- “ಅಸಾಧಾರಣ ತಂತ್ರಜ್ಞ, ದೇಶ ಕಂಡ ಮಹಾನ್ ಮೇಧಾವಿ, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು. ನಾಡಿನ ಎಲ್ಲ ತಂತ್ರಜ್ಞರಿಗೂ ಇಂಜಿನಿಯರ್ ಗಳ ದಿನದ ಹಾರ್ದಿಕ ಶುಭಾಶಯಗಳು.”_ಬಸವರಾಜ ಬೊಮ್ಮಾಯಿ, ಮಾನ್ಯ ಮುಖ್ಯಮಂತ್ರಿಗಳು.
- ಬೆಂಗಳೂರು: ಇಂಜಿನಿಯರುಗಳ ದಿನಾಚರಣೆಯ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆ.ಆರ್. ವೃತ್ತದಲ್ಲಿ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಬಿ.ಬಿ.ಎಂ.ಪಿ ವತಿಯಿಂದ ನಿರ್ಮಿಸಿರುವ 160 ಅಡಿ ಕಾರಂಜಿಯನ್ನು ಉದ್ಘಾಟಿಸಿದರು ಹಾಗೂ ಕರ್ನಾಟಕ ಇಂಜಿನಿಯರಿಂಗ್ ಸೇವಾ ಸಂಘದ ವತಿಯಿಂದ ನಿರ್ಮಿಸಿರುವ ಇಂಜಿನಿಯರ್ ಭವನ, ಇಂಜಿನಿಯರುಗಳ ತರಬೇತಿ ಕೇಂದ್ರವನ್ನು ಲೋಕಾರ್ಪಣೆ ಮಾಡಿ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಶಾಸಕ ರಿಜ್ವಾನ್ ಆರ್ಷದ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್, ಬಿ.ಬಿ.ಎಂ.ಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ , ಸಂಸ್ಥೆಯ ಅಧ್ಯಕ್ಷ ಪೀತಾಂಬರಸ್ವಾಮಿ ಉಪಸ್ಥಿತರಿದ್ದರು.
- ಕರ್ನಾಟಕ ವಿಧಾನಸಭೆಯ ಸರ್ಕಾರಿ ಮುಖ್ಯ ಸಚೇತಕರಾಗಿ ಬೊಮ್ಮನಹಳ್ಳಿಯ ಶಾಸಕರಾದ ಸತೀಶ್ ರೆಡ್ಡಿ ಆಯ್ಕೆ.
- “ಸಮಸ್ತ ಎಂಜಿನಿಯರ್ ವೃಂದಕ್ಕೆ ಎಂಜಿನಿಯರ್ ದಿನದ ಶುಭಾಶಯಗಳು. ಅಭಿವೃದ್ದಿ, ಅನ್ವಿಷಣೆಯ ಸಂಕೇತವಾಗಿರುವ ಈ ದಿನದಂದು ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನ್ನವರನ್ನು ಅವರ ಜನ್ಮದಿನದಂದು ನೆನೆಯುತ್ತಾ ಅವರ ಸಾಧನೆಗಳಿಗೆ ನನ್ನ ಗೌರವ ಪೂರಕ ನಮನಗಳನ್ನು ಸಲ್ಲಿಸುತ್ತೇನೆ.”_ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ.
- “ಸರ್ ಎಂ.ವಿಶ್ವೇಶ್ವರಯ್ಯನವರ ದೂರದೃಷ್ಟಿ, ಕ್ಷಮತೆ, ವೃತ್ತಿಬದ್ಧತೆ ಮತ್ತು ಜನಪರ ಕಾಳಜಿ ನಮ್ಮೆಲ್ಲ ಎಂಜನಿಯರ್‌ಗಳಿಗೆ ಆದರ್ಶವಾಗಲಿ. ಅಭಿಯಂತರರ ದಿನದ ಶುಭಾಶಯಗಳು.”_ ವಿಪಕ್ಷ ನಾಯಕ ಹಾಗೂ ಮಾಜಿ ಸಿ ಎಂ ಸಿದ್ದರಾಮಯ್ಯ.
- “ಈ ವರ್ಷದ ಆಗಸ್ಟ್‌ನಲ್ಲಿ ಸರಕು ಮತ್ತು ಸೇವಾ ವಲಯದಲ್ಲಿ ದೇಶದ ಒಟ್ಟಾರೆ ರಫ್ತು ಪ್ರಮಾಣ 52.20 ಶತಕೋಟಿ ಡಾಲರ್ ತಲುಪಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 33.99 ರಷ್ಟು ಹೆಚ್ಚಾಗಿದೆ ಮತ್ತು ಆಗಸ್ಟ್‌ನಲ್ಲಿ ಒಟ್ಟಾರೆ ಆಮದು 58.57 ಶತಕೋಟಿ ಡಾಲರ್ ಇದ್ದು, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ. 45.38 ರಷ್ಟು ಬೆಳವಣಿಗೆ ಕಂಡಿದೆ “_ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ.
- ಬೆಂಗಳೂರು ನಗರದಾದ್ಯಂತ 1 ಲಕ್ಷಕ್ಕೂ ಅಧಿಕ ಸಸಿ ನೆಡಲು ಅರಣ್ಯ ಸಚಿವ ಉಮೇಶ್ ಕತ್ತಿ ಸೂಚನೆ.
- “ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಜಂಬೂ ಸವಾರಿಯಲ್ಲಿ ಭಾಗವಹಿಸಲಿರುವ ಅಭಿಮನ್ಯು ನೇತೃತ್ವದ ಗಜಪಡೆ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಬೀಡುಬಿಟ್ಟಿದೆ. 8 ಆನೆಗಳಿಗೆ ವಿಶೇಷ ಆರೈಕೆ ಮಾಡಲಾಗುತ್ತಿದ್ದು, ಗಜಪಡೆ ನಾಳೆ ಅರಮನೆ ಮೈದಾನ ಪ್ರವೇಶಿಸಲಿದೆ”- ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್.
- ಲೋಕಸಭೆ ಮತ್ತು ರಾಜ್ಯಸಭೆ ಟಿ.ವಿ.ಗಳನ್ನು ವಿಲೀನಗೊಳಿಸಲಾದ ʻ ಸಂಸದ ಟಿವಿʼ ಗೆ ಇಂದು ಸಂಜೆ 6 ಗಂಟೆಗೆ ಸಂಸತ್ ಭವನದ ಸಮಿತಿ ಕೊಠಡಿಯಲ್ಲಿ ಉಪರಾಷ್ಟ್ರಪತಿ ಎಮ್ ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಚಾಲನೆ ನೀಡಲಿದ್ದಾರೆ.
- “ವಾಹನ ಚಾಲನೆ ಮಾಡುವಾಗ ಯಾವಾಗಲೂ ಸಂಯಮದಿಂದ ಚಾಲನೆ ಮಾಡಿ. ಆಕ್ರಮಣಕಾರಿಯಾಗಿ ಎಚ್ಚರವಹಿಸದೆ ಅತಿಯಾದ ವೇಗದಲ್ಲಿ ಚಾಲನೆ ಮಾಡುವುದು ಅಪಾಯಕಾರಿ. ರಸ್ತೆಯಲ್ಲಿ ಯಾವಾಗಲೂ ಸುರಕ್ಷಿತವಾಗಿರಿ ಹಾಗೂ ಜವಾಬ್ದಾರಿಯುತವಾಗಿರಿ.”_KSRSA
