ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಸರ್ಕಾರದ, ರಾಜ್ಯ ಛಾಯಾವೃತ್ತಿ ಸಮೂಹದ ನಿರ್ಲ್ಯಕ್ಷತೆಯನ್ನು ಖಂಡಿಸಿ ಹಾಗು ವಿವಿಧ ಬೇಡಿಕೆ ಮತ್ತು ಸೌಲಭ್ಯಗಳನ್ನು ಒದಗಿಸುವ ಕುರಿತು ಲಿಂಗಸಗೂರು ತಾಲೂಕ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ವೆಲ್ ಫೇರ್ ಅಸೋಶಿಯೆಷನ್ (ರಿ), ಮಾನ್ಯ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿತು.

“ಕೋವಿಡ್-19 ರ ಹಿನ್ನಲೆಯಲ್ಲಿ ಲಾಕ್ ಡೌನ್ ನಿಂದ ಕೆಲಸವೇ ಇಲ್ಲದಂತಾಗಿ 2020 ರ ಅಂತ್ಯದವರೆಗೂ ಜೀವನಾವಷ್ಯಕ ಸೌಲಭ್ಯಗಳೊಂದಿಗೆ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದು ತಿಳಿಸುತ್ತಾ, ವಿಶೇಷ ಪ್ಯಾಕೇಜ್ ಘೋಷಿಸಬೇಕು, ಅಸಂಘಟಿತ ಕಾರ್ಮಿಕ ವಲಯದ 42 ನೇ ವರ್ಗಕ್ಕೆ ಸೇರಿದ ಛಾಯಾಗ್ರಾಹಕರಿಗೆ ಕಾರ್ಮಿಕ ಇಲಾಖೆಯ ಯೋಜನೆ ಮತ್ತು ಸ್ಮಾರ್ಟ್ ಕಾರ್ಡ್ ನೀಡಬೇಕು, ಛಾಯಾ ಭವನಕ್ಕೆ ನಿವೇಶನ ಒದಗಿಸಬೇಕು, ಕಡಿಮೆ ಬಡ್ಡಿಯ ಸಾಲ ಸೌಲಭ್ಯ, ಸರ್ಕಾರಿ ಕೆಲಸಗಳಿಗೆ ಬೇಕಾದ ಫೋಟೋಗಳಿಗೆ ಆದ್ಯತೆ ನೀಡಬೇಕು, ಛಾಯಗ್ರಾಹಕರಿಗೆ ವಿಮೆ – ನಿವೇಶನ – ಪಿಂಚಣಿ – ಆರೋಗ್ಯ ರಕ್ಷಣೆ – ಮಕ್ಕಳಿಗೆ ವಿಧ್ಯಾಭ್ಯಾಸದ ಸೌಲಭ್ಯ ಕಲ್ಪಿಸಬೇಕು “ ಎಂಬ ಮೊದಲಾದ ತಮ್ಮ ಬೇಡಿಕೆ ಮತ್ತು ಸೌಲಭ್ಯಗಳಿಗಾಗಿ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ವೆಲ್ ಫೇರ್ ಅಸೋಶಿಯೆಷನ್ (ರಿ), ಲಿಂಗಸಗೂರು, ತಮ್ಮ ಮನವಿ ಪತ್ರವನ್ನು ಮಾನ್ಯ ಸಹಾಯಕ ಆಯುಕ್ತರಿಗೆ ಸಲ್ಲಿಸಿತು.
ಈ ಸಂದರ್ಭದಲ್ಲಿ ಅಸೋಶಿಯೇಷನ್ ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿದಂತೆ, ಸಿದ್ದು ಬಡಿಗೇರ್, ಚನ್ನಬಸವ ಹಿರೇಮಠ, ಅಜಯ್ ಕುಮಾರ್ ಶಿವಂಗಿ, ಶೇಖರ್, ರುದ್ರಗೌಡ ಬಿರಾದಾರ್ , ಶಿವು, ಶರಣಪ್ಪ ಕುಪ್ಪಿಗುಡ್ಡ, ಚಂದ್ರು, ಅಶೋಕ, ಇಬ್ರಾಹಿಂ, ವಸಂತ್, ಬಿ.ಬಿ. ನಾಯಕ್, ರಾಹುಲ್, ನವೀನ್, ಮಲ್ಲಯ್ಯ ಸ್ವಾಮಿ ಹಾಗು ಇತರರು ಇದ್ದರು.