ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು
ಲಿಂಗಸಗೂರು: ಹತ್ತಿರದ ಸಂತೆಕೆಲ್ಲೂರು ಗ್ರಾಮದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಪ್ರಾಕ್ಷಿಕದ ಅಂಗವಾಗಿ 01 ರಿಂದ 19 ವರ್ಷದ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಗಳನ್ನು ನೀಡಲಾಯಿತು.

ಜಂತುಹುಳು ಮಕ್ಕಳಲ್ಲಿ ರಕ್ತ ಹೀನತೆ ಹಾಗೂ ಬೆಳವಣಿಗೆಯನ್ನು ಕುಂಠಿತ ಗೊಳಿಸುತ್ತದೆ. ಅಲ್ಬೆಂಡ್ ಜೋಲ್ ಮಾತ್ರೆ ಚಿಪುವುದರಿಂದ ಮಕ್ಕಳಲ್ಲಿ ರಕ್ತ ಹೀನತೆ ನಿಯಂತ್ರಣ ಮತ್ತು ಪೊಷಕಾಂಶ ಹೀರುವಿಕೆ ಸುಧಾರಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ಪೋಷಕರು ತಮ್ಮ 01 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಾಶಕ ಅಲ್ಬೆಂಡ್ ಜೋಲ್ ಮಾತ್ರೆ ನೀಡಬೇಕೆಂದು ಮನೆ ಮನೆಗೂ ತೆರಳಿ ತಿಳಿಸುತ್ತಾ ಮತ್ತು ಸ್ಥಳಿಯ ಸರ್ಕಾರಿ ಶಾಲೆ ಆವರಣದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಲ್ಲಿಯೂ ಈ ಕುರಿತು ತಿಳಿ ಹೇಳಿ ಮಕ್ಕಳಿಗೆ ಮಾತ್ರಗಳನ್ನು ನೀಡಿದರು.

ಈ ಕಾರ್ಯಕ್ರಮವು ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ರಾಜ್ಯ ಆರೋಗ್ಯ ಇಲಾಖೆಯ ಕಾರ್ಯಕ್ರಮವಾಗಿದ್ದು ಇದೇ ತಿಂಗಳ 07 ರಿಂದ 21 ನೇ ತಾರೀಖಿನವರೆಗೆ ನಡೆಯಲಿದ್ದು, ಮಾತ್ರಗಳನ್ನು ಉಚಿತವಾಗಿ ನೀಡಲಾಗುತ್ತದೆ.

ಸದರಿ ಕಾರ್ಯದಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಾದ ಪಾರ್ವತಿ ಬಡಿಗೇರ್, ಶಾಂತಮ್ಮ, ಶ್ರೀದೇವಿ ಹಾಗೂ ಅಂಗನವಾಡಿ ಕಾರ್ಯಕರ್ತರು ಇದ್ದರು.