ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ತಾಲೂಕಿನ ನಾಗರಾಳ ಗ್ರಾಮದಲ್ಲಿ ಕೋವಿಡ್-19 ಸಾಂಕ್ರಾಮಿಕತೆಯ ಮುನ್ನಚ್ಚರಿಕೆಯಿಂದ ತರಕಾರಿ ಮಾರಾಟವನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ನಿಗದಿತ ಸ್ಥಳದಲ್ಲಿ ಸೂಚಿಸಲಾಗಿತ್ತು, ಆದರೆ ಕೆಲ ತರಕಾರಿ ಮಾರಾಟಗಾರರು ಸೂಚಿತ ತರಕಾರಿ ಮಾರಾಟ ಸ್ಥಳಕ್ಕೆ ಹೊಗದೇ ಮುಖ್ಯ ರಸ್ತೆಯಲ್ಲಿ ತರಕಾರಿ ಮಾರಾಟ ಮಾಡುವುದನ್ನು ಸ್ಥಳಿಯರಿಂದ ಮಾಹಿತಿ ಪಡೆದ ಗ್ರಾಮ ಪಡೆಯು, ಅವರನ್ನು ಮುನ್ನಚ್ಚರಿಕೆ ಕ್ರಮವಾಗಿ ಮುಂದಿನ ಆದೇಶದ ವರೆಗೂ ಸೂಚಿತ ಸ್ಥಳದಲ್ಲಿಯೇ ತರಕಾರಿ ವ್ಯಾಪಾರ ಮಾಡಿರಿ ಎಂದು ಸೂಚಿಸಿದ ಬಗ್ಗೆ ವರದಿಯಾಗಿದೆ.

ಹತ್ತಿರದ ಕೋಡಿಹಾಳ ಗ್ರಾಮದಲ್ಲಿ ಕ್ವಾರಂಟೈನ್ ಕೇಂದ್ರವಿದ್ದು ಮುಂಜಾಗ್ರತೆಗಾಗಿ ಸದರಿ ತರಕಾರಿ ಮಾರಾಟಗಾರರನ್ನು ಈ ಮೊದಲು ಸೂಚಿತ ಸ್ಥಳಕ್ಕೆ ತೆರಳಲು ಸೂಚಿಸಿದರೆನ್ನಲಾಗಿದೆ.

ಕೋವಿಡ್-19 ಗ್ರಾಮಪಡೆಯ ಪಿ.ಡಿ.ಓ. ಸೋಮನಗೌಡ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಬೀಟ್ ಪೊಲೀಸ್ ಅಧಿಕಾರಿ ಹಾಗೂ ಅಂಗನವಾಡಿ ಶಿಕ್ಷಕಿಯರು ಮತ್ತು ಆಶಾ ಕಾರ್ಯಕರ್ತೆಯರು ಮುನ್ನಚ್ಚರಿಕೆ ಕ್ರಮವನ್ನು ವಹಿಸಿ, ತರಕಾರಿ ವ್ಯಾಪಾರಸ್ಥರನ್ನು ಸದರಿ ಜಾಗೆಯಿಂದ ತೆರಳಲು ಸೂಚಿಸಿದರು.