ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಸರ್ಕಾರವು ಆಶಾ ಕಾರ್ಯಕರ್ತೆಯರಿಗೆ ಅವರ ಬೇಡಿಕೆಗಳಿಗೆ ಸಕಾರಾತ್ಮಕವಾದ ಪ್ರತಿಕ್ರಿಯೆ ದೊರೆತಿರುವುದರಿಂದ ತಾಲೂಕಿನ ಕೆಲವೆಡೆ ಆಶಾ ಕಾರ್ಯಕರ್ತೆಯರು ತಮ್ಮ ಎಂದಿನಂತೆ ಸೇವೆಗೆ ಹಾಜರಾಗಿದ್ದುದು ವರದಿಯಾಗಿದ್ದು, ಅದರಂತೆ ತಾಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ ಇಂದು ಶಿಶುಗಳ ತೂಕ-ಸಾಮಾನ್ಯ ಆರೋಗ್ಯ ವಿಚಾರಣೆ, ಶಿಶುಗಳ ಆರೋಗ್ಯಕರ ಬೆಳವಣಿಗೆಗೆ ಆರೈಕೆಯೊಂದಿಗೆ ಲಸಿಕೆ ಮಾಹಿತಿ ನೀಡಿ, ಶಿಶುಗಳ ತೂಕವನ್ನು ಮಾಡಿ, ಮಗುವಿನ ಬೆಳವಣಿಗೆಯಲ್ಲಿ ಅವರ ತೂಕಕ್ಕೆ ತಕ್ಕಂತೆ ಎತ್ತರ-ಬೆಳವಣಿಗೆ ಕುರಿತಾಗಿ ಮಾಹಿತಿ ನೀಡಿ, ಅವುಗಳನ್ನು ಪಾಲಿಸಲು ಸೂಚಿಸಿ, ಸಾಮಾನ್ಯ ಆರೋಗ್ಯ ವಿಚಾರಣೆಯೊಂದಿಗೆ ಪಟ್ಟಿ ಮಾಡಿ ಮತ್ತು ಕುಡಿಯುವ ನೀರು, ಬಳಸುವ ನೀರಿನ ಶುಚಿತ್ವ ಕುರಿತು ತಿಳಿಹೇಳಿ ಜಾಗೃತಿ ಮೂಡಿಸಲಾಯಿತು ಎಂದು ವರದಿಯಾಗಿದೆ.

ತಾಯಿ ಆರೈಕೆ ಹಾಗೂ ಮಕ್ಕಳ ಸರ್ವೋತೊಮುಖ ಬೆಳವಣಿಗೆ ಕುರಿತಾಗಿ ಮಾಹಿತಿ ನೀಡಿ, ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಟ್ಟಿ ಮಾಡಲಾಯಿತು.

ಕುಡಿಯುವ ನೀರು ಶುಚಿತ್ವವಾಗಿರಬೇಕು ಮತ್ತು ಬಳಸಲು ಶೇಖರಿಸಿಡುವ ನೀರನ್ನು ವಾರಕ್ಕೊಮ್ಮೇಯಾದರೂ ಬದಲಾಯಿಸಬೇಕು, ಸುತ್ತಲಿನ ವಾತವರಣ ಶುಚಿಯಾಗಿಡಬೇಕು ಎಂದು ಸದರಿ ಮನೆಯವರಿಗೆ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸ್ಪೆಷಲ್ ಟ್ರೀಟರ್ ಶರಣಮ್ಮ ಬಸಾಪುರ ಹಾಗೂ ಆಶಾ ಕಾರ್ಯಕರ್ತೆಯರಾದ ಮೀನಾಕ್ಷಿ ಇದ್ದರು.