ಸಂಕ್ಷಿಪ್ತ ಸುದ್ದಿ:
ಹುಬ್ಬಳ್ಳಿ: ಸ್ಥಳಿಯ ಪ್ರವಾಸಿ ಮಂದಿರದ ಆವರಣದಲ್ಲಿ ಧಾರವಾಡ ಜಿಲ್ಲಾಡಳಿತ ವತಿಯಿಂದ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಪ್ರವಾಹ ನಿಯಂತ್ರಣ ಸಲಕರಣೆಗಳನ್ನು ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಹಸ್ತಾಂತರಿಸಿದರು, ಅಲ್ಲದೇ ಸಲಕರಣೆಗಳ ಉಪಯುಕ್ತತೆ ಹಾಗೂ ಬಳಕೆ ಕುರಿತು ಹೆಚ್ಚಿನ ಮಾಹಿತಿಯನ್ನು ಅಧಿಕಾರಿ ವರ್ಗದವರಿಂದ ಪಡೆದುಕೊಂಡರು.


ಹಾಗೂ ಇದೇ ಸಂದರ್ಭದಲ್ಲಿ ಮಹಾಮಾರಿ ಕೋವಿಡ್-19 ಕುರಿತು ಜಾಗೃತಿ ಮೂಡಿಸುವ ಸಲುವಾಗಿ ತಯಾರಿಸಿದ “ಕೊರೋನಾ ಕೂಗು” ಎಂಬ ಕಿರುಚಿತ್ರವನ್ನು ಮಾನ್ಯ ಸಚಿವರು ಬಿಡುಗಡೆ ಮಾಡಿದರು.

ಮತ್ತು ಹುಬ್ಬಳ್ಳಿಯ ಪ್ರವಾಸಿ ಮಂದಿರದ ಆವರಣದಲ್ಲಿ ಪಶು ಸಂಗೋಪನಾ ಇಲಾಖೆಯ ‘ಪಶು ಸಂಜೀವಿನಿ’ ಆಂಬ್ಯುಲೆನ್ಸ್ ಸೇವೆಗೆ ಮಾನ್ಯ ಜಗದೀಶ್ ಶೆಟ್ಟರ್ ಇಂದು ಚಾಲನೆ ನೀಡಿದರು, ಅಲ್ಲದೇ ಪರಿಕರಗಳ ಬಗ್ಗೆ ಸಿಬ್ಬಂದಿಯವರಿಂದ ಹೆಚ್ಚಿನ ಮಾಹಿತಿಯನ್ನು ಪಡೆದರು.

ಈ ಸಂದರ್ಭದಲ್ಲಿ ಅನೇಕ ಗಣ್ಯರು, ಇಲಾಖಾ ಸಂಬಂಧಿತ ಹಿರಿಯ ಅಧಿಕಾರಿಗಳು, ಸಿಬ್ಬಂದಿಯವರು ಉಪಸ್ಥಿತರಿದ್ದರು.