ಲಡಾಖ್: “ನಿಮು” ಎಂಬಲ್ಲಿ ಗಾಲ್ವಾನ್ ಕಣಿವೆಯ ಗಾಯಗೊಂಡ ಯೋಧರನ್ನು ಪಿಎಂ ಶ್ರೀ ನರೇಂದ್ರ ಮೋದಿ ಅವರು ಭೇಟಿಯಾದರು.

ಈ ಸಂದರ್ಭದಲ್ಲಿ, ಯೋಧರ ಸಾಮಾನ್ಯ ಆರೋಗ್ಯ ವಿಚಾರಿಸಿದ ಮಾನ್ಯ ಮೋದಿಯವರು, “ನಿಮ್ಮ ಸಾಹಸ ಶೌರ್ಯವನ್ನು ದೇಶದ ಯುವಕರಿಗೆ ಹಾಗೂ ಜನತೆಗೆ ತೋರಿಸಿದ್ದಿರಿ, ಅಲ್ಲದೇ ಇಡೀ ವಿಶ್ವವೇ ನಿಮ್ಮ ಶೌರ್ಯವನ್ನು ಹೊಗಳುತ್ತಿದೆ, ನಿಮ್ಮ ಶೌರ್ಯವನ್ನು ಎಷ್ಟು ಹೊಗಳಿದರೂ ಸಾಲದು, ನಿಮಗೆಲ್ಲರಿಗೂ ನನ್ನ ಪ್ರಣಾಮಗಳು, ನಿಮಗೆ ಜನ್ಮವನ್ನು ನೀಡಿ, ನಿಮ್ಮನ್ನು ಬೆಳೆಸಿ ದೇಶ ಸೇವೆಗೆ ಕಳುಸಿರುವುದಕ್ಕೆ ಆ ತಾಯಂದಿರಿಗೂ ಪ್ರಣಾಮಗಳು, ಬೇಗ ಗುಣ ಮುಖರಾಗಿರಿ” ಎಂಬ ಹಲವಾರು ಪದಗಳಿಂದ ಕೃತಜ್ಞತೆಯೊಂದಿಗೆ ಭಾರತದ ಯೋಧರ ಶೌರ್ಯವನ್ನು ಪ್ರಶಂಸಿಸಿದರು.
