ವರದಿಗಾರರು:ಸುರೇಶ ಹಿರೇಮಠ, ಲಿಂಗಸಗೂರು
ಲಿಂಗಸಗೂರು:ತಾಲೂಕಿನ ಯರಜಂತಿ ಗ್ರಾಮದ ಒಟ್ಟು 45 ಜನರು ಹಾಸನ ಜಿಲ್ಲೆಯ ಕೆಆರ್ ನಗರ ತಾಲೂಕಿನ ಶ್ರೀರಾಂಪುರಕ್ಕೆ ಕಾಲುವೆ ಕೆಲಸದ ನಿಮಿತ್ತ್ಯ ಗೂಳೆ ಹೋಗಿದ್ದರು, ಲಾಕ್ ಡೌನ್ ನಿಂದ ಕೆಲಸ-ಹಣ-ಊಟವಿಲ್ಲದೇ ಪರದಾಡಿದ ಜನರು, ಸಿದ್ದು ವಾಯ್ ಬಂಡಿಯವರಿಗೆ ವಿಡಿಯೋ ಕಳುಹಿಸಿದರು, ಜಿಲ್ಲಾಡಳಿತ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಾರ್ಗದರ್ಶನ ಮೂಲಕ ಮತ್ತೋಮ್ಮೆ ಇಂತಹ ಅಸಹಾಯಕ ಜನರನ್ನು ಎಪ್ರಿಲ್ 18 ಕ್ಕೆ ತಮ್ಮ ಸ್ವಗ್ರಾಮಕ್ಕೆ ಮರಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟು 45 ಜನರಲ್ಲಿ 15 ಜನ ಮಕ್ಕಳಿದ್ದು, ಅವರ ಅಸಹಾಯಕತೆಯನ್ನು ಜೆಡಿಎಸ್ ಮುಖಂಡರಾದ ಬಂಡಿರವರಿಗೆ ವಿಡಿಯೊ ಮೂಲಕ ತಿಳಿಸಿದ್ದಾರೆ, ಕೂಡಲೇ ಕಾರ್ಯಪ್ರವೃತ್ತರಾದ ಸಿದ್ದು ವಾಯ್ ಬಂಡಿಯವರು ಸದರಿ ಜಿಲ್ಲಾಡಳಿತದೊಂದಿಗೆ ಮಾತನಾಡಿ, ಮಾಜಿ ಸಿಎಮ್ ಕುಮಾರಸ್ವಾಮಿ ಮಾರ್ಗದರ್ಶನದಂತೆ ಅವರೆಲ್ಲರನ್ನೂ ಪ್ರಾಥಮಿಕ ಆರೋಗ್ಯ ಚಿಕಿತ್ಸೆಗೆ ಒಳಪಡಿಸಿ, ವಾಹನದ ವ್ಯವಸ್ಥೆಮಾಡಿಸಿ, ಸತತವಾಗಿ ಅವರೊಂದಿಗೆ ಫೋನ್ ಸಂಪರ್ಕಹೊಂದಿ, ಧೈರ್ಯವನ್ನು ತುಂಬುತ್ತಾ ಮತ್ತು ತಾಲೂಕ ಆಡಳಿತ ಹಾಗೂ ಆರೋಗ್ಯ ಇಲಾಖೆ ಸೂಚಿಸಿದಂತೆ ಮುಂಜಾಗ್ರತೆಯಿಂದಿರಲು ಸೂಚಿಸಿ, ಕಾಳಜಿಯುತವಾಗಿ ಅವರನ್ನು ತಮ್ಮ ಸ್ವಗ್ರಾಮಕ್ಕೆ ಮರಳುವಂತೆ ಮಾಡಿದ್ದಾರೆ.
ಈ ಮೊದಲು ಪೂನಾದಿಂದ ಕಾಲ್ನಡಿಗೆಯಲ್ಲಿ ಬೆಂಚಲದೊಡ್ಡಿ ತಾಂಡಾ ಬರುತ್ತಿದ್ದ ಮೂವತ್ತಕ್ಕೂ ಹೆಚ್ಚು ಜನರನ್ನು ಮತ್ತು ಇದೇ ಲಿಂಗಸಗೂರು ತಾಲೂಕಿನ ನಿಲೋಗಲ್ ಗ್ರಾಮದ ತುಂಬು ಗರ್ಭಿಣಿಯೊಂದಿಗೆ ಇಪ್ಪತ್ತಕ್ಕೂ ಹೆಚ್ಚು ಅಸಹಾಯಕ ಜನರನ್ನು ತಮ್ಮ ಸ್ವಗ್ರಾಮಕ್ಕೆ ತಲುಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಜೆಡಿಎಸ್ ಮುಖಂಡ ಸಿದ್ದು ವಾಯ್ ಬಂಡಿಯವರ ಇಂತಹ ಮಾನವೀಯತೆ ಕಾರ್ಯಕ್ಕೆ ಸದರಿ ಗ್ರಾಮದವರು ಹಾಗೂ ತಾಲೂಕಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.