ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಆಂಧ್ರದಿಂದ ಮರಳಿದ ಮಕ್ಕಳು ಸೇರಿ ಏಳು ಜನರನ್ನು ಗೋನವಾರ ಗ್ರಾಮದ ಸರ್ಕಾರಿ ಶಾಲೆ ಹಾಗೂ ಸಂಬಂಧಿಸಿದ ಮನೆಯಲ್ಲಿಯೇ ಇತ್ತೀಚಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ, ಇವರಲ್ಲಿಸಧ್ಯಕ್ಕೆ ಕೋವಿಡ್-19 ಸೋಂಕಿನ ಲಕ್ಷಣಗಳಿಲ್ಲ , ಮುಂಜಾಗ್ರತಾ ಕ್ರಮವಾಗಿ ತಾಲೂಕ ಆಡಳಿತ ಹಾಗೂ ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಕ್ವಾರಂಟೈನ್ ಮಾಡಲಾಗಿದೆ ಎಂದು ವರದಿಯಾಗಿದೆ.

ಸದರಿಯವರಿಗೆ ಆಹಾರ ಪದ್ಧತಿ, ಶುಚಿತ್ವ ಮತ್ತು ಕ್ವಾರಂಟೈನ್ ನಲ್ಲಿ ಯಾವ ರೀತಿ ಇರಬೇಕೆಂದು ಸೂಚಿಸಿ, ಕೆಮ್ಮು-ಶೀತ-ಜ್ವರ ಮೊದಲಾದ ಲಕ್ಷಣಗಳು ಕಂಡುಬಂದರೆ ಕೂಡಲೇ ಪ್ರಾಥಮಿಕ ಆರೋಗ್ಯ ಕೆಂದ್ರಕ್ಕೆ ಸೂಚಿಸಿ ಅಥವಾ ಸಹಾಯವಾಣಿಗೆ ಕರೆ ಮಾಡಿ, ಮುಂಜಾಗ್ರತೆಯಿಂದ ಇರಲು ಸೂಚಿಸಲಾಯಿತು.

ತಾಲೂಕ ಕಂದಾಯ ಇಲಾಖೆ ಸಿಬ್ಬಂದಿ ಬಾಬು ಸಾಹೇಬ್ , ಆಶಾ ಕಾರ್ಯಕರ್ತೆಯರಾದ ನಾಗಮ್ಮ ಮತ್ತು ಅಂಗನವಾಡಿ ಶಿಕ್ಷಕಿ ಗೌರಮ್ಮ ಕ್ವಾರಂಟೈನ್ ಕಾರ್ಯದಲ್ಲಿ ತೊಡಗಿದವರಾಗಿದ್ದಾರೆ.