ಮೈಸೂರು: ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವರಾದ ಎಸ್.ಎಂ. ಕೃಷ್ಣ ಅವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರ ಪತ್ನಿ ಚೆನ್ನಮ್ಮ , ಸಚಿವರಾದ ಆರ್. ಅಶೋಕ್, ಬೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್, ಬಿ.ಸಿ. ಪಾಟೀಲ್, ಸುನಿಲ್ ಕುಮಾರ್, ಶಶಿಕಲಾ ಜೊಲ್ಲೆ, ಸಂಸದ ಪ್ರತಾಪ್ ಸಿಂಹ, ಶಾಸಕ ರಾಮದಾಸ್, ಜಿಟಿ ದೇವೇಗೌಡ , ತನ್ವೀರ್ ಸೇಠ್ ಮತ್ತು ಇತರರು ಉಪಸ್ಥಿತರಿದ್ದರು. ಈ ಬಾರಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಮಾಣ ಶೇಕಡ 1ಕ್ಕಿಂತ ಕಡಿಮೆ ಇದೆ. ಅದಾಗ್ಯೂ , ಸರ್ಕಾರ ಹಲವು ನಿರ್ಬಂಧಗಳೊಂದಿಗೆ ಉತ್ಸವ ನಡೆಸಲು ನಿರ್ಧರಿಸಿದೆ. ಹೀಗಾಗಿ ಎಲ್ಲ ಕಾರ್ಯಕ್ರಮಗಳನ್ನು ವರ್ಚುವಲ್ ಪರದೆಯಲ್ಲಿ ಬಿತ್ತರಿಸಲು ಕ್ರಮ ಕೈಗೊಳ್ಳಲಾಗಿದೆ. ಅರಮನೆ, ಕಲಾಮಂದಿರ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ರೈತ ದಸರಾ, ಯುವದಸರಾ, ವಜ್ರಮುಷ್ಠಿ ಕಾಳಗ, ಕ್ರೀಡಾಕೂಟ, ಕುಸ್ತಿ ಪಂದ್ಯಾವಳಿ ಮತ್ತು ಪಂಚಿನ ಕವಾಯತ್ತನ್ನು ಕೈಬಿಡಲಾಗಿದೆ. ಈ ಮಧ್ಯೆ, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ ಇಡಿ ಬಲ್ಬ್ ಗಳ ದೀಪಗಳ ಅಲಂಕಾರಕ್ಕೆ ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
“ರಾಜ್ಯದ ಎಲ್ಲಾ ಜನತೆಗೆ ದಸರಾ ನಾಡಹಬ್ಬದ ಹಾರ್ದಿಕ ಶುಭಾಶಯಗಳು, ನಾಡದೇವತೆ ಚಾಮುಂಡೇಶ್ವರಿ ಎಲ್ಲರಿಗೂ ಸುಖ, ಸಂತೋಷ, ಆರೋಗ್ಯ ಅನುಗ್ರಹಿಸಲಿ; ಸಾಂಕ್ರಾಮಿಕದ ಕರಿನೆರಳು ದೂರಸರಿದು, ಸಂಭ್ರಮ ಸಮೃದ್ಧಿಗಳ ಹೊಂಬೆಳಕು ಮೂಡಲಿ” –ಬಸವರಾಜ ಬೊಮ್ಮಾಯಿ, ಮಾನ್ಯ ಮುಖ್ಯಮಂತ್ರಿಗಳು.
ಬೆಂಗಳೂರು: ರಾಜ್ಯದ ಪ್ರಬಲ ರಾಜಕಾರಣಿಯ ಆಪ್ತರಿಗೆ ರಾಜಕಾರಣಿ ಆಪ್ತರಿಗೆ ಶಾಕ್ ಕೊಟ್ಟ ಐಟಿ. ನೀರಾವರಿ ಇಲಾಖೆ CA ಅಮಲಾ ಮನೆ ಮೇಲೆ IT ರೇಡ್ – ಎನ್.ಆರ್.ರಾಯಲ್ ಅಪಾರ್ಟ್ ಮೆಂಟ್ ನಲ್ಲಿರುವ ಮನೆ – ಬೆಂಗಳೂರಿನ ಹೆಗಡೆ ನಗರದಲ್ಲಿರುವ ಅಪಾರ್ಟ್ ಮೆಂಟ್ – 10ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ದಾಳಿ, ಪರಿಶೀಲನೆ. ಕರ್ನಾಟಕ ಮತ್ತು ಗೋವಾ ವಲಯ ಐಟಿ ಆಧಿಕಾರಿಗಳಿಂದ ದಾಳಿ – ತೆರಿಗೆ ವಂಚನೆ, ತೆರಿಗೆ ವಂಚನೆಗೆ ಸಹಾಯ ಆರೋಪದ ಮೇಲೆ ದಾಳಿ – ರಾಮಕೃಷ್ಣ ಹೆಗಡೆ ನಗರ ಸೇರಿ ಹಲವು ಕಡೆ ದಾಳಿ – ನಗರದಲ್ಲಿ 50ಕ್ಕೂ ಹೆಚ್ಚು ಕಡೆ ಐಟಿ ಕಾರ್ಯಾಚರಣೆ – ಬೆಳಗ್ಗೆ 5 ಗಂಟೆಯಿಂದ ಐಟಿ ಅಧಿಕಾರಿಗಳಿಂದ ಶೋಧ – ಉದ್ಯಮಿಗಳು, ಕಾಂಟ್ರಾಕ್ಟರ್, CAಗಳ ಮನೆ ಮೇಲೆ ದಾಳಿ – 300 ಕ್ಕೂ ಹೆಚ್ಚು ಅಧಿಕಾರಿಗಳಿಂದ ಏಕಕಾಲದಲ್ಲಿ ಕಾರ್ಯಾಚರಣೆ – ಎಲ್ಲಾ ಸಿದ್ಧತೆಯೊಂದಿಗೆ ದಾಳಿ ನಡೆಸಿರೋ ಐಟಿ ಅಧಿಕಾರಿಗಳು – 120 ಇನ್ನೋವಾ ಕ್ರಿಸ್ಟಾ ಕಾರುಗಳನ್ನ ಬುಕ್ ಮಾಡಿದ್ದ ಐಟಿ.
ಟ್ವೀಟ್ ಕಾರ್ನರ್: “ಕರ್ನಾಟಕದ ಬೆಳಗಾವಿಯಲ್ಲಿ ಮನೆ ಕುಸಿತದಿಂದ ಜೀವಗಳಿಗೆ ಹಾನಿಯಾಗಿರುವುದು ದುಃಖ ತಂದಿದೆ. ಈ ಶೋಕದ ಸಂದರ್ಭದಲ್ಲಿ ಮೃತರ ಸಂಬಂಧಿಗಳಿಗೆ ನನ್ನ ಸಾಂತ್ವನಗಳು. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು PMNRF ನಿಧಿಯಿಂದ ನೀಡಲಾಗುವುದು”_ ಪ್ರಧಾನಮಂತ್ರಿ ನರೇಂದ್ರ ಮೋದಿ.
ಬೆಳಗಾವಿ: ಬಡಾಲ ಅಂಕಲಗಿ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆಗೋಡೆ ಕುಸಿದು ಒಂದೇ ಕುಟುಂಬದ 6 ಜನ ಸೇರಿ ಏಳು ಮಂದಿ ಮೃತಪಟ್ಟ ಘಟನೆ ಸಂಭವಿಸಿದೆ. ಘಟನೆ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ರಾಜಕೀಯ: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಸಂಬಂದಿಸಿ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ. ಸಿಂದಗಿಯಿಂದ ರಮೇಶ್ ಭೂಸನೂರು ಮತ್ತು ಹಾನಗಲ್ ಕ್ಷೇತ್ರದಿಂದ ಶಿವರಾಜ್ ಸಜ್ಜನರ್ ಅಭ್ಯರ್ಥಿಗಳೆಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್ ತಿಳಿಸಿದ್ದಾರೆಂದು, ಕರ್ನಾಟದ ಬಿಜೆಪಿ ಮಾಧ್ಯಮ ಸಂಚಾಲಕರು ಪ್ರಕಟಣೆ ಹೊರಡಿಸಿದ್ದಾರೆ.
ತಂತ್ರಜ್ಞಾನ: ಮೊನ್ನೆ ಮೊನ್ನೆಯಷ್ಟೇ ಫೇಸ್ಬುಕ್, ವಾಟ್ಸ್ ಌಪ್, ಇನ್ಸ್ಸ್ಟಾ ಸರ್ವರ್ ಡೌನ್ ಆಗಿದ್ದರಿಂದ ಭಾರೀ ಸಮಸ್ಯೆ ಎದುರಾಗಿತ್ತು. ಸುಮಾರ್ ಏಳು ಗಂಟೆ ತಾಂತ್ರಿಕ ಸಮಸ್ಯೆಯಿಂದ ಮಾರ್ಜಕ್ ಜುಕರ್ ಬರ್ಗ್ಗೆ ಇದರಿಂದ 52,000 ಕೋಟಿ ನಷ್ಟವಾಯ್ತು. ಅದರ ಜತೆಗೆ ಈಗ ವಾಟ್ಸ್ ಆಪ್ ಎದುರಾಳಿ ಟಿಲಗ್ರಾಮ್, ಸಿಗ್ಮಲ್ ಬಳಕೆದಾರರ ಸಂಖ್ಯೆ ಹೆಚ್ಚಾಯಿತು.
“ಕೇಂದ್ರ ಸರ್ಕಾರ ರಾಜ್ಯ ಪಶುಸಂಗೋಪನಾ ಇಲಾಖೆಗೆ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಮಂಜೂರು ಮಾಡಿದೆ. ರಾಜ್ಯದ ರೈತರ ಮನೆ ಬಾಗಿಲಿಗೆ ಪಶು ಸಂಜೀವಿನಿ ಯೋಜನೆ ಸೌಲಭ್ಯ ದೊರಕಲಿದೆ” – ಪ್ರಭು ಚೌವ್ಹಾಣ, ಪಶುಸಂಗೋಪನಾ ಸಚಿವರು.
ಕ್ರೀಡೆ: ಗೋಲ್ಡ್ ಕೋಸ್ಟ್ ದ ಕ್ವೀನ್ಸ್ ಲ್ಯಾಂಡ್ ನಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ಮಹಿಳೆಯರ ತಂಡಗಳು ಮೂರು ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಪಾಲ್ಗೊಳ್ಳಲಿವೆ.ಭಾರತ ತಂಡವನ್ನು ಹರ್ಮನ್ ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ.
