ಸುದ್ದಿ ಸಂಗ್ರಹ: ಸುರೇಶ ಹಿರೇಮಠ, ಲಿಂಗಸಗೂರು ವರದಿಗಾರರು.
ಶಿವಮೊಗ್ಗ: ಕ್ಷೇತ್ರದ ಜನತೆಯ ಆರೋಗ್ಯವನ್ನು ಕಾಪಾಡುವ ದೃಷ್ಠಿಯಿಂದ ಪಾಲಿಕೆಯ 35 ವಾರ್ಡ್ ವ್ಯಾಪ್ತಿಯಲ್ಲಿನ 4 ಲಕ್ಷ ಜನರಿಗೆ ಆಯುರ್ವೇದಿಕ್ ಉಚಿತ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿಚಾಲನೆ ಸಮಾರಂಭ ಜರುಗಿತು.
ಈ ಉದ್ಘಾಟನಾ ಸಮಾರಂಭವನ್ನು ಖ್ಯಾಥ ಆಯುರ್ವೇದ ತಜ್ಷರಾದ ಡಾ.ಗಿರಿಧರ ಕಜೆ ಅವರು ಉದ್ಘಾಟಿಸಿದರು.

ಸಮಾರಂಭದಲ್ಲಿ ಆರ್.ಎಸ್.ಎಸ್. ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹಕ ಶ್ರೀ ಪಟ್ಟಾಭೀರಾಮ್ ವಿಧಾನಪರಿಷತ್ ಸದಸ್ಯರಾದ ಪ್ರಸನ್ನ ಕುಮಾರ್, ಆಯನೂರು ಮಂಜುನಾಥ್, ಡಿ.ಎಸ್.ಅರುಣ್, ಕೆ.ಎಸ್.ಗುರುಮೂರ್ತಿ, ಪೂಜ್ಯ ಮಹಾಪೌರರಾದ ಶ್ರೀಮತಿ ಸುವರ್ಣ ಶಂಕರ್, ಉಪಮಹಾಪೌರರಾದ ಶ್ರೀ ಸುರೇಖಾ ಮುರಳೀಧರ್ ಹಾಗೂ ಕೋವಿಡ್ ಸುರಕ್ಷಾ ಪಡೆಯ ಸದಸ್ಯರು ಭಾಗವಹಿಸಿದ್ದರು