ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಸರ್ಕಾರದ ರೈತ ವಿರೋಧಿ ಕಾಯ್ದೆಗಳ ಜಾರಿ ಹಾಗೂ ರೈತ ಸಂಘದ ಅಧ್ಯಕ್ಷರನ್ನು ಬಂಧಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೈಗೊಂಡಿದ್ದ ಪ್ರತಿಭಟನಾ ಮೆರವಣಿಗೆಗೆ ಸ್ಥಳಿಯ ಕೆಲ ಪ್ರಗತಿಪರ ಸಂಘಟನೆಗಳು ಜಂಟಿಯಾಗಿ ಸಾಥ ನೀಡಿದವು.
ಇತ್ತೀಚಿಗೆ ರಾಜ್ಯ ಸರ್ಕಾರವು ಎಪಿಎಮ್ ಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಗಳನ್ನು ಸುಗ್ರಿವಾಜ್ಞೆ ಹೊರಡಿಸಿ, ಈಗ ಸದರಿ ರೈತ ವಿರೋಧಿ ಕಾನೂನುಗಳನ್ನು ಕಾನೂನುಬದ್ಧಗೊಳಿಸುವ ಸಲುವಾಗಿ ತಿದ್ದುಪಡಿ ತರುವುದನ್ನು ಮತ್ತು ಸರ್ಕಾರದ ದೌರ್ಜನ್ಯ ಮತ್ತು ಹೋರಾಟಗಾರರನ್ನು ಬಂಧಿಸಿರುವುದನ್ನು ಖಂಡಿಸುತ್ತಾ ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರತಿಭಟನೆಗೆ ಹಾಗೂ ಮನವಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಕರ್ನಾಟಕ ರಕ್ಷಣಾವೇದಿಕೆ, ಕರುನಾಡ ಸೇನೆ, ಕ.ಪ್ರಾ.ರೈತ ಸಂಘ ಮತ್ತು ಎಸ್.ಎಫ್. ಐ. ಜಂಟಿಯಾಗಿ ಬೆಂಬಲ ನೀಡಿದವು.

ಸರ್ಕಾರದ ನಡುವಳಿಕೆಗಳನ್ನು, ಪ್ರಗತಿಪರ ಸಂಘಟನೆಗಳು ಜಂಟಿಯಾಗಿ ಖಂಡಿಸುತ್ತಾ, ಸರ್ಕಾರದ ವಿರುದ್ಧ ಘೊಷಣೆಗಳನ್ನು ಕೂಗುತ್ತಾ, ಸದರಿ ಮನವಿ ಪತ್ರವನ್ನು ಮಾನ್ಯ ಸಹಾಯಕ ಆಯುಕ್ತರ ಮೂಲಕ ಸನ್ಮಾನ್ಯ ರಾಜ್ಯಪಾಲರಿಗೆ ಸಲ್ಲಿಸಿದರು.

ಪ್ರತಿಭಟನಾ ಮೆರವಣಿಗೆ ಹಾಗೂ ಮನವಿ ಪತ್ರ ಸಲ್ಲುವಿಕೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು, ಕರ್ನಾಟಕ ರಕ್ಷಣಾ ವೇದಿಕೆ, ಕರುನಾಡ ಸೇನೆ, ಕ.ಪ್ರಾ.ರೈತ ಸಂಘ ಮತ್ತು ಎಸ್.ಎಫ್. ಐ. ನ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.