Wednesday, February 19, 2025
Homeಸುದ್ದಿಹುನಗುಂದ: ಸಿದ್ದನಕೊಳ್ಳದ ಡಾ.ಶಿವಕುಮಾರ್ ಶ್ರೀಗಳಿಂದ ಇಲಕಲ್ ನೇಕಾರರಿಗೆ ಆಶೀರ್ವಾದ-ಸಹಾಯಧನ !

ಹುನಗುಂದ: ಸಿದ್ದನಕೊಳ್ಳದ ಡಾ.ಶಿವಕುಮಾರ್ ಶ್ರೀಗಳಿಂದ ಇಲಕಲ್ ನೇಕಾರರಿಗೆ ಆಶೀರ್ವಾದ-ಸಹಾಯಧನ !

ಸುದ್ದಿ ಸಂಗ್ರಹ: ಸುರೇಶ ಹಿರೇಮಠ, ಲಿಂಗಸಗೂರು ವರದಿಗಾರರು.

ಹುನಗುಂದ: ತಾಲೂಕಿನ ಸಿದ್ದನಕೊಳ್ಳದ ಶ್ರೀಗಳಾದ ಡಾ.ಶಿವಕುಮಾರ್‌ ಮಹಾಸ್ವಾಮಿಗಳು, ಇಲಕಲ್‌ ನಗರದ ನೇಕಾರರ ಸಾಮಾನ್ಯ ಆರೋಗ್ಯ ವಿಚಾರಿಸಿ, ಸಹಾಯಧನವನ್ನು ನೀಡಿ, ಆಶೀರ್ವದಿಸಿದರು.

ಫೋಟೊ ಕೃಪೆ: ಸೋಷಿಯಲ್‌ ಮೀಡಿಯಾ

ಸದಾ ಸಹಾಯಹಸ್ತ ಹಾಗೂ ಅನ್ನ ದಾಸೋಹಕ್ಕೆ ಪ್ರತೀತಿಯಾದ ಹುನಗುಂದ ತಾಲೂಕಿನ ಸಿದ್ದನಕೊಳ್ಳದ ಶ್ರೀ ಸಿದ್ದಪ್ಪಜ್ಜನವರ ಶ್ರೀಮಠದ ಡಾ.ಶಿವಕುಮಾರ್‌ ಮಹಾಸ್ವಾಮಿಗಳು, ಇತ್ತೀಚಿಗೆ ಇಲಕಲ್‌ ನಗರದ ನೇಕಾರರ ಸಂಘದ ಪದಾಧಿಕಾರಿಗಳು ಮತ್ತು ಯುವ ಸದಸ್ಯರುಗಳು ಲಾಕ್‌ ಡೌನ್‌ ನಿಂದ ವ್ಯಾಪಾರ-ದುಡಿಮೆಯಿಲ್ಲದ ನೇಕಾರರ ಸಂಕಷ್ಟವನ್ನು ಪೂಜ್ಯ ಶ್ರೀಗಳಿಗೆ ತಿಳಿಸಲಾಗಿ, ಸ್ವತಃ ಶ್ರೀಗಳು ನೇಕಾರರ ಮನೆ ಮನೆಗೂ ತೆರಳಿ ಪ್ರತಿ ಕುಟುಂಬಕ್ಕೂ ಶೀಮಠದ ಪರವಾಗಿ ಒಂದು ಪ್ಯಾಕೇಟ್‌ ಅಕ್ಕಿ ಮತ್ತು ಮೂರು ಸಾವಿರ ರೂಪಾಯಿಗಳನ್ನು ನೀಡಿ  “ಮನೋಸ್ಥೈರ್ಯ ಕಳೆದುಕೊಳ್ಳಬೇಡಿ, ಕೋವಿಡ್-‌19 ಕುರಿತು ಜಾಗೃತರಾಗಿರಿ, ಎಲ್ಲವೂ ಮೊದಲಿನಂತೆ ವ್ಯಾಪಾರದ ವಾತಾವರಣ  ನಿರ್ಮಾಣವಾಗುತ್ತದೆ, ನಿಮ್ಮ ಸಾಮಾನ್ಯ ಆರೋಗ್ಯ ಕಾಪಾಡಿಕೊಳ್ಳಿ, ಚಿಂತಿಸಬೇಡಿ” ಎಂದು ಸಮಾಧಾನಪಡಿಸಿದರು.

ಫೋಟೊ ಕೃಪೆ: ಸೋಷಿಯಲ್‌ ಮೀಡಿಯಾ

ಪೂಜ್ಯ ಶ್ರೀಗಳ ಈ ಕಾರ್ಯಕ್ಕೆ ಸಹಾಯ ಪಡೆದ ಕುಟುಂಬಸ್ಥರು ಹಾಗೂ ನೇಕಾರ ಒಕ್ಕೂಟದ ಪದಾಧಿಕಾರಿಗಳು ಹಾಗೂ ಯುವ ಸದಸ್ಯರುಗಳು ಮೆಚ್ಚುಗೆಯೊಂದಿಗೆ ಧನ್ಯವಾದ ಸೂಚಿಸಿದ್ದಾರೆ.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news