ಸಂಕ್ಷಿಪ್ತ ಸುದ್ದಿ:
ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಸಹಕಾರ ಇಲಾಖೆ, ಶಿವಮೊಗ್ಗ, ಆರೋಗ್ಯ ಇಲಾಖೆ, ಶಿಕಾರಿಪುರ ತಾಲೂಕಿನ ಸಹಕಾರ ಸಂಘಗಳು ಇವರುಗಳ ಸಂಯುಕ್ತ ಆಶ್ರಯದಲ್ಲಿ, ಸಂಸತ್ ಸದಸ್ಯರಾದ ಶ್ರೀ ಬಿ.ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ “ಆಶಾ ಕಾರ್ಯಕರ್ತರಿಗೆ ಅಭಿನಂದನಾ ಹಾಗೂ ಚೆಕ್ ವಿತರಣಾ ಸಮಾರಂಭ” ಜರುಗಿತು.

ದೀಪ ಬೆಳಗಿಸಿ, ಸಭಾರಂಭವನ್ನುದ್ದೇಶಿಸಿ ಮಾತನಾಡಿದ ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಅವರು ಆಶಾ ಕಾರ್ಯಕರ್ತರಿಗೆ ಅಭಿನಂದನೆಯೊಂದಿಗೆ ಚೆಕ್ ವಿತರಿಸಿದರು.

ಸಮಾರಂಭದಲ್ಲಿ ಶ್ರೀ ಎಂ ಬಿ ಚನ್ನವೀರಪ್ಪ, ಶ್ರೀ ಕೆ ಎಸ್ ಗುರುಮೂರ್ತಿ ಹಾಗೂ ಶ್ರೀ ರೇವಣಪ್ಪ ಸೇರಿದಂತೆ ಇಲಾಖಾ ಸಿಬ್ಬಂದಿ, ತಾಲೂಕಿನ ಹಲವಾರು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.