Wednesday, February 19, 2025
Homeಸುದ್ದಿಲಿಂಗಸಗೂರು:ಪಟ್ಟಣದಲ್ಲಿ ಆರ್‌ ಎಸ್‌ ಎಸ್‌ ನಿಂದ ಉಪಹಾರ- ಅಲ್ಪಾಹಾರ ವಿತರಣೆ!

ಲಿಂಗಸಗೂರು:ಪಟ್ಟಣದಲ್ಲಿ ಆರ್‌ ಎಸ್‌ ಎಸ್‌ ನಿಂದ ಉಪಹಾರ- ಅಲ್ಪಾಹಾರ ವಿತರಣೆ!

ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು

ಲಿಂಗಸಗೂರು: ರಾಜ್ಯಾದ್ಯಂತ ತಾಲೂಕ ಆಡಳಿತ, ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿ,ಕಂದಾಯ ಇಲಾಖೆ ಹಗಲಿರುಳೆನ್ನದೇ ಕೋವಿಡ್-‌19 ಸಾಂಕ್ರಾಮಿಕತೆಯನ್ನು ತಡೆಯಲು ಜನರ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಶ್ರಮಿಸುತ್ತಿದ್ದಾರೆ,ಅದರಲ್ಲಿ ನಮ್ಮ ರಾಯಚೂರು ಜಿಲ್ಲೆಯವರು ಪ್ರಮುಖರು ಎಂದರೆ ತಪ್ಪಾಗಲಾರದು.

ಗ್ರಾಮದ ಆಶಾ ಕಾರ್ಯಕರ್ತೆಯರಿಂದ ಜಿಲ್ಲಾಡಳಿತವರೆಗೂ ಸಾಂಕ್ರಾಮಿಕತೆಯ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಶ್ರಮಿಸುತ್ತಿದ್ದಾರೆ, ಈ ನಡುವೆ ಕೇಂದ್ರ ಸರ್ಕಾರ ಲಾಕ್‌ ಡೌನ್‌ ಹೇರಿರುವುದರಿಂದ ದಿನನಿತ್ಯದ ದುಡಿಮೆ,ಆದಾಯಕ್ಕೆ ಕತ್ತರಿ ಬಿದ್ದಂತಾಗಿ ದಿನದ ಅಗತ್ಯಸಾಮಾಗ್ರಿಗಳನ್ನು ಕೊಳ್ಳಲಾಗದ, ದುಡಿಮೆಯಿಲ್ಲದ, ಹಸಿವಿನ ಕುಟುಂಬಗಳನ್ನು ಗುರುತಿಸಿ ಹಾಲು-ನೀರು-ಉಪಹಾರ-ಅಲ್ಪಾಹಾರ ಪೂರೈಸಿ ಮಾನವೀಯತೆ ಮೆರೆಯುತ್ತಿದ್ದಾರೆ

ಪಟ್ಟಣದಲ್ಲಿ ಅನೇಕ ಸಮಾಜಮುಖಿ ಯುವಕರು ಕರ್ತ್ಯವ್ಯನಿರತ ಪೊಲೀಸ್‌ ಸಿಬ್ಬಂದಿಗೆ, ಆಸ್ಪತ್ರೆಯ ರೋಗಿಗಳಿಗೆ, ಬಡ ಕೂಲಿ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ, ಹಸಿದವರಿಗೆ ಆಸಕ್ತ ದಾನಿಗಳಿಂದ ದಿನಸಿ ಸಾಮಾಗ್ರಿಗಳ ಮತ್ತು ಊಟದ ವ್ಯವಸ್ತೆಯನ್ನು ಲಾಕ್‌ ಡೌನ್‌ ಆದಾಗಿನಿಂದ ಮಾಡಿಕೊಂಡು ಬಂದಿರುತ್ತಾರೆ, ಅವರಲ್ಲಿ ಆರ್‌ ಎಸ್‌ ಎಸ್‌ ಘಟಕದ ಪದಾಧಿಕಾರಿಗಳು-ಕಾರ್ಯಕರ್ತರೂ ಕೂಡಾ ಒಬ್ಬರು.

ಇವರು ಆಸಕ್ತ ದಾನಿಗಳಿಂದ ಅಡುಗೆಗೆ ಬೇಕಾದ ಅಗತ್ಯ ಸಾಮಾಗ್ರಿಗಳನ್ನು ಪಡೆದುಕೊಂಡು, ತಾವೇ ಸ್ವತಃ ಅಡುಗೆ ತಯಾರಿಸಿ ದಿನದ ಎರಡೂ ಹೊತ್ತು ಉಪಾಹಾರ-ಅಲ್ಪಾಹಾರವನ್ನು, ದಿನಕ್ಕೆ ಸುಮಾರು ಐದುನೂರು ಪೊಟ್ಟಣಗಳಷ್ಟು ವಿತರಿಸುತ್ತಾ ಬಂದಿದ್ದಾರೆ.

ಕಳೆದ ಎಪ್ರಿಲ್‌ 14 ರಿಂದ 19 ವರೆಗೆ ಲಿಂಗಸಗೂರಿನ ದಾನಿಗಳಿಗೆ ಧನ್ಯವಾದ ತಿಳಿಸುತ್ತಾ, ಅವರ ಹೆಸರುಗಳನ್ನು ಕ್ರಮವಾಗಿ, ಯೋಗ ಸಮೀತಿ-ಭಗೀರಥ ನಗರ, ಶ್ರೀ ಸಿದ್ದಗಂಗಾ ಕಂಪ್ಯೂಟರ್ಸ್‌, ಯಾದವಾಡ ರಕ್ತಸಂಗ್ರಹಣಾ ಕೇಂದ್ರ,ಕಿಶನ್‌ ರಾವ್‌ ಕುಲಕರ್ಣಿ ಕಸಬಾ ಲಿಂಗಸಗೂರು,ರುದ್ರಯ್ಯಸ್ವಾಮಿ ಹಿರೇಮಠ- ಪ್ರೋಫೇಷನಲ್ ಕೊರೀಯರ್ಸ್‌ ಮತ್ತು ಅನೇಕರು.

ಪಾಂಡುರಂಗ ಆಪ್ಟೆ, ಚನ್ನಬಸವ ಹಿರೇಮಠ, ಪರುಶುರಾಮ ಸಾವಜಿ, ಅಮರೇಶ ಚೆನ್ನಿ, ಅನಂತದಾಸ್‌, ಸೋಮಶೇಖರ್‌, ಅಜಯ ಕುಮಾರ ಶಿವಂಗಿ, ವಿಕ್ರಮ, ನರಸಿಂಹ, ವಿನಯಕುಮಾರ್‌ ಬಣ್ಣದ್‌,ಶ್ರೀಕಾಂತ ಪಲ್ಲೇದ, ಸುಧಾಕರ, ಕಿರಣ ಪಲ್ಲೇದ, ಜಗದೀಶ, ಅಜಯ, ಸೋಮು ನಾಯಕ್‌, ಹಾಗೂ ಹಲವರು ಈ ವಿತರಣಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಾಗಿದ್ದಾರೆ.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news