- ಅಹಮದಾಬಾದ್‌ನಲ್ಲಿ ಸರ್ದಾರ್ ಧಾಮ್ ಭವನದ ಉದ್ಘಾಟನೆ ಮತ್ತು ಹಂತ- II ಬಾಲಕಿಯರ ಹಾಸ್ಟೆಲ್‌ನ ಭೂಮಿ-ಪೂಜನ್ ಕಾರ್ಯಕ್ರಮ; ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾನಿ, ಉಪ ಮುಖ್ಯ ಮಂತ್ರಿ ನಿತೀನ್ ಪಟೇಲ್ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿ.
- ತಮಿಳು ಅಧ್ಯಯನಕ್ಕಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ತಮಿಳು ಕವಿ ಸುಬ್ರಹ್ಮಣ್ಯ ಭಾರತಿಯವರ ನೆನಪಿಗಾಗಿ “ಚೇರ್” ಸ್ಥಾಪಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದರು.
- “ಸೆಪ್ಟೆಂಬರ್ 11 ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ. ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ತಮ್ಮ ಜೀವವನ್ನು ತ್ಯಾಗ ಮಾಡಿ ಹುತಾತ್ಮರಾದವರನ್ನು ಸ್ಮರಿಸೋಣ.”_ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
- ಸ್ವಾಮಿ ವಿವೇಕಾನಂದರು ಚಿಕಾಗೋದ ಸರ್ವ-ಧರ್ಮ ಸಮ್ಮೇಳನದಲ್ಲಿ ಮಾಡಿದ ಐತಿಹಾಸಿಕ ಭಾಷಣವನ್ನು ಇಂದು ದೇಶ ಸ್ಮರಿಸುತ್ತಿದೆ.1893ರ ಸೆಪ್ಟೆಂಬರ್ 11ರಂದು ಅವರು ಭಾರತವನ್ನು ಪ್ರತಿನಿಧಿಸಿ, ತಮ್ಮ ಪಾಂಡಿತ್ಯ ಪೂರ್ಣ ಭಾಷಣ ಮಾಡಿದ್ದರು.
- ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ಟಿಪ್ಪಣಿ ಅನ್ವಯ, ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಯೋಜನೆಗಳ ಫಲಾನುಭವಿಗಳನ್ನು ಆರಿಸಲು ನಡೆಯುವ ಸಭೆಯ ಅಧ್ಯಕ್ಷತೆ ವಹಿಸಲು ಮಾನ್ಯ ಸಚಿವರಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
- ಅಮೆರಿಕದ ಅವಳಿ ಕಟ್ಟಡಗಳ ಮೇಲೆ ದಾಳಿ ನಡೆದು ಇಂದಿಗೆ 21 ವರ್ಷ. ಜಾಗತಿಕವಾಗಿ ನಡೆದ ಬಹುದೊಡ್ಡ ಭಯೋತ್ಪಾದಕ ದಾಳಿ ಇದಾಗಿದ್ದು, ಆಲ್ ಖೈದಾ ಭಯೋತ್ಪಾದಕ ಸಂಘಟನೆ ಈ ದಾಳಿಯನ್ನು ಸಂಘಟಿಸಿತ್ತು.
- ದಕ್ಷಿಣ ಭಾರತದ ಕೇರಳದಲ್ಲಿ ಕೋವಿಡ್ ಸೋಂಕು ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ತಮಿಳುನಾಡಿನಲ್ಲಿ ಮುಂದಿನ ತಿಂಗಳ ಅಂತ್ಯದವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ.
- ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಚಿವ ಮಟ್ಟದ ಮಾತುಕತೆ ದೆಹಲಿಯಲ್ಲಿ ಪ್ರಗತಿಯಲ್ಲಿದೆ. ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಆಸ್ಟೇಲಿಯಾದ ವಿದೇಶಾಂಗ ಸಚಿವೆ ಮಾರಿಸ್ ಪೆನ್ ಹಾಗೂ ರಕ್ಷಣಾ ಸಚಿವ ಪೀಟರ್ ದಟನ್ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
- ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಗೆ ಭೇಟಿ ನೀಡಲಿದ್ದಾರೆ. ಭೇಟಿಯ ವೇಳೆ ಉತ್ತರ ಪ್ರದೇಶದ ರಾಷ್ಟ್ರೀಯ ಕಾನೂನು ವಿದ್ಯಾಲಯ ಹಾಗೂ ಅಲಹಾಬಾದ್ ಹೈಕೋರ್ಟ್ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
- ರಾಜ್ಯದ ಹೇರೋಹಳ್ಳಿ ಹಾಗೂ ನರಸಾಪುರದಲ್ಲಿ 100 ಹಾಸಿಗೆಗಳ ಉದ್ಯೋಗಿಗಳ ರಾಜ್ಯ ವಿಮಾ ನಿಗಮ-ಇಎಸ್‌ಐಸಿ ಆಸ್ಪತ್ರೆಗಳನ್ನು ನಿರ್ಮಿಸುವುದಾಗಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಭೂಪೇಂದರ್ ಯಾದವ್ ಘೋಷಿಸಿದ್ದಾರೆ.
- ದೇಶದಲ್ಲಿ ಇಲ್ಲಿಯವರೆಗೆ (11-09-2021, ಬೆಳಿಗ್ಗೆ 08.00) ಕೋವಿಡ್-19 ಲಸಿಕೆ ಪಡೆದುಕೊಂಡವರು 73,05,89,688. ಕಳೆದ 24 ಗಂಟೆಯಲ್ಲಿ ಲಸಿಕೆ ಪಡೆದುಕೊಂಡವರು 65,27,175.
- “ಗ್ರಾಮೀಣ ಪ್ರದೇಶಗಳಲ್ಲಿ ಟ್ರಕ್ಗಳು ಮತ್ತು ಟ್ರ್ಯಾಕ್ಟರ್ಗಳು ಕೃಷಿ ಚಟುವಟಿಕೆಗಳ ನಿಮಿತ್ತ ಓಡಾಡುತ್ತಿರುತ್ತದೆ. ಕೃಷಿಗೆ ಸಂಬಂಧಪಟ್ಟ ವಾಹನಗಳು ಇತರ ವಾಹನಗಳಿಗಿಂತ ಹೆಚ್ಚಾಗಿ ದೊಡ್ಡದಾಗಿರುತ್ತವೆ ಮತ್ತು ನಿಧಾನವಾಗಿ ಚಲಿಸುತ್ತವೆ. ಇದರಿಂದಾಗಿ ಇತರೆ ವಾಹನ ಹಾದುಹೋಗುವಾಗ ಅಪಾಯಕಾರಿ ಪರಿಸ್ಥಿತಿಗಳು ಉಂಟಾಗುವ ಸಂಭವವಿರುತ್ತದೆ. ಎಚ್ಚರಿಕೆಯಿಂದ ವಾಹನ ಚಲಾಯಿಸಿ.”_KSRSA
