ವರದಿಗಾರರು:ಸುರೇಶ ಹಿರೆಮಠ, ಲಿಂಗಸಗೂರು.
ಲಿಂಗಸಗೂರು: ಉತ್ತರ ಕರ್ನಾಟಕ ಭಾಗಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಹೊರತಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಟ್ಟಣದ ಮುಖ್ಯ ಬ್ಯಾಂಕುಗಳಲ್ಲಿ-ಎಟಿಮ್ ಗಳಲ್ಲಿ ಸಾರ್ವಜನಿಕರ ಸಾಮಾಜಿಕ ಅಂತರ ಮಾಯವಾಗಿದ್ದು, ಸೊಂಕಿನ ಭೀತಿಯನ್ನು ಹೆಚ್ಚಿಸುವಂತಿದೆ.

ಹಲವಾರು ದಿನಗಳಿಂದ ಪಟ್ಟಣದ ವಿವಿಧ ಬ್ಯಾಂಕುಗಳಲ್ಲಿ ಸ್ಥಳಿಯರು ಹಾಗೂ ಸುತ್ತಲಿನ ನೂರಾರು ಗ್ರಾಮಸ್ಥರು, ಮಕ್ಕಳೊಂದಿಗೆ, ವೃದ್ಧರೊಂದಿಗೆ ಬ್ಯಾಂಕಿನ ವಹಿವಾಟಿಗೆ ಆಗಮಿಸುತ್ತಿದ್ದು, ಬ್ಯಾಂಕ್ –ಎಟಿಮ್ ಗಳ ಹತ್ತಿರ ಖಾಸಗಿ ಆಸ್ಪತ್ರೆಗಳಿದ್ದು, ಆಸ್ಪತ್ರೆಗೂ ಕೂಡಾ ಸಾರ್ವಜನಿಕರು ಬರುವುದು ಸಾಮಾನ್ಯ, ಹಾಗಾಗಿ ಜನಸಂದಣಿಯನ್ನು ಹೆಚ್ಚಾಗಿ ಕಂಡುಬರುತ್ತಿದೆ, ಅಲ್ಲದೇ ದಿನನಿತ್ಯವೂ “ಮಾಸ್ಕ್ ಧರಿಸಿ-ಸಾಮಾಜಿಕ ಅಂತರ ಕಾಯ್ದುಕೊಳ್ಳಿ” ಎಂದು ಸರ್ಕಾರ, ತಾಲೂಕ ಆಡಳಿತ, ಪೊಲೀಸ್ ಸಿಬ್ಬಂದಿ ಪ್ರಾರಂಭದಿಂದಲೂ ತಿಳಿಹೇಳುತ್ತಾ ಬಂದಿದ್ದರೂ, ಬ್ಯಾಂಕಿಗೆ-ಎಟಿಮ್ ಗೆ ಬರುವ ಗ್ರಾಹಕರು ಮಾತ್ರ ಸಾಮಾಜಿಕ ಅಂತರವನ್ನು ಮರೆತಂತೆ ಕಾಣುತ್ತಿದೆ.

“ಬರುವ ಗ್ರಾಹಕರು ಎಟಿಮ್ ಮಶೀನ್-ಓಚರ್-ನಗದು ವ್ಯವಹಾರ-ಪೆನ್ನು-ಹೆಬ್ಬಟ್ಟಿನ ಗುರುತು-ಸಹಿ ಮೊದಲಾದವುಗಳನ್ನು ಪಾಲಿಸುವುದುಂಟು, ಇದರಿಂದ ಸಾಂಕ್ರಾಮಿಕತೆಯ ಭೀತಿಯನ್ನು ಬ್ಯಾಂಕಿನ ಸಿಬ್ಬಂದಿ ಅಷ್ಟೆ ಅಲ್ಲದೇ, ಬರುವ ಗ್ರಾಹಕರು ಎದುರಿಸುವಂತಾಗಿದೆ. ಇದಕ್ಕೆ ಬ್ಯಾಂಕಿನ ಆಡಳಿತ ಸಿಬ್ಬಂದಿ ಮುನ್ನಚ್ಚರಿಕೆ ವಹಿಸಬೇಕೊ ಅಥವಾ ಸುರಕ್ಷಾ ಸಿಬ್ಬಂದಿಯೊ ಅಥವಾ ಸ್ವತಃ ಗ್ರಾಹಕರೇ ಸಾಂಕ್ರಾಮಿಕತೆಯ ಕುರಿತು ಈಗಲಾದರೂ ಜಾಗೃತಿ ಹೊಂದಿ ಕೋವಿಡ್-19 ಮುಂಜಾಗ್ರತೆ ವಹಿಸಿಕೊಳ್ಳಬೇಕೊ “ ಎಂಬುದು ಪ್ರಜ್ಞಾವಂತ ನಾಗರಿಕರ ಹತಾಶೆಯ ಮಾತಾಗಿವೆ.