ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಶುಕ್ರವಾರ ದೇವದುರ್ಗದಿಂದ ಸಂತೆಕೆಲ್ಲೂರು ಗ್ರಾಮಕ್ಕೆ ಐದು ಜನ ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ಒಟ್ಟು ಆರು ಜನರು ಮರಳಿದ್ದು, ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಮನೆಯಲ್ಲಿಯೇ ಕಾಳಜಿಯುತವಾಗಿರಲು ಮತ್ತು ಶೀತ ಕೆಮ್ಮ ಜ್ವರ ಅಥವಾ ಉಸಿರಾಟದ ತೊಂದರೆ ಅನಿಸಿದರೆ ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ತಪಾಸಣೆ ಮಾಡಿಸಿಕೊಳ್ಳಿ ಅಥವಾ ತಾಲೂಕ ಆಸ್ಪತ್ರೆಗೆ ಭೇಟಿ ಕೋಡಿ ಎಂದು ಸೂಚಿಸಲಾಗಿದೆಯೆಂದು ಹಾಗೂ ಸದರಿಯವರಿಗೆ ಯಾವುದೇ ಸಂಕ್ರಾಮಿಕತೆಯ ಲಕ್ಷಣಗಳಿಲ್ಲ ಎಂದು ವರದಿಯಾಗಿದೆ.

ಗ್ರಾಮಕ್ಕೆ ಬಂದವರ ಪ್ರಾಥಮಿಕ ಸ್ವ-ವಿವರಗಳನ್ನು ಪಡೆದು, ಕುಟುಂಬವರೊಂದಿಗೆ ಇರಬೇಕಾದ ರೀತಿ ಮತ್ತು ಆಹಾರ ಪದ್ಧತಿ ಕುರಿತು ತಿಳಿಸಿ, ಕೋವಿಡ್- 19 ಮೂಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಸೂಚಿಸಲಾಯಿತು .
ಈ ಸೂಚನಾ ಕಾರ್ಯದಲ್ಲಿ ಆಶಾ ಕಾರ್ಯಕರ್ತೆಯರಾದ ಪಾರ್ವತಿ ಬಡಿಗೇರ್, ಅಂಗನವಾಡಿ ಶಿಕ್ಷಕಿರಾದ ಸಂಗಮ್ಮ ಹಾಗೂ ವಾಟರ್ ಮನ್ ಹಾಜರಿದ್ದರು.