- “ಸಾಮಾಜಿಕ ಪರಿವರ್ತನೆಯ ಹರಿಕಾರ ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ಡಿ.ದೇವರಾಜ ಅರಸು ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳು. ಆದರ್ಶ ಆಡಳಿತಗಾರರಾಗಿದ್ದ ಅರಸುರವರು ಜಾರಿಗೆ ತಂದ ಅನೇಕ ಸುಧಾರಣಾ ಕ್ರಮಗಳನ್ನು ನಾಡು ಸದಾ ಸ್ಮರಿಸುತ್ತದೆ.”_ ಬಸವರಾಜ ಬೊಮ್ಮಾಯಿ, ಮಾನ್ಯ ಮುಖ್ಯಮಂತ್ರಿಗಳು.
- “ರಾಜಕೀಯ ಅಧಿಕಾರವನ್ನು ಬಳಸಿಕೊಂಡು ಅಧಿಕಾರ, ಸಂಪತ್ತು ಮತ್ತು ಅವಕಾಶದ ಸಮಾನ ಹಂಚಿಕೆಯ ಸಾಮಾಜಿಕ ನ್ಯಾಯ ಪಾಲನೆ ಮಾಡಿದ ಮಾದರಿ ಜನನಾಯಕ ಡಿ.ದೇವರಾಜ ಅರಸು ನನ್ನ ರಾಜಕಾರಣಕ್ಕೆ ಸದಾ ಪ್ರೇರಕ ಶಕ್ತಿ. ಅರಸರ ಹುಟ್ಟು ಹಬ್ಬವನ್ನು ಅವರ ಸಾಧನೆಗಳ ಸ್ಮರಣೆಯೊಂದಿಗೆ ಆಚರಿಸೋಣ.”_ ಸಿದ್ಧರಾಮಯ್ಯ, ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರು.
- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ಐತಿಹಾಸಿಕ ಸೋಮನಾಥ ದೇವಾಲಯದಲ್ಲಿ 83 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ನಾನಾ ಯೋಜನೆಗಳ ವರ್ಚುವಲ್ ಮೂಲಕ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
- “ನಾಡಿನ ಜನತೆಗೆ ಶ್ರೀ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು. ವರಮಹಾಲಕ್ಷ್ಮೀ ದೇವಿಯು ನಿಮಗೂ, ನಿಮ್ಮ ಕುಟುಂಬಕ್ಕೂ ಆರೋಗ್ಯ, ನೆಮ್ಮದಿ, ಐಶ್ವರ್ಯಗಳನ್ನು ನೀಡಲಿ ಎಂದು ಆ ದೇವಿಯಲ್ಲಿ ಪ್ರಾರ್ಥಿಸುತ್ತೇನೆ.”_ ಶ್ರೀರಾಮುಲು, ಸಾರಿಗೆ ಮತ್ತು ಎಸ್ಟಿ ವೆಲ್ಫೇರ್ ಸಚಿವರು.
- ಬೆಂಗಳೂರು: ವಿಕಾಸಸೌಧದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ಪ್ರಾಧಿಕಾರಗಳು ಮತ್ತು ವಿವಿಧ ಅಕಾಡೆಮಿಗಳ ಅಧ್ಯಕ್ಷರುಗಳು ಮತ್ತು ರಂಗಾಯಣದ ಅಧ್ಯಕ್ಷರುಗಳ ಜೊತೆ ಸಭೆ ನಡೆಸಿ ಅವುಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸುನಿಲ್ ಕುಮಾರ್ ಕಾರ್ಕಳ ಅವರು ಚರ್ಚೆ ನಡೆಸಿದರು.
- ಕರ್ನಾಟಕ ಆರ್ಯ ವೈಶ್ಯ, ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ಅಭಿವೃದ್ಧಿಪಡಿಸಿರುವ ಸಾಲ ಮರುಪಾವತಿ ‘ಮೊಬೈಲ್ ಆ್ಯಪ್’ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಗುರುವಾರದಂದು ಲೋಕಾರ್ಪಣೆ ಮಾಡಿದರು.
- ಮಾನ್ವಿ: ತುರ್ತು ಸ್ಪಂದನ ಸೇವಾ ವ್ಯವಸ್ಥೆ-112 ಕರ್ತವ್ಯ ನಿರತ ಅಧಿಕಾರಿಗಳು ಪಟ್ಟಣದ ಸಂತೆ ಮಾರ್ಕೆಟ್‌ನಲ್ಲಿ ಸಾರ್ವಜನಿಕರಿಗೆ ERSS-112 ಬಗ್ಗೆ ಅರಿವು ಮೂಡಿಸಿ, ಯಾವುದೇ ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ 112ಗೆ ಕರೆ ಮಾಡಿ ಎಂದು ತಿಳಿಸಿದರು.
- ಬೆಂಗಳೂರು: ಕಾವೇರಿ ನೀರು ಹಾಗೂ ಒಳಚರಂಡಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದುಕೊರತೆ ಆಲಿಸಲು ನಾಳೆಯಿಂದ ಜಲಸ್ಪಂದನ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಒಟ್ಟು 16 ವಿವಿಧ ಸ್ಥಳಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
- “ಅಫ್ಘಾನಿಸ್ಥಾನದ ಬೆಳವಣಿಗೆಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸಂಘರ್ಷಪೀಡಿತ ಅಫ್ಘಾನಿಸ್ಥಾನದಿಂದ ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಕರೆತರುವುದನ್ನು ಖಾತ್ರಿಪಡಿಸುವುದರತ್ತ ಆದ್ಯತೆ ನೀಡಿದೆ”_ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್.
- ಉತ್ತರಾಖಂಡ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಇಂದು ಡೆಹ್ರಾಡೂನ್ ನಲ್ಲಿ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು, ವಿಧಾನಸಭೆ ಉಸ್ತುವಾರಿ ಮತ್ತು ರಾಜ್ಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಭಾಗಿಯಾದರು. ಜೆ ಪಿ ನಡ್ಡಾ ರಾಜ್ಯಕ್ಕೆ 2 ದಿನಗಳ ಪ್ರವಾಸದಲ್ಲಿದ್ದಾರೆ.
- “ಜವಾಬ್ದಾರಿಯುತವಾಗಿರಿ! 18 ವಯಸ್ಸಿಗಿಂತ ಕಮ್ಮಿಯಿರುವ ಮಕ್ಕಳಿಗೆ ಅಥವಾ ಲೈಸೆನ್ಸ್ ಹೊಂದದ ಮಕ್ಕಳಿಗೆ ಪೋಷಕರು ವಾಹನ ಚಲಾಯಿಸಲು ಕೊಡುವುದು ಅಪರಾಧ. ಹೀಗೆಯೇ ಹೈದೆರಾಬಾದ್ ನಲ್ಲಿ 10 ಪೋಷಕರನ್ನು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 180ರ ಅಡಿ ಜೈಲಿಗೆ ಹಾಕಲಾಗಿದೆ.”_ KSRSA
- ಉತ್ತರ ಕನ್ನಡ: ಜಿಲ್ಲೆಯ ಸಶಿಗುಳಿ ಗ್ರಾಮದ ದಿನೇಶ ವಸಂತ ಹೆಗಡೆ ಅವರು, ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾದ ‘ಫ್ಯೂಚರ್ ಇನ್ವೆಸ್ಟಿಗೇಟರ್’ ಪ್ರಶಸ್ತಿಯ ಗೌರವಕ್ಕೆ ಭಾಜನರಾಗಿದ್ದಾರೆ. ಈ ಮೂಲಕ ಅವರು ₹ 1 ಕೋಟಿ 42 ಸಾವಿರ ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ.
