ವರದಿಗಾರರು: ಸುರೇಶ ಹಿರೇಮಠ, ಲಿಂಗಸುಗೂರು.
ಲಿಂಗಸುಗೂರು: ದೇವದುರ್ಗ ನಗರದಲ್ಲಿ ಕಳೆದ ಸೋಮವಾರ ಗಣೇಶೋತ್ಸವದ ಸಂದರ್ಭದಲ್ಲಿ ಅಳವಡಿಸಿದ್ದ ಧ್ವನಿವರ್ಧಕವನ್ನು ಮಾನ್ಯ ದಂಡಾಧಿಕಾರಿಗಳು ತಮ್ಮ ಸುದರ್ಪಿಗೆ ಪಡೆಯುವಾಗ “ಗಣೇಶೋತ್ಸವ ಜಾಗೆಯಲ್ಲಿ ಕೂಗಾಡಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಿದ್ದಾರೆ” ಎಂದು ತಮ್ಮ ಮನವಿ ಪತ್ರದಲ್ಲಿ ತಿಳಿಸುತ್ತಾ, ಮಾನ್ಯ ದಂಡಾಧಿಕಾರಿಗಳ ಸದರಿ ಕ್ರಮವನ್ನು ಖಂಡಿಸಿ, “ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸನ್ 2005 ರಂತೆ ಧ್ವನಿವರ್ಧಕ ಹಾಗೂ ಶಬ್ಧ ಮಾಲಿನ್ಯ ಕುರಿತಂತೆ ನೀಡಿರುವ ತೀರ್ಪನ್ನು ಎಲ್ಲರಿಗೂ ಸಮಾನವಾಗಿ ಜಾರಿಗೆಗೊಳಿಸಬೇಕು ಹಾಗೂ ಸದರಿ ತಾಲೂಕ ದಂಡಾಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು, ಇಲ್ಲವಾದರೆ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು” ಎಂದು ತಿಳಿಸಿ, ಮಾನ್ಯ ಸಹಾಯಕ ಆಯುಕ್ತರು ಲಿಂಗಸುಗೂರು ಇವರ ಮುಖಾಂತರ ಮಾನ್ಯ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ತಾಲೂಕ ಪ್ರಧಾನ ಕಾರ್ಯದರ್ಶಿ ಅಮರೇಶ ಛತ್ರಪತಿ ಸೇರಿದಂತೆ ವೇದಿಕೆಯ ಪ್ರಮುಖರಾದ ವೀರನಗೌಡ ಲೆಕ್ಕಿಹಾಳ, ಚನ್ನಬಸವ ಹಿರೇಮಠ, ಹೇಮಂತ್, ರಾಜು ಗುರಿಕಾರ, ಅಮರೇಶ ಗುರುಗುಂಟಾ, ಸೋಮನಾಥ ನಾಯಕ್, ಎಚ್.ಬಿ.ಪವಾರ್, ಹರೀಶ್ ಹಟ್ಟಿ, ಅನಂತ್ ದಾಸ್, ಮಲ್ಲೇಶ್, ಸುಧಾಕರ ರೆಡ್ಡಿ, ಅರುಣ ಹಟ್ಟಿ, ವಿಕ್ರಮಸಿಂಗ್ ಇನ್ನಿತರರು ಇದ್ದರು.