ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು
ಲಿಂಗಸಗೂರು: ತಾಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರಿಂದ ಹೆಚ್.ಬಿ.ಎನ್.ಸಿ. ಕುರಿತಾಗಿ ಮನೆ ಮನೆಗೂ ಭೇಟಿ ನೀಡಿ ಮಕ್ಕಳ ಬೆಳವಣಿಗೆ-ತೂಕ ಹಾಗೂ ಗರ್ಭಿಣಿ ಮಹಿಳೆಯರ ಸಾಮಾನ್ಯ ಆರೋಗ್ಯ ವಿಚಾರಣೆ ಮಾಡಲಾಯಿತು.

ಪ್ರಾಥಮಿಕ ಆರೋಗ್ಯ ಕೇಂದ್ರದ ನಿರ್ದೇಶನದಂತೆ ಸಂತೆಕೆಲ್ಲೂರು ಗ್ರಾಮದಲ್ಲಿ ಹೆಚ್.ಬಿ.ಎನ್.ಸಿ. ಭೇಟಿ ಹಾಗೂ ಚಿಕ್ಕ ಮಕ್ಕಳ ತೂಕ-ಸಾಮಾನ್ಯ ಆರೋಗ್ಯ ವಿಚಾರಣೆ, ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಸೇವನೆ ಮತ್ತು ಲಸಿಕೆ ಮಾಹಿತಿ ನೀಡಿ, ಮಗುವಿನ ತೂಕವನ್ನು ಮಾಡಿ, ಮಗುವಿನ ಬೆಳವಣಿಗೆಯಲ್ಲಿ ಅವರ ತೂಕಕ್ಕೆ ತಕ್ಕಂತೆ ಎತ್ತರ-ಬೆಳವಣಿಗೆ ಕುರಿತಾಗಿ ಮಾಹಿತಿ ನೀಡಿ ಪಾಲಿಸಲು ತಿಳಿಸಲಾಯಿತು.
ಗರ್ಭಿಣಿ ಮಹಿಳೆಯರ ಸಾಮಾನ್ಯ ಆರೋಗ್ಯ ವಿಚಾರಣೆ ಮಾಡಿ ಅವರ ಹಾಗೂ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸೇವಿಸಬೇಕಾದ ಆಹಾರ-ಹಣ್ಣು-ತರಕಾರಿ ಕುರಿತು ತಿಳಿ ಹೇಳಿ, ತಮ್ಮ ಹಾಗೂ ಮಕ್ಕಳ ಸರ್ವೋತೊಮುಖ ಬೆಳವಣಿಗೆ ಕುರಿತಾಗಿ ಮಾಹಿತಿ ನೀಡಿ, ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಟ್ಟಿ ಮಾಡಲಾಯಿತು.

ಈ ಸಂದರ್ಭದಲ್ಲಿ ಶರಣಮ್ಮ-ಆಶಾ ಸೇಷಲ್ ಟ್ರೀಟರ್, ಆಶಾ ಕಾರ್ಯಕರ್ತೆಯರಾದ ಪಾರ್ವತಿ ಬಡೀಗೇರ್, ಅಂಗನವಾಡಿ ಶಿಕ್ಷಕಿ ಸಂಗಮ್ಮ ಇದ್ದರು.