ಹಲವು ವಿಶೇಷಗಳ ದಿನವಿದು – ಹವಾಮಾನ – ಕ್ರೀಡೆ – ಹೊಸತು:
- ನೇಪಾಳದ ಪ್ರಸಿದ್ಧ ಪರ್ವತಾರೋಹಿ ಕಮಿ ರಿಟಾ ಶೆರ್ಪಾ ಹೊಸ ವಿಶ್ವ ದಾಖಲೆ ಮಾಡಿದ್ದಾರೆ. 26ನೇ ಬಾರಿಗೆ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು ಏರಿದರು. 11 ಸದಸ್ಯರ ಹಗ್ಗ ಫಿಕ್ಸಿಂಗ್ ತಂಡದ ಪ್ರಮುಖ, ಕಾಮಿ ರೀಟಾ ಮತ್ತು ಅವರ ತಂಡ ನಿನ್ನೆ ಶಿಖರವನ್ನು ತಲುಪಿದರು, ಇದರೊಂದಿಗೆ ಹಿಂದಿನ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
- ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇದೇ 9 ರವರೆಗೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
- ಇಂದು ವಿಶ್ವ ಥಲಸೇಮಿಯಾ ದಿನ. ತಲಸ್ಸೆಮಿಯಾದಿಂದ ಬಳಲುತ್ತಿರುವ ರೋಗಿಗಳ ಹೋರಾಟವನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ರಕ್ತದ ಅಸ್ವಸ್ಥತೆಯ ಈ ಕಾಯಿಲೆಯಲ್ಲಿ, ದೇಹವು ಸಾಕಷ್ಟು ಹಿಮೋಗ್ಲೋಬಿನ್ ಅನ್ನು ಉತ್ಪಾದಿಸಲು ವಿಫಲಗೊಳ್ಳುತ್ತದೆ.
- ಇದೇ ತಿಂಗಳ 21ರಂದು ನಿಗದಿಯಾಗಿರುವ ನೀಟ್ ಪಿಜಿ ಪರೀಕ್ಷೆ ಮುಂದೂಡಿಕೆಯಾಗಿಲ್ಲ, ನಿಗದಿಯಂತೆ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
- ಇಂದು ವಿಶ್ವ ತಾಯಂದಿರ ದಿನ. 9 ತಿಂಗಳು ತನ್ನ ಗರ್ಭದಲ್ಲಿಟ್ಟುಕೊಂಡು ಪೋಷಿಸಿ, ನಂತರ ಜನ್ಮ ನೀಡಿ, ಸಾಕಿ ಸಲಹಿ ವ್ಯಕ್ತಿಯನ್ನಾಗಿ ರೂಪಿಸುವ ಮಾತೆಯರನ್ನು ಸ್ಮರಿಸುವ ದಿನ ಇದಾಗಿದೆ.
- ಆಡಳಿತಕ್ಕೆ ಚುರುಕು ನೀಡಲು ಮತ್ತು ಬಜೆಟ್ ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಧ್ಯಾಹ್ನ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
- ಬ್ಯಾಂಕಾಕ್‌ನಲ್ಲಿ ಇಂದಿನಿಂದ ಆರಂಭವಾಗಲಿರುವ ಉಬೆರ್ ಕಪ್ ಮತ್ತು ಥಾಮಸ್ ಕಪ್ ಫೈನಲ್ಸ್‌ನಲ್ಲಿ ಪಿ.ವಿ. ಸಿಂಧೂ, ಲಕ್ಷ್ಯ ಸೇನ್ ಹಾಗೂ ಕಿಡಂಬಿ ಶ್ರೀಕಾಂತ್ ಭಾರತದ ನೇತೃತ್ವ ವಹಿಸಲಿದ್ದಾರೆ.
- ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಇಂದು ನಾಗ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ವಿಸ್ತೃತ ಕ್ಯಾಂಪಸ್ ಅನ್ನು ಉದ್ಘಾಟಿಸಿದರು.
- ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಇದೇ 15ರಿಂದ ಏಳು ದಿನಗಳ ಜಮೈಕಾ ಮತ್ತು ಸೆಂಟ್ ಗ್ರಾನಡಿನೇಸ್ ಪ್ರವಾಸ ಕೈಗೊಳ್ಳಲಿದ್ದಾರೆ.
- ಪುದುಚೇರಿ | 8 ಮೇ 1945 ರಂದು ವಿಶ್ವ ಸಮರ II ರ ಅಂತ್ಯದ “ವಿಜಯದ ರಾಷ್ಟ್ರೀಯ ದಿನ”ವನ್ನು ಇಂದು ಫ್ರೆಂಚ್ ಯುದ್ಧ ಸ್ಮಾರಕದಲ್ಲಿ ಆಚರಿಸಲಾಯಿತು.
- ಇಂದು ವಿಶ್ವ ರೆಡ್ ಕ್ರಾಸ್ ದಿನ. ರೆಡ್ ಕ್ರಾಸ್ ಸಂಸ್ಥೆಯು ನಿರ್ಗತಿಕರಿಗೆ ಮಾಡುತ್ತಿರುವ ಕೆಲಸಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ರೆಡ್ ಕ್ರಾಸ್ ಸ್ವಯಂಸೇವಕರ ಅಭೂತಪೂರ್ವ ಕೊಡುಗೆಯನ್ನು ಸಹ ಸ್ಮರಿಸಲಾಗುತ್ತದೆ.
