ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ರಾಯಚೂರು: ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಹೊಸ ಬಸ್ ನಿಲ್ದಾಣದ ಕಟ್ಟಡದ ಭಾಗದಲ್ಲಿ ಗುಂಬಜ ನಿರ್ಮಾಣವಾಗಿದೆ, ಹಾಗಾಗಿ ಅದನ್ನು ತೆರವುಗೊಳಿಸಿ ನೀಲಿ ನಕ್ಷೆಯಲ್ಲಿರುವಂತೆ ನಿರ್ಮಾಣ ಮಾಡಬೇಕು ಎಂದು ಹಿಂದೂ ಜಾಗರಣ ವೇದಿಕೆ, ಲಿಂಗಸಗೂರು ಬಸ್ ನಿಲ್ದಾಣದ ಶಾಖಾ ವ್ಯವಸ್ಥಾಪಕರಿಗೆ ಸೇರಿದಂತೆ ಮಾನ್ಯ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿತು.
ಬಸ್ ನಿಲ್ದಾಣದ ಹೊಸ ಕಟ್ಟಡದ ನಿರ್ಮಾಣವು ನೀಲಿ ನಕ್ಷೆಯಲ್ಲಿರುವಂತೆ ನಿರ್ಮಾಣ ಆಗಿರುವದಿಲ್ಲವಾದ್ದರಿಂದ ಕೂಡಲೇ ನಕ್ಷೆಯಲ್ಲಿರುವಂತೆ ನಿರ್ಮಿಸಿ ಎಂದು, ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳು ಮತ್ತು ಸದಸ್ಯರು, ಲಿಂಗಸಗೂರಿನಲ್ಲಿ ಬಸ್ ನಿಲ್ದಾಣದ ಶಾಖಾ ವ್ಯವಸ್ಥಾಪಕರಿಗೆ ಹಾಗೂ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಾತೃ ಸುರಕ್ಷಾ ಪ್ರಮುಖರಾದ ಹರೀಶ್ ಬೆಳಗಲ್, ವೇದಿಕೆಯ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಮುಖರಾದ ಚನ್ನಬಸವ ದೇಸಾಯಿ, ತಾಲೂಕ ಸಾಮಾಜಿಕ ಜಾಲತಾಣ ಪ್ರಮುಖರಾದ ಮಲ್ಲು ಚರ್ಕವರ್ತಿ, ಪ್ರಧಾನ ಕಾರ್ಯದರ್ಶಿಯಾದ ಹನುಮಂತ, ಅಜಯ ನಾಯಕ ಶಿವಂಗಿ, ಚನ್ನಬಸವ ಹಿರೇಮಠ, ರವಿಕುಮಾರ್ ನಾಯಕ್, ಕೃಷ್ಣ ನಾಯಕ, ಕಿರಣ್ ಪಲ್ಲೇದ್, ಹನುಮಂತು ಅಂಬಿಗೇರ್, ಜೈದೇವ, ಹೇಮಂತ್, ಎಚ್. ವಿ. ಪವಾರ್, ಹನುಮಂತ ಪವಾರ್, ಶರಣಬಸನಗೌಡ, ಶಂಕರ್ ಗೂಳಿ ಸೇರಿ ಇನ್ನಿತರರು ಇದ್ದರು.