಯ ನರರೋಗ ವಿಭಾಗದ ತಜ್ಞ ವೈದ್ಯರಾಗಿರುವ ಡಾ.ಅಮರೇಶ ದೇಗಿನಾಳ ಅವರು ಯುವಕನ ಮಿದುಳಿನ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಹಿನ್ನಲೆ: ಜಿಲ್ಲೆಯ ಬೀಳಗಿ ತಾಲೂಕಿನ ಜಾನಮಟ್ಟಿ ಗ್ರಾಮದ ನಿವಾಸಿ 27 ವರ್ಷದ ಶ್ರೀಶೈಲ ಹಿರೇಮಠ ಇತ್ತೀಚಿಗೆ ಮಾರ್ಚ್ 30 ರಂದು ರಾತ್ರಿ ಶ್ರೀಶೈಲಂ ನಲ್ಲಿ ನೀರಿನ ಬಾಟಲ್ ಗಾಗಿ ಜರುಗಿದ ದುರ್ಘಟನೆಯಲ್ಲಿ ತಲೆಗೆ ಪೆಟ್ಟು ಬಿದ್ದು ತೀವ್ರವಾಗಿ ಗಾಯಗೊಂಡಿದ್ದ.

ವಿವರ : ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಬಳಿಕ ಹಿರೇಮಠ ನನ್ನು ಸ್ವಗ್ರಾಮಕ್ಕೆ ಕಳುಹಿಸಿಕೊಡಲಾಗಿತ್ತು, ಆದರೂ ತಲೆಯಲ್ಲಿ ನೋವಿನೊಂದಿಗೆ ಕೀವು ಕಾಣಿಸಿಕೊಂಡ ನಂತರ ಹಾನಗಲ್ ಶ್ರೀಕುಮಾರೇಶ್ವರ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ದಾಖಲಾದ, ತಲೆಗೆ ತೀವ್ರ ಪೆಟ್ಟಾಗಿ ಮೆದಿಳಿನ ಮೇಲೆ ಪರಿಣಾಮ ಬೀರಿತ್ತು, ರಕ್ತಸ್ರಾವವಾಗಿದ್ದರಿಂದ ಯುವಕನಿಗೆ ಸ್ಮರಣಶಕ್ತಿ ಕಳೆದುಹೊಗಿತ್ತು ಮತ್ತು ನಡೆದಾಡಲು ಬರುತ್ತಿರಲಿಲ್ಲ. ಈತನಿಗೆ ತಕ್ಷಣ ಮಿದುಳಿನ ಸಿಟಿ ಸ್ಕ್ಯಾನ್ ಮಾಡಿದಾಗ ತಲೆ ಬುರುಡೆಯು ಮೂರ್ನಾಲ್ಕು ಭಾಗಗಳಾಗಿ ಒಡೆದಿದ್ದು ಕಂಡು ಬಂತು.
ತಕ್ಷಣ ಡಾ.ಅಮರೇಶ ದೇಗಿನಾಳ ಅವರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ರಕ್ತಸ್ರಾವ ನಿಲ್ಲಿಸಿ, ಮಿದುಳಿನ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ (ಕ್ರೆನಿಯಾಟಮಿ, ಡುರೊಪ್ಲಾಸ್ಟಿ) ಮಾಡುವುದರ ಮೂಲಕ ಯುವಕನನ್ನು ಪ್ರಾಣಾಪಾಯದಿಂದ ಪಾರು ಮಾಡಿದರು.
ಸಧ್ಯ ಶ್ರೀಶೈಲ ಹಿರೇಮಠ ಮತ್ತು ಆತನ ಕುಟುಂದವರು ತಜ್ಞ ವೈದ್ಯ ಡಾ. ದೇಗಿನಾಳ ಅವರಿಗೆ ಧನ್ಯತಾ ಭಾವದೊಂದಿಗೆ ಕೃತಜ್ಞತೆ ತಿಳಿಸಿದ್ದಾರೆ.
ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ರೋಗಿಯನ್ನು ಗುಣಮುಖಗೊಳಿಸಿದ ನರರೋಗ ವಿಭಾಗದ ತಜ್ಞವೈದ್ಯರಾಗಿರುವ ಡಾ. ಅಮರೇಶ ದೇಗಿನಾಳ ಅವರನ್ನು ಶಾಸಕರು ಹಾಗೂ ಬಿ ವಿ ವಿ ಸಂಘದ ಕಾರ್ಯಾಧ್ಯಕ್ಷರಾಗಿರುವ ಡಾ. ವೀರಣ್ಣ ಸಿ ಚರಂತಿಮಠ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರು), ಎಸ್ ಎನ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಮಲ್ಲಾಪುರ, ವೈದ್ಯಕೀಯ ಅಧೀಕ್ಷಕಿ ಡಾ. ಭುವನೇಶ್ವರಿ ಯಳಮಲಿ ಮತ್ತು ಡಾ. ಶಿವಕುಮಾರ ಸೊಲಬನ್ನವರ್ ಅಭಿನಂದಿಸಿದ್ದಾರೆ.
ಈಗ ಯುವಕನು ಜ್ಞಾಪನಾಶಕ್ತಿಯೊಂದಿಗೆ ಗುರುತು ಹಿಡುಯುವುದು, ಸ್ವಲ್ಪ ಮಾತನಾಡಲು , ನಡೆದಾಡಲು ಸಾಧ್ಯವಾಗುತ್ತಿದ್ದು, ನಂತರದ ಎರಡು ವಾರಗಳಲ್ಲಿ ಸಂಪೂರ್ಣವಾಗಿ ಗುಣಮುಖ ಆಗುವುನೆಂದು ಡಾ. ಅಮರೇಶ ದೇಗಿನಾಳ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.