ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಸಂತೆಕೆಲ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿ ತಿಂಗಳು 09 ನೇ ತಾರೀಖಿನಂದು ಗರ್ಭಿಣಿಯರಾಗಿ ನಡೆಯುವ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಆಭಿಯಾನದಲ್ಲಿ ತಾಯಿ- ಮಗುವಿನ ಆರೋಗ್ಯಕರವಾದ ಬೆಳವಣಿಗೆಗೆ ಪೂರೈಕೆಯಾದ ಪ್ರೋಟಿನ್ ಪೌಡರ್- ಔಷಧಿಗಳನ್ನು ನೀಡಲಾಯಿತು.

ಮಧ್ಯಾನದ ಅವಧಿಯವರೆಗೆ, ಸ್ಥಳಿಯ ಹಾಗೂ ಬುದ್ದಿನ್ನಿ, ಗೋನವಾರ, ಮುಸ್ಲಿಕಾರ್ಲಕುಂಟಿ, ಹುನಕುಂಟಿ ಗ್ರಾಮಗಳಿಂದ ಬಂದ ಸುಮಾರು ನಲವತ್ತೈದು ಗರ್ಭಿಣಿಯರು ಸಾಮಾನ್ಯ ಆರೋಗ್ಯ ತಪಾಸಣೆ ಮಾಡಿ, ಪ್ರೋಟೀನ್ ಪೌಡರ್ ಹಾಗೂ ಮಾತ್ರಗಳನ್ನು ನೀಡಲಾಯಿತು ಎಂದು ವರದಿಯಾಗಿದೆ. ಅಭಿಯಾನವು ಪ್ರತಿ ತಿಂಗಳು 09 ನೇ ತಾರೀಖಿನಂದು ಬೆಳಿಗ್ಗೆ 10 ರಿಂದ 4.30 ವರೆಗೆ ಇರುತ್ತದೆ.

ಅಭಿಯಾನದಲ್ಲಿ ಡಾ.ಶ್ರೀದೇವಿ ಹಿರೇಮಠ, ಹಿರಿಯ ಸಿಬ್ಬಂದಿಯವರಾದ ಬಸವರಾಜ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.