ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಸಂತೆಕೆಲ್ಲೂರು ಗ್ರಾಮದಲ್ಲಿನ ಗರ್ಭಿಣಿಯರ ಸಾಮಾನ್ಯ ಆರೋಗ್ಯ ವಿಚಾರಿಸಿ, ಸಂಬಂಧಿಸಿದ ಅಂಕಿ ಅಂಶಗಳನ್ನು ಪಟ್ಟಿಮಾಡಿ, ಕುಡಿಯುವ ಮತ್ತು ಬಳಸುವ ನೀರಿನ ಕುರಿತು ಜಾಗೃತಿ ಮೂಡಿಸಿ, ನೀರು ಸಂಗ್ರಹಣೆ ಕುರಿತು ಮುನ್ನಚ್ಚರಿಕೆ ನೀಡಿ, ಸಂಗ್ರಹಣೆ ಮತ್ತು ಬಳಕೆ ಮತ್ತು ಶುಚಿತ್ವ ಕುರಿತು ಕುಟುಂಬಸ್ಥರಲ್ಲಿ ತಿಳಿಸಿ ಜಾಗೃತಿ ಮೂಡಿಸಲಾಯಿತು ಎಂದು ವರದಿಯಾಗಿದೆ.

ಗರ್ಭಿಣಿಯರ ಸಾಮಾನ್ಯ ಆರೋಗ್ಯ ವಿಚಾರಿಸಿ, ಅಂಕಿ ಅಂಶಗಳನ್ನು ಪಟ್ಟಿ ಮಾಡುತ್ತಾ “ನಿಮಗೆ ಹಾಗೂ ಮಗುವಿನ ಆರೋಗ್ಯಕರ-ಸಮತೋಲನವಾದ ಬೆಳವಣಿಗೆಗೆ ಪೌಷ್ಠಿಕ ಆಹಾರ ಸೇವಿಸಿ, ಸರಿಯಾದ ಸಮಯಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರಿ” ಎಂದು ತಿಳಿಸುತ್ತಾ, ಮನೆಯ ಹಾಗೂ ಸುತ್ತಮುತ್ತ ಚರಂಡಿ ನೀರು-ಮಳೆಯ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ, ನೀರಿನ ಬ್ಯಾರಲ್-ತೊಟ್ಟಿ-ಟ್ಯಾಂಕ್ ಗಳನ್ನು ಭದ್ರವಾಗಿ ಮುಚ್ಚಿ,ಬಳಕೆಗೆ ಸಂಗ್ರಹಿಸಲ್ಪುಡುವ ನೀರನ್ನು ವಾರಕ್ಕೆ ಒಮ್ಮೇಯಾದರೂ ಬದಲಿಸಿ,ನೀರನ್ನು ಕಾಯಿಸಿ-ಆರಿಸಿ ಕುಡಿಯಿರಿ ಎಂದು ಗ್ರಾಮದ ಕುಟುಂಬಗಳಿಗೆ ತಿಳಿಸಲಾಯಿತು ಎಂದು ವರದಿಯಾಗಿದೆ.