ಸಂಕ್ಷಿಪ್ತ ಸುದ್ದಿ:
ಸುದ್ದಿ ಸಂಗ್ರಹ: ಸುರೇಶ ಹಿರೇಮಠ, ಲಿಂಗಸಗೂರು ವರದಿಗಾರರು.
ರಾಯಚೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ವೇಳೆ ರಾಯಚೂರು ಜಿಲ್ಲಾ ಕಾಂಗ್ರೆಸ್ ಪರವಾಗಿ ಆರೋಗ್ಯ ಹಸ್ತ ಕಿಟ್ ಗಳಿಗಾಗಿ ರಾಯಚೂರಿನ ಎಲ್ಲಾ ಮುಖಂಡರು ಸೇರಿ ₹9,00,000 ಚೆಕ್ ಗಳನ್ನು ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜಾಧ್ಯಕ್ಷ ಶ್ರೀ ಬಸನಗೌಡ ಬಾದರ್ಲಿ, ರಾಯಚೂರು ಗ್ರಾಮಾಂತರ ಶಾಸಕ ಶ್ರೀ ಬಸನಗೌಡ ದದ್ದಲ್, ಲಿಂಗಸೂರು ಶಾಸಕ ಶ್ರೀ ಡಿ.ಎಸ್. ಹೂಲಗೇರಿ, ಮಾಜಿ ಸಂಸದ ಶ್ರೀ ಬಿ.ವಿ. ನಾಯಕ್, ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ರವಿ ಬೋಸರಾಜು ಉಪಸ್ಥಿತರಿದ್ದರು.